ETV Bharat / city

ಹಲಗಾ - ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ..ಪ್ರತಿಭಟನೆ ಮುಂದುವರಿಸುತ್ತೇವೆಂದ ಅನ್ನದಾತರು - ಬೆಳಗಾವಿ ಹಲಗಾ ಮಚ್ಛೆ ಬೈಪಾಸ್ ರಸ್ತೆ

ಬೆಳಗಾವಿ ನಗರದ ಹೊರವಲಯದಲ್ಲಿ ಉದ್ದೇಶಿತ ಹಲಗಾ - ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ನಿನ್ನೆ ಸಂಜೆ ಅಧಿಕಾರಿಗಳು ಹಾಗೂ ರೈತರ ಮಧ್ಯೆ ನಡೆಯುತ್ತಿದ್ದ ಸಭೆ ಅರ್ಧಕ್ಕೆ ಮೊಟಕುಗೊಂಡಿದೆ. ಮತ್ತೆ ಪ್ರತಿಭಟನೆ ನಡೆಸುವುದಾಗಿ ಅನ್ನದಾತರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

belagavi people opposing to halga  Machhe Bypass Road project
ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ
author img

By

Published : Nov 12, 2021, 9:59 AM IST

Updated : Nov 12, 2021, 12:44 PM IST

ಬೆಳಗಾವಿ: ಬೆಳಗಾವಿ(belagavi) ತಾಲೂಕಿನ ಹಲಗಾ-ಮಚ್ಛೆ ಬೈಪಾಸ್ ರಸ್ತೆ(halga Machhe Bypass Road project ) ಕಾಮಗಾರಿಗೆ ರೈತರು ವಿರೋಧಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ರೈತರ ಮಧ್ಯೆ ನಡೆಯುತ್ತಿದ್ದ ಸಭೆ(belagavi meeting) ಅರ್ಧಕ್ಕೆ ಮೊಟಕುಗೊಂಡಿದೆ.

ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ

ನಿನ್ನೆ ಬೆಳಗ್ಗೆ ಮಚ್ಛೆ ಗ್ರಾಮ(machhe village) ದಲ್ಲಿ ನಡೆಯುತ್ತಿದ್ದ ಕಾಮಗಾರಿ ವಿರೋಧಿಸಿ ರೈತರು ಪ್ರತಿಭಟನೆ(belagavi protest) ನಡೆಸಿದ್ದರು. ಈ ವೇಳೆ, ಡಿಸಿ ಜೊತೆಗೆ ಸಭೆ(belagavi farmers meeting with dc) ಆಯೋಜಿಸುವ ಭರವಸೆ ನೀಡಲಾಗಿತ್ತು‌. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ ಸಂಜೆ ಡಿಸಿ ಎಂ.ಜಿ ಹಿರೇಮಠ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು.

ಕಾಮಗಾರಿ ನಿಲ್ಲಿಸುವಂತೆ ಮನವಿ:

ಸಭೆಯಲ್ಲಿ ಡಿಸಿ ಎದುರು ರೈತ ಮಹಿಳೆ ತನ್ನ ಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸೋನಾಮಸೂರಿ ಅಕ್ಕಿ, ಗೋಧಿ ಸೇರಿ ಇತರ ಬೆಳೆ ಬೆಳೆಯುವ ಫಲವತ್ತಾದ ಜಮೀನಿದೆ. ನಮಗೆ ಪರಿಹಾರ ಬೇಡ, ಇದೇ ರೀತಿಯ ಫಲವತ್ತಾದ ಜಮೀನು ಕೊಡಿ. ಇಂದು ಪೊಲೀಸರು ನಮ್ಮನ್ನು ವಶಕ್ಕೆ ಪಡೆಯುವ ವೇಳೆ ನನ್ನ ಸೀರೆ ಹರಿದು ಹೋಗಿದೆ ಎಂದು ಅಳಲು ತೋಡಿಕೊಂಡು ಕಾಮಗಾರಿ ನಿಲ್ಲಿಸುವಂತೆ ರೈತ ಮಹಿಳೆ ಸೆರೆಗೊಡ್ಡಿ ಕೋರಿ ಕೊಂಡರು.

ಕಾಮಗಾರಿ ನಿಲ್ಲಿಸುವುದಿಲ್ಲ-ಡಿಸಿ:

ಪರ್ಯಾಯವಾಗಿ ಫಲವತ್ತಾದ ಭೂಮಿ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸುವುದಿಲ್ಲ ಎಂದು ಡಿಸಿ ಹಿರೇಮಠ ಹೇಳಿದರು. ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯ ಭೂಮಿ ಕೊಡಿಸುವ ಬಗ್ಗೆ ಚಿಂತನೆ ‌ಮಾಡುತ್ತೇನೆ ಎಂದು ಡಿಸಿ ಭರವಸೆ ನೀಡಿದರು.

ಇದನ್ನೂ ಓದಿ: ಬೆಳಗಾವಿ ಹೊರವಲಯದಲ್ಲಿ ಬೈಪಾಸ್​ ರಸ್ತೆ ನಿರ್ಮಾಣಕ್ಕೆ ಭಾರಿ ವಿರೋಧ: ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ರೈತ!

ಕಾಮಗಾರಿಯ ವರ್ಕ್ ಆರ್ಡರ್ ತೋರಿಸಿ ಎಂದು ರೈತರು ಹೇಳುತ್ತಿದ್ದಂತೆ ಸಭೆ ಮುಗಿಸಿ ಧನ್ಯವಾದ ಹೇಳಿ ಡಿಸಿ ತೆರಳಿದರು. ಈ ವೇಳೆ ಜಿಲ್ಲಾಡಳಿತ, ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ಪ್ರತಿಭಟನೆ ಆರಂಭಿಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು.

Last Updated : Nov 12, 2021, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.