ETV Bharat / city

ಬೆಳಗಾವಿ ಅಧಿವೇಶನ: ವಿಧಾನಸಭೆಯಲ್ಲಿ 4 ಪ್ರಮುಖ ವಿಧೇಯಕಗಳಿಗೆ ಅಂಗೀಕಾರ - ಪ್ರಮುಖ ಮಸೂದೆಗಳ ಅಂಗೀಕಾರ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಸೂದೆಗಳ ಮಂಡನೆಗಳಿಂದಾಗಿ ಬಿಸಿ ಹೆಚ್ಚಾಗಿದೆ. ಸರ್ಕಾರ ಪ್ರಮುಖವಾದ ನಾಲ್ಕು ಮಸೂದೆಗಳನ್ನು ಮಂಡನೆ ಮಾಡಿದ್ದು, ವಿಧಾನಸಭೆಯಲ್ಲಿ ಅವುಗಳಿಗೆ ಅಂಗೀಕಾರ ದೊರೆತಿದೆ.

belagavi session
ಬೆಳಗಾವಿ ಅಧಿವೇಶನ
author img

By

Published : Dec 20, 2021, 8:49 PM IST

Updated : Dec 20, 2021, 9:28 PM IST

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಸೂದೆಗಳ ಮಂಡನೆಗಳಿಂದಾಗಿ ಬಿಸಿ ಹೆಚ್ಚಾಗಿದೆ. ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2021, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ 2021, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿವಿ ವಿಧೇಯಕ 2021, ಕರ್ನಾಟಕ ಕೆಲವು ಇನಾಂ ಆಬಾಲಿಷನ್ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2021 ಹಾಗೂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿವಿ ವಿಧೇಯಕ 2021ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.

ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2021: ಈ ಮಸೂದೆಯನ್ನು ಸಿಎಂ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಮಂಡನೆ ಮಾಡಿದರು. ಈಗಾಗಲೇ ಈ ಸಂಬಂಧ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಾಗಲೇ ಸಂಗ್ರಹಿಸಿರುವ 2,362 ಕೋಟಿ ರು.ಗಳ ವಿವಿಧ ತೆರಿಗೆ ರಕ್ಚಿಸಲು ಈ ವಿಧೇಯಕ ತರಲಾಗಿದೆ. ಇದಕ್ಕೆ ವಿಧಾನಸಭೆ ಅಂಗೀಕಾರ ನೀಡಿತು.

ಇದರಿಂದ ಬಿಬಿಎಂಪಿ ಕಟ್ಟಡ ನಕ್ಷೆಯ ಮಂಜೂರಾತಿ ಮತ್ತು ಪ್ರಾರಂಭ ಪ್ರಮಾಣ ಪತ್ರದ ಅನುಮತಿ ಹಾಗೂ ಕಟ್ಟಡ ಮುಕ್ತಾಯ ಪ್ರಮಾಣ ಪತ್ರವನ್ನು ಮಂಜೂರು ಮಾಡುವ ಸಮಯದಲ್ಲಿ ಸಂಗ್ರಹಿಸಲಾದ ಫೀಜು ಮತ್ತು ದಂಡಗಳನ್ನು ಮಾನ್ಯಗೊಳಿಸಲಿದೆ.

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ: ಈ ಮಸೂದೆಗೂ ವಿಧಾನಸಭೆ ಅಂಗೀಕಾರ ನೀಡಿದೆ. ಈ ವಿಧೇಯಕದಡಿ ಸರ್ಕಾರಿ ಭೂಮಾಪಕರಿಗೂ ಜಮೀನು ಗುರುತಿಸಲು ಅಗತ್ಯವಿರುವ ವಿವರಣೆ ಹಾಗೂ ಭೂ ಸಮೀಕ್ಷೆ ನಕ್ಷೆ ಅಥವಾ ಭೂ ಮಾಪನ ನಕ್ಷೆ (ನಿಗದಿತ ಅರ್ಜಿ ನಮೂನೆ-11ಇ)ಯನ್ನು ಇನ್ನು ಮುಂದೆ ಸರ್ಕಾರಿ ಭೂಮಾಪಕರು ನೀಡಲು ಅವಕಾಶ ಕಲ್ಪಿಸಲಾಗುವುದು. ಈವರೆಗೆ ಪರವಾನಗಿ ಪಡೆದ ಭೂಮಾಪಕರು ಮಾತ್ರ 11ಇ ಸ್ಕೆಚ್ ನೀಡಬಹುದಾಗಿತ್ತು. ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮೂಲಕ ಅನುಮತಿ ನೀಡಲಾಗುವುದು.

ಕರ್ನಾಟಕ ಕೆಲವು ಇನಾಂ ಆಬಾಲಿಷನ್ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ 2021 ಹಾಗೂ ಸಂಬಂಧಿಸಿದ ಇತರ ನಿಯಮಗಳಿಗೆ ತಿದ್ದುಪಡಿ ವಿಧೇಯಕವೂ ಈ ಅಧಿವೇಶನದಲ್ಲಿ ಮಂಡನೆ ಭಾಗ್ಯ ಸಿಕ್ಕಿದೆ.

ರಾಜ - ಮಹಾರಾಜರು, ಬ್ರಿಟಿಷರ ಕಾಲದಲ್ಲಿ ಇನಾಂ ಜಮೀನು ನೀಡಲಾಗಿದ್ದು, ಆಗಿನಿಂದ ಸಾಗುವಳಿ ಮಾಡಿಕೊಂಡಿದ್ದರೂ ನಾನಾ ಕಾರಣಗಳಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಭೂಮಿಯ ಹಕ್ಕು ಪಡೆಯಲು ಸಾಧ್ಯವಾಗಿಲ್ಲ. ನಿಯಾಮಾನುಸಾರ ಅರ್ಹರಿಗೆ ಅರ್ಜಿ ಸಲ್ಲಿಸಲು ಒಂದು ವರ್ಷ ಕಾಲಾವಕಾಶ ವಿಸ್ತರಿಸಲು 'ಕರ್ನಾಟಕ ಕೆಲವು ಇನಾಂ ಅಬಾಲಿಷನ್‌ ಹಾಗೂ ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ- 2021' ಹಾಗೂ ಸಂಬಂಧಪಟ್ಟ ನಿಯಮಗಳ ತಿದ್ದುಪಡಿ ಇದಾಗಿದೆ.

ವಿಧೇಯಕ ಮೇಲಿನ ಚರ್ಚೆ ವೇಳೆ ಎಚ್.ಕೆ. ಪಾಟೀಲ್ ಇದರಿಂದ ರೈತರಿಗೆ ಅನುಕೂಲ ಆಗುವುದಿಲ್ಲ. ಮೈನಿಂಗ್ ಮಾಡುವವರಿಗೆ ಅನುಕೂಲ ಆಗಲಿ ಎಂಬುದಕ್ಕೆ ಈ ವಿಧೇಯಕ ತರಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ಎದ್ದು ನಿಂತ ಕಾಂಗ್ರೆಸ್ ಶಾಸಕ ತುಕಾರಾಂ, ನಿಮ್ಮ ಕೈ ಮುಗಿಯುತ್ತೇನೆ. ಇದರಿಂದ ರೈತರಿಗೆ ಅನುಕೂಲ ಆಗುತ್ತದೆ. ಬಡವರು ಸಾಕಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ. ಇದರಿಂದ ಎಸ್ ಸಿ, ಎಸ್ ಟಿ ಜನರಿಗೆ ಅನುಕೂಲವಾಗಲಿದೆ ಎಂದರು.

ಬಳಿಕ ಈ ವಿಧೇಯಕದಿಂದ ಉಳುಮೆ ಮಾಡುತ್ತಾ, ಸದ್ಯ ಜಮೀನಿನ ಭೋಗ್ಯ ಮಾಡುವವರಿಗೆ ಮಾತ್ರ ಅವಕಾಶ ಸಿಗಬೇಕು. ಮೂಲ ಮಾಲೀಕರು ಇದರ ಲಾಭ ಪಡೆಯಬಾರದು ಎಂದು ಹಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿವಿ ವಿಧೇಯಕ 2021ಗೂ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿತು. ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿಧೇಯಕ ಮಂಡನೆ ಮಾಡಿದರು. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜನ್ನು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ವಿವಿ ಸ್ಥಾನಮಾನ ನೀಡುವ ವಿಧೇಯಕ ಇದಾಗಿದೆ.

ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ಗುಣಮಟ್ಟ ಹೆಚ್ಚಿಸಲು, ಅದನ್ನು ವಿಶ್ವದರ್ಜೆಯ ಸಂಸ್ಥೆಯಾಗಿ ಬೆಳೆಯಲು ಆಡಳಿತದಲ್ಲಿ ಸ್ವಾಯತ್ತತೆ ಬೇಕಾಗಿದೆ. ಇದಕ್ಕಾಗಿ ರಚನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಸ್ಥಾನಮಾನ ನೀಡಬೇಕಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ವಿವರಿಸಿದರು.

ಈ ವೇಳೆ ಶರತ್ ಬಚ್ಚೇಗೌಡ ಹಾಗೂ ಪ್ರಿಯಾಂಕ್ ಖರ್ಗೆ ಈ ವಿಧೇಯಕದಲ್ಲಿ ಶೇ 75ರಷ್ಟು ಸಿಇಟಿ ಪರೀಕ್ಷಾರ್ಥ ವಿದ್ಯಾರ್ಥಿಗಳಿಗೆ ಮತ್ತು ಶೇ 25ರಷ್ಟು ನೀಟ್ ಗೆ ಅವಕಾಶ ಕೊಟ್ಟಿರುವ ಅಂಶವನ್ನು ರದ್ದು ಮಾಡುವಂತೆ ಮನವಿ ಮಾಡಿದರು. ವಿವಿಗೆ ಶೇ 100ರಷ್ಟು ಸಿಇಟಿ ಪರೀಕ್ಷೆ ಬರೆದ ಕರ್ನಾಟಕದ ಮಕ್ಕಳಿಗೆ ಅವಕಾಶ ಕೊಡಲು ಮನವಿ ಮಾಡಿದರು. ಈ ಸಂಬಂಧ ತಿದ್ದುಪಡಿ ಮಾಡುವುದಾಗಿ ಸಚಿವ ಅಶ್ವತ್ಥ ನಾರಾಯಣ್ ಭರವಸೆ ನೀಡಿದರು.

Last Updated : Dec 20, 2021, 9:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.