ಬೆಳಗಾವಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ನಾಯಕರ ಕ್ಷೇತ್ರಗಳಲ್ಲೇ ಪಕ್ಷಕ್ಕೆ ಹಿನ್ನಡೆಯಾಗಿದೆ.
1. ಯಕ್ಸಂಬಾ ಪಟ್ಟಣ ಪಂಚಾಯತಿ:
ಪ್ರತಿಷ್ಠಿತ ಕಣವಾಗಿದ್ದ ಯಕ್ಸಂಬಾ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲಾಗಿದೆ. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಸ್ವಗ್ರಾಮದಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಒಟ್ಟು 17 ಸ್ಥಾನಗಳಿರುವ ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ 16 ಸ್ಥಾನಗಳನ್ನು ಪಡೆದರೆ, ಬಿಜೆಪಿ ಕೇವಲ 1 ಸ್ಥಾನ ಪಡೆಯಿತು. ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಸ್ವಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿತ್ತು.
2. ಚಿಂಚಲಿ ಪಟ್ಟಣ ಪಂಚಾಯತ್:
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಪ.ಪಂ.ನ 19 ಸ್ಥಾನಗಳಲ್ಲಿ ಕಾಂಗ್ರೆಸ್ - 9, ಬಿಜೆಪಿ - 5, ಪಕ್ಷೇತರ- 5 ಸ್ಥಾನಗಳನ್ನು ಪಡೆದಿದೆ. ಕಳೆದ ಬಾರಿ ಚಿಂಚಲಿ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇತ್ತು. ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಅವರಿಗೆ ಫಲಿತಾಂಶ ನಿರಾಸೆ ಮೂಡಿಸಿದೆ.
3. ಐನಾಪುರ ಪಟ್ಟಣ ಪಂಚಾಯತಿ
ಮಾಜಿ ಸಚಿವ, ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‌ಗೆ ಫಲಿತಾಂಶ ತೀವ್ರ ಮುಜುಗರ ತರಿಸಿದೆ. 19 ವಾರ್ಡ್‌ಗಳ ಪೈಕಿ 12 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೆ, ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆಯಿತು. ಇನ್ನೂ ಎರಡು ಕ್ಷೇತ್ರಗಳ ಮತ ಎಣಿಕೆ ಬಾಕಿ ಇದೆ.
4. ಅಥಣಿ ಪುರಸಭೆ:
27 ಸ್ಥಾನಗಳ ಪೈಕಿ 15ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ. ಬಿಜೆಪಿ-9, ಪಕ್ಷೇತರ-3 ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್ ಪಕ್ಷ ಪುರಸಭೆಯಲ್ಲಿ ಬಹುಮತ ಪಡೆದಿದ್ದು, ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿ ಆಗಿದೆ. ಬಿಜೆಪಿ ಶಾಸಕರು, ಮಾಜಿ ಉಪಮುಖ್ಯಮಂತ್ರಿ ಸವದಿ ಇದ್ದರೂ ಕಾಂಗ್ರೆಸ್ ಗೆಲುವು ಸಾಧಿಸಿದೆ.
5. ಹಾರೂಗೇರಿ ಪುರಸಭೆ:
23 ಸ್ಥಾನಗಳಿರುವ ಹಾರೂಗೇರಿ ಪುರಸಭೆಯಲ್ಲಿ ಬಿಜೆಪಿ- 15, ಕಾಂಗ್ರೆಸ್-7, ಪಕ್ಷೇತರ-1 ಸ್ಥಾನಗಳಲ್ಲಿ ಗೆಲುವು ದೊರೆತಿದೆ.
6. ಮುನವಳ್ಳಿ ಪುರಸಭೆ:
ಮುನವಳ್ಳಿ ಪುರಸಭೆಯಲ್ಲಿ 23 ಸ್ಥಾನಗಳಲ್ಲಿ ಕಾಂಗ್ರೆಸ್-11, ಬಿಜೆಪಿ-10, ಪಕ್ಷೇತರ-2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
7. ಎಂ.ಕೆ. ಹುಬ್ಬಳ್ಳಿ ಪ.ಪಂಚಾಯಿತಿ:
14 ಸ್ಥಾನಗಳನ್ನು ಹೊಂದಿರುವ ಎಂ.ಕೆ. ಹುಬ್ಬಳ್ಳಿ ಪ.ಪಂಚಾಯಿತಿಯಲ್ಲಿ 14 ಸ್ಥಾನಗಳನ್ನೂ ಪಡೆದು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
8. ಬೋರಗಾಂವ್ ಪಟ್ಟಣ ಪಂಚಾಯಿತಿ:
17 ಸ್ಥಾನಗಳನ್ನು ಹೊಂದಿರುವ ಬೋರಗಾಂವ್ ಪ.ಪಂಚಾಯಿತಿಯಲ್ಲಿ 17 ಸ್ಥಾನಗಳನ್ನೂ ಪಡೆದು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
9.ಅರಭಾವಿ ಪಟ್ಟಣ ಪಂಚಾಯಿತಿ:
16 ಸ್ಥಾನಗಳನ್ನು ಹೊಂದಿರುವ ಅರಭಾವಿ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷೇತರರು 11 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ 5 ಸ್ಥಾನಗಳನ್ನು ಪಡೆದಿದೆ.
10. ಕಲ್ಲೋಳಿ ಪಟ್ಟಣ ಪಂಚಾಯಿತಿ:
16 ಸ್ಥಾನಗಳನ್ನು ಹೊಂದಿರುವ ಕಲ್ಲೋಳಿ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷೇತರರು 11 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ 5 ಸ್ಥಾನಗಳನ್ನು ಪಡೆದಿದೆ.
11. ನಾಗನೂರ ಪಟ್ಟಣ ಪಂಚಾಯಿತಿ:
16 ಸ್ಥಾನಗಳನ್ನು ಹೊಂದಿರುವ ನಾಗನೂರ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷೇತರರು ಸಂಪೂರ್ಣ 16 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದ್ದಾರೆ.
12. ಶೇಡಬಾಳ ಪಟ್ಟಣ ಪಂಚಾಯಿತಿ:
16 ಸ್ಥಾನಗಳನ್ನು ಹೊಂದಿರುವ ಶೇಡಬಾಳ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 11 ಸ್ಥಾನಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಇನ್ನುಳಿದಂತೆ ಕಾಂಗ್ರೆಸ್-2, ಜೆಡಿಎಸ್-1, ಪಕ್ಷೇತರರು-2 ಸ್ಥಾನಗಳನ್ನು ಪಡೆದಿದ್ದಾರೆ.
13. ಉಗಾರ್‌ಖುರ್ದ್ ಪುರಸಭೆ:
23 ಸ್ಥಾನಗಳನ್ನು ಹೊಂದಿರುವ ಉಗಾರ್‌ಖುರ್ದ್ ಪುರಸಭೆಯಲ್ಲಿ ಕಾಂಗ್ರೆಸ್ 11 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ-7, ಪಕ್ಷೇತರರು 5 ಸ್ಥಾನಗಳಲ್ಲಿ ಗೆದ್ದಿದ್ದಾರೆ.
14. ಕಿತ್ತೂರು ಪಟ್ಟಣ ಪಂಚಾಯಿತಿ:
18 ಸ್ಥಾನಗಳನ್ನು ಹೊಂದಿರುವ ಕಿತ್ತೂರು ಪಟ್ಟಣ ಪಂಚಾಯಿತಿಯಲ್ಲಿ ಬಜೆಪಿ- 9, ಕಾಂಗ್ರೆಸ್-5 ಹಾಗು ಪಕ್ಷೇತರರು 5 ಸ್ಥಾನಗಳನ್ನು ಪಡೆದಿದ್ದಾರೆ.
15. ಐನಾಪುರ ಪಟ್ಟಣ ಪಂಚಾಯಿತಿ:
19 ಸ್ಥಾನಗಳನ್ನು ಹೊಂದಿರುವ ಐನಾಪುರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ 13, ಬಜೆಪಿ 6 ಸ್ಥಾನಗಳಲ್ಲಿ ಗೆದ್ದಿದ್ದಾರೆ.
16. ಮುಗಳಖೋಡ ಪುರಸಭೆ:
23 ಸ್ಥಾನಗಳನ್ನು ಹೊಂದಿರುವ ಮುಗಳಖೋಡ ಪುರಸಭೆಯಲ್ಲಿ ಬಿಜೆಪಿ 13, ಪಕ್ಷೇತರರು 6 ಹಾಗು ಕಾಂಗ್ರೆಸ್ 4 ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ನಿಗದಿ ಗ್ರಾ.ಪಂ ಉಪಚುನಾವಣೆ: ತಂದೆ ನಿಧನದಿಂದ ತೆರವಾದ ಸ್ಥಾನಕ್ಕೆ ಮಗ ಆಯ್ಕೆ