ಬೆಳಗಾವಿ: ಇಲ್ಲಿನ ಹೊನಗಾದ ಎಂಎಸ್ಪಿಎಲ್ ಹಾಗೂ ಬೆಳಗಾವಿ ಆಕ್ಸಿಜನ್ ಘಟಕಗಳಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಭೇಟಿ ನೀಡಿ ಪರಿಶೀಲಿಸಿದರು.
ಓದಿ: ರಂಜಾನ್ ಆಚರಣೆ: ಗುಂಪು ಚದುರಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆ
ಘಟಕಗಳ ಸಂಗ್ರಹಣೆ ಸಾಮರ್ಥ್ಯ ಹಾಗೂ ಸಾಗಾಣಿಕೆ ಕುರಿತು ಚರ್ಚೆ ನಡೆಸಿದರು. ಬೆಳಗಾವಿ ಜಿಲ್ಲೆಗೆ ಹಂಚಿಕೆಯಾಗಿರುವ ಆಕ್ಸಿಜನ್ ಸಮರ್ಪಕ ದಾಸ್ತಾನು ಮತ್ತು ಸಕಾಲಕ್ಕೆ ಸಂಬಂಧಿಸಿದ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಒಟ್ಟಾರೆ ಆಕ್ಸಿಜನ್ ದಾಸ್ತಾನು ಲಭ್ಯತೆ, ಪ್ರತಿದಿನದ ಪೂರೈಕೆ ಹಾಗೂ ದಿನದ ಕೊನೆಯಲ್ಲಿ ಇರುವ ಶಿಲ್ಕುಗಳ ಮೇಲೆ ನೋಡಲ್ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು ಎಂದರು.
ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಆಕ್ಸಿಜನ್ ಅತ್ಯಗತ್ಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಎರಡೂ ಘಟಕಗಳ ಮುಖ್ಯಸ್ಥರ ಜತೆ ಕೂಡ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಘಟಕಗಳ ಸಂಗ್ರಹಣಾ ಸಾಮರ್ಥ್ಯ ಮತ್ತು ಉತ್ಪಾದನೆ ಕುರಿತು ಮಾಹಿತಿಯನ್ನು ಪಡೆದುಕೊಂಡರು.