ಬೆಳಗಾವಿ: ಜಿಂಕೆ ಬೇಟಿಯಾಡಿ ಚರ್ಮವನ್ನು ಹೊರ ದೇಶಕ್ಕೆ ರವಾನೆ ಮಾಡಲು ಯತ್ನಿಸುತ್ತಿದ್ದ ಮೂವರು ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಗೂಳಿಹಳ್ಳಿ ಅರಣ್ಯ ಇಲಾಖೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಿತ್ತೂರು ತಾಲೂಕಿನ ನಿಚ್ಚನಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿ ಅಕ್ರಮವಾಗಿ ಹೊರ ದೇಶಕ್ಕೆ ಚರ್ಮವನ್ನು ಸಾಗಿಸಲು ಮೂವರು ದುಷ್ಕರ್ಮಿಗಳು ಯತ್ತಿಸುತ್ತಿದ್ದರು. ಈ ಕುರಿತು ಮಾಹಿತಿ ತಿಳಿದ ಗೂಳಿಹಳ್ಳಿ ಅರಣ್ಯಾಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲೆಯ ಬೈಲಹೊಂಗಲ ಪಟ್ಟಣದ ಭರಮಾ, ಮಲ್ಲೇಶ ಹಾಗೂ ಯುವರಾಜ್ ಬಂಧಿತರು. ಜಿಂಕೆ ಚರ್ಮ ಹೊರ ದೇಶ ಹಾಗೂ ಹೊರ ರಾಜ್ಯಗಳಿಗೆ ಸಾಗಿಸುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ವನ್ಯಜೀವಿ ಸಂರಕ್ಷಣೆ ಕಾಯಿದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.