ಬೆಳಗಾವಿ: ಗೋಕಾಕ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪೊಲೀಸ್ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ಒಂದೇ ದೇಶ ಒಂದೇ ಕರೆ ಸಂಖ್ಯೆ 112 ವಾಹನಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಎಸ್‍ಪಿ ಲಕ್ಷ್ಮಣ ನಿಂಬರಗಿ ಚಾಲನೆ ನೀಡಿದರು.
ಓದಿ: ರಾಜ್ಯದಲ್ಲಿಂದು 573 ಮಂದಿಗೆ ಕೋವಿಡ್ ದೃಢ: 4 ಸೋಂಕಿತರು ಬಲಿ
ಇದೇ ವೇಳೆ ಗೋಕಾಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಬಸವೇಶ್ವರ ವೃತ್ತದಿಂದ, ಸಂಗೊಳ್ಳಿ ರಾಯಣ್ಣ ಸರ್ಕಲ್ ಮುಖಾಂತರ ನಗರದ ಪ್ರಮುಖ ವೃತ್ತದಲ್ಲಿ ಜಾಥಾ ನಡೆಸಲಾಯಿತು. ಈ ವೇಳೆ ಮಾತನಾಡಿದ ಎಸ್‍ಪಿ ಲಕ್ಷ್ಮಣ ನಿಂಬರಗಿ, ಅಪಘಾತ ಸಂಭವಿಸಿದ ವೇಳೆ ಒಂದೊಂದು ಸಮಯದಲ್ಲಿ, ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಲಭ್ಯವಿರುವುದಿಲ್ಲ. ಅದೇ ಕಾರಣಕ್ಕಾಗಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಲು 112 ಸಂಖ್ಯೆಗೆ ಕರೆ ಮಾಡಿದರೆ ಸಾಕು. ಕೆಲವೇ ಕ್ಷಣದಲ್ಲಿ ತಾವಿದ್ದ ಸ್ಥಳಕ್ಕೆ 112 ವಾಹನ ಜೊತೆ ಸಿಬ್ಬಂದಿ ತಮ್ಮನ್ನು ರಕ್ಷಿಸಲು ಬರಲಿದ್ದಾರೆ ಎಂದರು.
ಇದಲ್ಲದೇ ತೊಂದರೆಯಲ್ಲಿರುವ ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯಲ್ಲಿರುವಾಗ ತಕ್ಷಣ ಸ್ಪಂದಿಸುವ ಸಲುವಾಗಿ ರಾಜ್ಯ ಸರ್ಕಾರ ಒಂದೇ ದೇಶ ಒಂದೇ ರಸ್ತೆ ಕರೆ ಸಂಖ್ಯೆ 112 ಈ ಸೇವೆಯನ್ನು ಜಾರಿಗೆ ತಂದಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.