ETV Bharat / city

ಕೇಂದ್ರದ ವಿರುದ್ಧ ಸಿಡಿದೆದ್ದ ರೈತರಿಂದ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ.. - ಕೇಂದ್ರದ ವಿರುದ್ಧ ಬೆಳಗಾವಿ ರೈತರ ಪ್ರತಿಭಟನೆ

ಇಂದು ಬೆಳಗಾವಿಯಲ್ಲಿ ಹೈನುಗಾರಿಕೆ ನಡೆಸುವ ಸಾವಿರಾರು ರೈತರು ಬೀದಿಗೆ ಬಂದಿದ್ದರು. ಸ್ವತಃ ತಮ್ಮ ಎಮ್ಮೆಗಳನ್ನು ರಸ್ತೆಗೆ ಇಳಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೇಂದ್ರದ ವಿರುದ್ಧ ಸಿಡಿದೆದ್ದ ರೈತರು
author img

By

Published : Oct 14, 2019, 11:38 PM IST

ಬೆಳಗಾವಿ: ನಮ್ಮ ದೇಶದ ಅದೆಷ್ಟೋ ಕುಟುಂಬಗಳಿಗೆ ಪ್ರತಿನಿತ್ಯದ ಆಧಾರ ಸ್ತಂಭವಾಗಿರುವ ಹೈನುಗಾರಿಕೆ ಉದ್ಯಮಕ್ಕೆ ಈಗ ಒಂದು ಕಂಟಕ ಎದುರಾಗಿದೆ. ಪೌಷ್ಟಿಕಾಂಶ ಹೊಂದಿದ ಹಾಲನ್ನು ದೇಶದ ಜನರಿಗೆ ನೀಡುತ್ತಿರುವ ರೈತ ವರ್ಗ ಈಗ ಬೀದಿಗೆ ಬಂದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ರೈತರ ಹಿತ ಕಾಪಾಡುವಂತೆ ಸರ್ಕಾರದ ಮುಂದೆ ಕೈಚಾಚುವಂತಾಗಿದೆ ಇವರ ಬಾಳು.

ಕೇಂದ್ರದ ವಿರುದ್ಧ ಸಿಡಿದೆದ್ದ ರೈತರು..

ಇಂದು ಬೆಳಗಾವಿಯಲ್ಲಿ ಹೈನುಗಾರಿಕೆ ನಡೆಸುವ ಸಾವಿರಾರು ರೈತರು ಬೀದಿಗೆ ಬಂದಿದ್ದರು. ಸ್ವತಃ ತಮ್ಮ ಎಮ್ಮೆಗಳನ್ನು ರಸ್ತೆಗೆ ಇಳಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಮಾಡಲು ಹೊರಟಿರುವ ಆ ಒಂದು ಕೆಟ್ಟ ನಿರ್ಧಾರಕ್ಕೆ ಇಡೀ ರೈತ ಸಮೂಹ ತಿರುಗಿ ಬಿದ್ದಿದೆ. ಸಮಗ್ರ ಆರ್ಥಿಕ ಸಹಭಾಗಿತ್ವದಲ್ಲಿ ವಿದೇಶದಿಂದ ಹೈನುಗಾರಿಕೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು. ಇದರಿಂದ ಕೇಂದ್ರಕ್ಕೆ ಯಾವ ಲಾಭವೋ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ಹೈನುಗಾರಿಕೆ ಮಾಡುವವರಿಗೆ ದೊಡ್ಡ ಹೊಡೆತ ಬೀಳಲಿದೆ ಎಂಬುದು ರೈತ ಹೋರಾಟಗಾರರ ವಾದ.

ಕೇಂದ್ರ ಸರ್ಕಾರ ತೆರಿಗೆ ರಹಿತ ಕ್ಷೀರ ಉತ್ಪನ್ನ ಆಮದು ಮಾಡುಕೊಳ್ಳುವ ಚಿಂತನೆ ನಡೆಸಿದೆ. ಈ ಒಪ್ಪಂದ ಜೊತೆ ವಿದೇಶಿ ಆರ್ಥಿಕ ನೀತಿ ಒಪ್ಪಂದ ತಡೆಯುವಂತೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ‌ ಹಮ್ಮಿಕೊಂಡಿತ್ತು. ಕೇಂದ್ರದ ಈ ನಿರ್ಧಾರದಿಂದ ದೇಶದಲ್ಲಿ ಸ್ವದೇಶಿ ಹೈನುಗಾರಿಕೆಗೆ ದೊಡ್ಡ ಪೆಟ್ಟು ಬೀಳುವುದರ ಜೊತೆಗೆ ಹೈನುಗಾರಿಕೆ ನಂಬಿ ಜೀವನ ನಡೆಸುವ ರೈತ ಸಮುದಾಯ ಬೀದಿಗೆ ಬರುತ್ತದೆ ಎಂದು ರೈತರು ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆ ಕಾವು ಎಷ್ಟಾಗಿತ್ತು ಎಂದರೆ ಜಿಲ್ಲೆಯ ನಾನಾ ಭಾಗಗಳಿಂದ ಬಂದ ರೈತರು ತಮ್ಮ ಆಕ್ರೋಶ ಹೊರ ಹಾಕಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಜೊತೆಗೆ ನಡು ರಸ್ತೆಯಲ್ಲಿ ಎಮ್ಮೆಯ ಹಾಲು ಕರೆದು ಪುನಾ ಎಮ್ಮೆಯ ಮೇಲೆ ಹಾಲು ಚೆಲ್ಲುವ ಮುಖಾಂತರ ಕೇಂದ್ರ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರೆಯಬೇಕು ಎಂಬ ಆಗ್ರಹ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಮಾಡ ಹೊರಟಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಲ್ಲಿ ವಿದೇಶದಿಂದ ಹೈನುಗಾರಿಕೆ ಉತ್ಪನ್ನ ಆಮದು ಪ್ರಕ್ರಿಯೆಯನ್ನು ಮೊನ್ನೆ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ವಿರೋಧ ವ್ಯಕ್ತಪಡಿಸಿ, ಕೇಂದ್ರ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.

Intro:ಕೇಂದ್ರದ ವಿರುದ್ಧ ಸಿಡಿದೆದ್ದ ರೈತರು ಬೆಳಗಾವಿಯಲ್ಲಿ ನಡೆಯಿತು ಬೃಹತ್‌ ಪ್ರತಿಭಟನೆ

ಬೆಳಗಾವಿ : ಹೈನುಗಾರಿಕೆ ನಮ್ಮ ದೇಶದ ಅದೆಷ್ಟೋ ಕುಟುಂಬಗಳಿಗೆ ಪ್ರತಿನಿತ್ಯದ ಆಧಾರ ಸ್ಥಂಭವಾಗಿರುವ ಈ ಉದ್ಯಮಕ್ಕೆ ಈಗ ಒಂದು ಕಂಟಕ ಎದುರಾಗಿದೆ. ಪೌಷ್ಟಿಕಾಂಶ ಹೊಂದಿದ ಹಾಲನ್ನು ದೇಶದ ಜನರಿಗೆ ನೀಡುತ್ತಿರುವ ರೈತ ವರ್ಗ ಈಗ ಬೀದಿಗೆ ಬಂದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ರೈತರ ಹಿತ ಕಾಪಾಡುವಂತೆ ಸರ್ಕಾರದ ಮುಂದೆ ಕೈಚಾಚುವಂತಾಗಿದೆ ಇವರ ಬಾಳು.

ಹೌದು ಇಂದು ಬೆಳಗಾವಿಯಲ್ಲಿ ಹೈನುಗಾರಿಕೆ ನಡೆಸುವ ಸಾವಿರಾರು ರೈತರು ಬೀದಿಗೆ ಬಂದಿದ್ದರು. ಸ್ವತಃ ತಮ್ಮ ಎಮ್ಮೆಗಳನ್ನು ರಸ್ತೆಗೆ ಇಳಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಮಾಡಲು ಹೊರಟಿರುವ ಆ ಒಂದು ಕೆಟ್ಟ ನಿರ್ಧಾರಕ್ಕೆ ಇಡೀ ರೈತ ಸಮೂಹ ತಿರುಗಿ ಬಿದ್ದಿದೆ. ಹಾಗಾದ್ರೆ ಯಾವುದು ಆ ನಿರ್ಧಾರ ಅಂದರೆ. ಸಮಗ್ರ ಆರ್ಥಿಕ ಸಹಭಾಗಿತ್ವದಲ್ಲಿ ವಿದೇಶದಿಂದ ಹೈನುಗಾರಿಕೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು. ಇದರಿಂದ ಕೇಂದ್ರಕ್ಕೆ ಯಾವ ಲಾಭ ಗೊತ್ತಿಲ್ಲ ಆದರೆ ರಾಜ್ಯದಲ್ಲಿ ಹೈನುಗಾರಿಕೆ ಮಾಡುವವರಿಗೆ ದೊಡ್ಡ ಹೊಡೆತ ಬೀಳಲಿದೆ ಎಂಬುದು ರೈತ ಹೋರಾಟಗಾರರ ವಾದ.

Body:ಕೇಂದ್ರ ಸರಕಾರ ತೆರಿಗೆ ರಹಿತ ಕ್ಷೀರ ಉತ್ಪನ್ನ ಆಮದು ಮಾಡುಕೊಳ್ಳುವ ಚಿಂತನೆ ನಡೆಸಿದೆ. ಈ ಒಪ್ಪಂದ ಜೊತೆ ವಿದೇಶ ಆರ್ಥಿಕ ನೀತಿ ಒಪ್ಪಂದ ತಡೆಯುವಂತೆ ಜಿಲ್ಲಾ ಸಹಕಾರ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ‌
ಹಮ್ಮಿಕೊಂಡಿತ್ತು. ಕೇಂದ್ರದ ಈ ನಿರ್ಧಾರದಿಂದ ದೇಶದಲ್ಲಿ ಸ್ವದೇಶಿ ಹೈನಿಗಾರಿಕೆಗೆ ದೊಡ್ಡ ಪೆಟ್ಟು ಬೀಳುವುದರ ಜೊತೆಗೆ ಹೈನುಗಾರಿಕೆ ನಂಬಿ ಜೀವನ ನಡೆಸುವ ರೈತ ಸಮುದಾಯ ಬೀದಿಗೆ ಬರುತ್ತದೆ ಎಂದು ರೈತರು ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆ ಕಾವು ಎಷ್ಟಾಗಿತ್ತು ಎಂದರೆ ಜಿಲ್ಲೆಯ ನಾನಾ ಭಾಗಗಳಿಂದ ಬಂದ ರೈತರು ತಮ್ಮ ಆಕ್ರೋಶ ಹೊರ ಹಾಕಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಜೊತೆಗೆ ನಡು ರಸ್ತೆಯಲ್ಲಿ ಎಮ್ಮೆಯ ಹಾಲು ಕರಿದು ಪುನಃ ಎಮ್ಮೆಯ ಮೇಲೆ ಹಲು ಚೆಲ್ಲುವ ಮುಖಾಂತರ ಕೇಂದ್ರ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರೆಯಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.

Conclusion:ಇಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಮಾಡ ಹೊರಟಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಲ್ಲಿ ವಿದೇಶದಿಂದ ಹೈನುಗಾರಿಕೆ ಉತ್ಪನ್ನ ಆಮದು ಪ್ರಕ್ರಿಯೆಯನ್ನು ಮೊನ್ನೆ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ವಿರೋಧ ವ್ಯಕ್ತಪಡಿಸಿ. ಕೇಂದ್ರ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.

ಒಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಲಾದರು ಎಚ್ಚೆತ್ತುಕೊಂಡು ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಹೈನುಗಾರಿಕೆ ‌ನಂಬಿ ಬದುಕುತ್ತಿರುವ ನಮ್ಮ ದೇಶದಲ್ಲಿ ಅದಕ್ಕೆ ಪೂರಕವಾಗುವ ವ್ಯವಸ್ಥೆ ರೂಪಿಸುವ ಅಗತ್ಯತೆ ಇದೆ ಎಂಬುದು ಎಲ್ಲರ ಆಶಯ.

ಬೈಟ್ : ಸೋಮಲಿಂಗಪ್ಪ ಮುಗಳಿ ( ಕೆಎಮ್ಎಫ್ ಬೆಳಗಾವಿ ಸದಸ್ಯ )

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.