ETV Bharat / city

ಬೆಲೆ ಏರಿಕೆಗೆ ಖಂಡನೆ : ಕೇಂದ್ರದ ವಿರುದ್ಧ ಮಹಿಳಾ ಕಾಂಗ್ರೆಸ್ ವಿನೂತನ ಪ್ರತಿಭಟನೆ

ಎಲ್ಲ ತರಕಾರಿ, ಎಣ್ಣೆ, ಗ್ಯಾಸ್ ಹಾಗೂ ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗುತ್ತಿವೆ. ಯಾವ ಪದಾರ್ಥಗಳ ಬೆಲೆಯೂ ಕಡಿಮೆ ಆಗುತ್ತಿಲ್ಲ. ಇದನ್ನ ಬಗೆಹರಿಸುವುದು ಬಿಟ್ಟು, ಸಂವಿಧಾನ ಬಾಹಿರ ಕಾನೂನು ಜಾರಿಗೆ ತರುತ್ತಿದ್ದೀರಿ..

Congress Protest In Belagavi
ಬೆಲೆ ಏರಿಕೆ ವಿರೋಧಿಸಿ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ
author img

By

Published : Dec 22, 2021, 2:38 PM IST

ಬೆಳಗಾವಿ : ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ತರಕಾರಿ ಮಾರಾಟ ಮಾಡಿ ಅಣಕು ಪ್ರದರ್ಶನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ಬೆಲೆ ಏರಿಕೆ ವಿರೋಧಿಸಿ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ : ಡಿಕೆಶಿ ಸಾಥ್​​

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ನಡೆದ ಮಹಿಳಾ ಘಟಕದ ಕಾಂಗ್ರೆಸ್ ಕಾರ್ಯಕರ್ತರ ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತರಕಾರಿ ಮಾರಾಟ ಮಾಡುವ ಗಾಡಿಯನ್ನು ತಳ್ಳಿಕೊಂಡು ಪ್ರತಿಭಟನೆಗೆ ಸಾಥ್ ನೀಡಿದರು‌.

ಈ ವೇಳೆ ಮಹಿಳಾ ಕಾರ್ಯಕರ್ತರು ಬಿಜೆಪಿ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಬಗೆಯ ತರಕಾರಿ, ದಿನಸಿ ಪದಾರ್ಥಗಳನ್ನು ತಂದಿಟ್ಟು ರಸ್ತೆಯಲ್ಲಿಯೇ ತರಕಾರಿ ಮಾರಾಟ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದರು.

Congress Protest In Belagavi
ತರಕಾರಿ ಮಾರಾಟ ಮಾಡಿ ಸರ್ಕಾರದ ವಿರುದ್ಧ ಕಿಡಿ

ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಬೆಲೆ ಏರಿಕೆ ಖಂಡಿಸಿ ನಮ್ಮ ಮಹಿಳಾ ಕಾರ್ಯಕರ್ತರು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಮ್ಮ ಯುವಕರು ಉದ್ಯೋಗ ಕೊಡಿ, ಇಲ್ಲ 9 ಸಾವಿರ ರೂ. ನಿರುದ್ಯೋಗ ಭತ್ಯೆ ಕೊಡಿ ಎಂದು ಹೋರಾಟ ಮಾಡಿದ್ರು.

ಎಲ್ಲ ತರಕಾರಿ, ಎಣ್ಣೆ, ಗ್ಯಾಸ್ ಹಾಗೂ ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗುತ್ತಿವೆ. ಯಾವ ಪದಾರ್ಥಗಳ ಬೆಲೆಯೂ ಕಡಿಮೆ ಆಗುತ್ತಿಲ್ಲ. ಇದನ್ನ ಬಗೆಹರಿಸುವುದು ಬಿಟ್ಟು, ಸಂವಿಧಾನ ಬಾಹಿರ ಕಾನೂನು ಜಾರಿಗೆ ತರುತ್ತಿದ್ದೀರಿ.

ನಮಗೆ ಪರಿಹಾರ ಕೊಡಿ ಎಂದು ಮಹಿಳೆಯರು ಎಂದು ಹೋರಾಟ ಮಾಡಿದ್ರು. ಬೆಲೆ ಏರಿಕೆ ಕಡಿಮೆ ಮಾಡುವ ಚಿಂತನೆ ಮಾಡಿ. ರೈತರಿಗೆ ಪರಿಹಾರ ಕೊಡಿ, ಮನೆ ಕೊಡಿ ಎಂದು ಮಹಿಳಾ ಘಟಕ ಹೋರಾಟ ಮಾಡುತ್ತಿದೆ. ಬಿಜೆಪಿ ಸರ್ಕಾರ ಹೆಣ್ಣು ಮಕ್ಕಳ ನೋವು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಡಿಕೆಶಿ ಸಲಹೆ ನೀಡಿದರು.

ಇದನ್ನೂ ಓದಿ: ರಾಜ್ಯದಲ್ಲಿ ಎಂಇಎಸ್​​ ನಿಷೇಧಕ್ಕೆ ಆಗ್ರಹ: ಕನ್ನಡಪರ ಸಂಘಟನೆಗಳಿಂದ ಡಿ. 31ರಂದು ಕರ್ನಾಟಕ ಬಂದ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.