ETV Bharat / city

ಮಹಾರಾಷ್ಟ್ರದಲ್ಲಿ ನಕಲಿ RTPCR ವರದಿ ನೀಡುತ್ತಿದ್ದ ಜಾಲವನ್ನು ಬೇಧಿಸಿದ ನಿಪ್ಪಾಣಿ ಪೊಲೀಸರು! - fake corona negative report

ನಕಲಿ RTPCR ವರದಿ ನೀಡುತ್ತಿದ್ದ ಮಹಾರಾಷ್ಟ್ರದ ಕೊಲ್ಲಾಪುರ ನಗರದ ತಂಡವನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ..

belagavi police arrested group  who giving fake corona negative report
ನಕಲಿ RTPCR ವರದಿ ನೀಡುತ್ತಿದ್ದ ಮಹಾರಾಷ್ಟ್ರದ ತಂಡವನ್ನು ಬಂಧಿಸಿದ ನಿಪ್ಪಾಣಿ ಪೋಲಿಸರು
author img

By

Published : Feb 4, 2022, 4:07 PM IST

ಅಥಣಿ (ಬೆಳಗಾವಿ): ಕೋವಿಡ್​ ತಡೆಯುವ ನಿಟ್ಟಿನಲ್ಲಿ ಆರ್​ಟಿಪಿಸಿಆರ್​ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯದ ಒಳ ಬರುವುದಕ್ಕೆ ಕೆಲ ಚೆಕ್ ಪೋಸ್ಟ್​​ಗಳಲ್ಲಿ ಅವಕಾಶ ನೀಡಲಾಗುತ್ತಿದೆ. ಆದ್ರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಟ್ರಾವೆಲ್ಸ್​ ಏಜೆನ್ಸಿಗಳು ನಕಲಿ ಕೊರೊನಾ ನೆಗೆಟಿವ್​ ರಿಪೋರ್ಟ್​​ ನೀಡಿ ಹಣ ಮಾಡಿಕೊಳ್ಳುತ್ತಿದ್ದರು. ನಿಪ್ಪಾಣಿ ಪೊಲೀಸರು ಇಂತಹ ಒಂದು ಜಾಲವನ್ನು ಬೇಧಿಸಿದ್ದಾರೆ.

ನಕಲಿ RTPCR ವರದಿ ನೀಡುತ್ತಿದ್ದ ಮಹಾರಾಷ್ಟ್ರದ ತಂಡವನ್ನು ಬಂಧಿಸಿದ ನಿಪ್ಪಾಣಿ ಪೊಲೀಸರು..

ಮಹಾರಾಷ್ಟ್ರದ ಕೊಲ್ಲಾಪುರ ನಗರದಲ್ಲಿ ನಕಲಿ ಕೋವಿಡ್ ರಿಪೋರ್ಟ್ ರಚಿಸಿ ರಾಜ್ಯಕ್ಕೆ ಜನರನ್ನು ತಂದು ಬಿಡುತ್ತಿದ್ದ ಟ್ರಾವೆಲ್ ಏಜೆನ್ಸಿಗಳ ಬಗ್ಗೆ ನಿಪ್ಪಾಣಿ ಪೊಲೀಸರ ಗಮನಕ್ಕೆ ಬಂದಿತ್ತು. ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ನಕಲಿ ವರದಿಯನ್ನು ನೀಡುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಹೊರಟ್ಟಿ ಕಟ್ಟಿ ಹಾಕಲು ಬಿಜೆಪಿ ಮಾಸ್ಟರ್ ಪ್ಲ್ಯಾನ್.. ಮೋಹನ್ ಲಿಂಬಿಕಾಯಿಗೆ ಬಿಜೆಪಿ ಟಿಕೆಟ್!

ನಿಪ್ಪಾಣಿ ಪೊಲೀಸರು ಸ್ವತಃ ಕೊಲ್ಲಾಪುರ ನಗರಕ್ಕೆ ತೆರಳಿ ನಕಲಿ RTPCR ವರದಿಯನ್ನು ಪಡೆದುಕೊಳ್ಳುವ ಮೂಲಕ ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದುಕೊಂಡು ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಕರ್ನಾಟಕದ ಗಡಿಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಚೆಕ್ ಪೋಸ್ಟ್​​ನಲ್ಲಿ ಬಸ್ ತಡೆದು ಪ್ರಕರಣ ದಾಖಲು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.