ಬೆಳಗಾವಿ: ಕೊರೊನಾ ತಪಾಸಣೆ ವೇಳೆಯೇ ವ್ಯಕ್ತಿಯೊಬ್ಬ ಸೆಲ್ಫಿಗೆ ಪೋಸ್ ಕೊಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯ ಚೆಕ್ ಪೋಸ್ಟ್ ಬಳಿ ನಡೆದಿದೆ.
ಗೋವಾದಿಂದ ಹೈದರಾಬಾದ್ ಕಡೆಗೆ ಹೊರಟಿದ್ದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ವೈದ್ಯರು ತಪಾಸಣೆಗೆ ಒಳಪಡಿಸಿದ್ದರು. ಆ ವೇಳೆ ತಪಾಸಣೆಗೆ ಒಳಗಾದ ವ್ಯಕ್ತಿ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಯಿತು.
ವಿಶ್ವದಾದ್ಯಂತ ಮಹಾಮಾರಿ ಕೊರೊನಾ ಭೀತಿ ಮೂಡಿಸಿದೆ. ರೋಗ ನಿಯಂತ್ರಣಕ್ಕೆ ವೈದ್ಯ ಸಮುದಾಯ ಹಗಲಿರುಳು ಶ್ರಮಿಸುತ್ತಿದೆ. ಕಳೆದ ಮೂರು ದಿನಗಳಿಂದ ಪಣಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರನ್ನು ಗಡಿಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಇನ್ನು ವಿದೇಶಿ ಮಹಿಳೆ ಹಾಗೂ ಮಗುವನ್ನೂ ತಪಾಸಣೆಗೆ ಒಳಪಡಿಸಲಾಯಿತು. ಮೂರು ದಿನಗಳಲ್ಲಿ ವಿದೇಶದಿಂದ ಮರಳಿದ 18 ಜನರು ಸೇರಿ ಸಾವಿರಕ್ಕೂ ಅಧಿಕ ಜನರನ್ನು ತಪಾಸಣೆ ನಡೆಸಲಾಗಿದೆ.