ಬೆಳಗಾವಿ : ಪ್ರಯಾಣದ ಚಲನವಲನ (ಟ್ರಾವೆಲ್ ಹಿಸ್ಟರಿ) ಇಲ್ಲದೆ ಕಾರ್ಮಿಕರೊಬ್ಬನಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ.
ಬೆಳಗಾವಿ ತಾಲೂಕಿನ ಕಾಕತಿ ಕೈಗಾರಿಕಾ ಪ್ರದೇಶದ ಟೈರ್ ಸೋಲ್ ಕಾರ್ಖಾನೆಯ ಲ್ಯಾಬ್ನಲ್ಲಿ ಕಾರ್ಮಿಕನಿಗೆ ಸೋಂಕು ದೃಢಪಟ್ಟಿದೆ. ಟೈರ್ ಸೋಲ್ ಕಾರ್ಖಾನೆಗೆ ಬೆಂಗಳೂರು, ಹುಬ್ಬಳ್ಳಿ, ಚಿತ್ರದುರ್ಗ ಸೇರಿ ವಿವಿಧ ಭಾಗಗಳಿಂದ ಟೈರ್ ಆಮದು ಆಗುತ್ತವೆ.
ಪ್ರತಿ ಟೈರ್ ಸೋಲ್ ಮುಟ್ಟಿ ಟೈರ್ ಗುಣಮಟ್ಟ ಪರೀಕ್ಷೆ ಮಾಡುತ್ತಿದ್ದ ಈ ಕಾರ್ಮಿಕನಿಗೆ ಸೋಂಕು ತಗುಲಿದೆ. ಟೈರ್ನಿಂದ ಕೊರೊನಾ ಬಂದು ಕಾರ್ಮಿಕನಿಗೆ ವಕ್ಕರಿಸಿತಾ ಎಂಬ ಅನುಮಾನ ದಟ್ಟವಾಗಿದೆ.
ಸುರಕ್ಷತೆ ದೃಷ್ಟಿಯಿಂದ ಹತ್ತು ದಿನಗಳ ಹಿಂದೆ 50 ಕಾರ್ಮಿಕರ ಸ್ವ್ಯಾಬ್ ಟೆಸ್ಟ್ ಮಾಡಿಸಲಾಗಿತ್ತು. ಈ ಪೈಕಿ 38 ವರ್ಷದ ಕಾರ್ಖಾನೆ ಕಾರ್ಮಿಕನಿಗೆ ಕೊರೊನಾ ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಯೂನಿಟ್ ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಇಬ್ಬರು ನೌಕರರು, ಐದು ಜನ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದೆ.