ಚಿಕ್ಕೋಡಿ: ಬುರ್ಖಾ ಧರಿಸಿ ರಾತ್ರಿ ಬೈಕ್ ಕಳ್ಳತನ ಮಾಡಿದ ಘಟನೆ ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ.
ಯಡೂರು ಗ್ರಾಮದ ಶಿವನಾಂದ ದೀವಟೆ ಎಂಬುವವರು ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು, ಸುಮಾರು ರಾತ್ರಿ 2 ಗಂಟೆಗೆ ಬುರ್ಖಾ ಧರಿಸಿ ಬಂದ 3 ಜನ ಖದೀಮರು, ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಪ್ರಕರಣ ಅಂಕಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.