ETV Bharat / city

ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ.. ಗೋಕಾಕ್‌ನ ಬಿಜೆಪಿ ನಾಯಕ ಅಶೋಕ್‌ ಪೂಜಾರಿ ನಡೆ ಏನು? - Karnataka political development

ಗೋಕಾಕ್​​ನಲ್ಲಿ ಸರ್ವಾಧಿಕಾರಿ ಮನೋಭಾವನೆ ಹೋಗಲಾಡಿಸಲು ಹೋರಾಟ ಮಾಡುತ್ತಿದ್ದೇನೆ. ಮುಂದೆಯೂ ಹೋರಾಡುತ್ತೇನೆ. ಜನರ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.

bjp-leader-ashok-pujari-like-to-join-congress
author img

By

Published : Oct 12, 2019, 5:24 PM IST

ಬೆಳಗಾವಿ: ಹಲವು ವರ್ಷಗಳಿಂದ ಗೋಕಾಕ್​​ನಲ್ಲಿರುವ ಸರ್ವಾಧಿಕಾರಿ ಮನೋಭಾವನೆ ಹೋಗಲಾಡಿಸಲು ಹೋರಾಟ ಮಾಡುತ್ತಾ ಬಂದಿದ್ದೇನೆ. ಅದಕ್ಕಾಗಿ ಮುಂದೆಯೂ ಹೋರಾಡುತ್ತೇನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರ ಇಚ್ಛೆಯಂತೆ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇನೆ. ಪ್ರಸ್ತುತ ನನ್ನ ಹಿಂಬಾಲಕರು, ಅಭಿಮಾನಿಗಳಿಗೆ ಗೊಂದಲ ಬೇಡ. ಅ.16 ರಿಂದ 30ರವರೆಗೆ ಗೋಕಾಕ್​​ನ ಪ್ರತಿಯೊಂದು ಭಾಗಕ್ಕೂ ಭೇಟಿ ನೀಡುತ್ತೇನೆ. ಮತದಾರರೊಂದಿಗೆ ಚರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸುತ್ತೇನೆ. ನವೆಂಬರ್ ಮೊದಲ ವಾರದಲ್ಲಿ ಸಭೆ ಹಮ್ಮಿಕೊಳ್ಳಲಿದ್ದು, ಅಂದು ತೆಗೆದುಕೊಳ್ಳುವ ನಿರ್ಣಯದ ಮೇಲೆ ನನ್ನ ರಾಜಕೀಯ ನಡೆ ಇರುತ್ತದೆ ಎಂದರು.

ಬಿಜೆಪಿ ಮುಖಂಡ ಅಶೋಕ ಪೂಜಾರಿ

ಇತ್ತ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವ ಲಕ್ಷಣ ದಟ್ಟವಾದ ಹಿನ್ನೆಲೆ ಇಲ್ಲಿನ ಬಿಜೆಪಿ ನಾಯಕರಿಗೆ ತಳಮಳ ಪ್ರಾರಂಭವಾಗಿತ್ತು. ಗೋಕಾಕ್ ತಾಲೂಕಿನಲ್ಲಿ ಅನೇಕ ವರ್ಷಗಳಿಂದ ಪಕ್ಷ ಸಂಘಟಿಸಿಕೊಂಡು ಬಂದಿರುವ ಅಶೋಕ್ ಪೂಜಾರಿ ಪಕ್ಷ ತೊರೆಯುವ ಚಿಂತನೆ ನಡೆಸಿದ್ದು, ನಿಗಮ ಮಂಡಳಿ ಸ್ಥಾನ ನೀಡಿದ್ದರೂ ಸ್ವೀಕರಿಸದೆ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

Intro:ಕ್ಷೇತ್ರದ ಜನರ ಇಚ್ಛೆಯಂತೆ ನಿರ್ಧಾರ ಕೈಗೊಳ್ಳುವೆ : ಅಶೋಕ್ ಪುಜಾರಿ

ಬೆಳಗಾವಿ : ಕಳೆದ ಹತ್ತಾರು ವರ್ಷಗಳಿಂದ ಗೋಕಾಕ್ ನಲ್ಲಿರುವ ಸರ್ವಾಧಿಕಾರ ಮನೋಭಾವಣೆಯನ್ನು ಹೋಗಲಾಡಿಸಲು ಹೋರಾಟ ಮಾಡುತ್ತಾ ಬಂದಿದ್ದು. ಮುಂದೆಯೂ ನನ್ನ ಹೋರಾಟ ಸರ್ವಾಧಿಕಾರದ ವಿರುದ್ಧ ಆಗಿದ್ದು ಕ್ಷೇತ್ರದ ಜನರ ಇಚ್ಛೆಯಂತೆ ನನ್ನ ಮುಂದಿನ ರಾಜಕೀಯ ನಿರ್ಧಾರ ಮಾಡುತ್ತೇನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.

Body:ಇಂದು ಗೋಕಾಕ್ ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಸರ್ವಾಧಿಕಾರತ್ವದ ವಿರುದ್ಧ ನನ್ನ ಹೋರಾಟವಿದ್ದು ಮುಂದೆಯೂ ಇರುತ್ತದೆ. ಪ್ರಸ್ತುತ ರಾಜಕೀಯದ ಬಗ್ಗೆ ಹಿಂಬಾಲಕರಿಗೆ ಮತ್ತು ಅಭಿಮಾನಿಗಳಿಗೆ ಯಾವುದೇ ಗೊಂದಲ ಬೇಕಿಲ್ಲ, ಅಕ್ಟೋಬರ್ 16 ರಿಂದ 30 ರವರೆಗೆ ಗೋಕಾಕ್ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಭಾಗಕ್ಕೆ ಬೇಟಿ ನೀಡಿ, ಮತದಾರರೊಂದಿಗೆ ಚರ್ಚಿಸಿ ಅವರ ಅನಿಸಿಕೆಗಳನ್ನು ಸಂಗ್ರಹಿಸಿ ನವೆಂಬರ್ ಮೊದಲನೇ ವಾರದಲ್ಲಿ ಸಭೆ ಹಮ್ಮಿಕೊಂಡ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಮೇಲೆ ನನ್ನ ರಾಜಕೀಯ ನಡೆ ಇರುತ್ತದೆ ಎಂದರು.

Conclusion:ಇತ್ತ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವ ಲಕ್ಷಣ ದಟ್ಟವಾದ ಕಾರಣ ಹಳೆ ಬಿಜೆಪಿಗರಿಗೆ ತಳಮಳ ಪ್ರಾರಂಭವಾಗಿತ್ತು. ಗೋಕಾಕ್ ತಾಲೂಕಿನಲ್ಲಿ ಅನೇಕ ವರ್ಷಗಳಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ಅಶೋಕ್ ಪುಜಾರಿ ಸಧ್ಯ ಪಕ್ಷ ತೊರೆಯುವ ಚಿಂತನೆ ನಡೆಸಿದ್ದು ನಿಗಮ ಮಂಡಳಿ ನೀಡಿದ್ದರು ಅದನ್ನು ಪಡೆಯದೆ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುವ ಸಾಧ್ಯತೆಗಳಿವೆ.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.