ETV Bharat / city

ದಲ್ಲಾಳಿಗಳಿಂದ ಮೋಸ? ತೂಕದ ಯಂತ್ರವನ್ನು ಕಲ್ಲಿನಿಂದ ಜಜ್ಜಿ ಬೆಳಗಾವಿ ರೈತರ ಆಕ್ರೋಶ - Cheating in Belgaum Private Vegetable Market

ಖಾಸಗಿ ತರಕಾರಿ ಮಾರುಕಟ್ಟೆ ದಲ್ಲಾಳಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

belagavi farmers outrage against vegetable brokers
ದಲ್ಲಾಳಿಗಳ ವಿರುದ್ಧ ಬೆಳಗಾವಿ ರೈತರ ಆಕ್ರೋಶ
author img

By

Published : May 19, 2022, 12:42 PM IST

ಬೆಳಗಾವಿ: ಖಾಸಗಿ ತರಕಾರಿ ಮಾರುಕಟ್ಟೆ ದಲ್ಲಾಳಿಗಳ ಮೋಸದ ವಿರುದ್ಧ ರೈತಾಪಿ ವರ್ಗ ಸಿಡಿದೆದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಡತನ ಬಾಗೇವಾಡಿ ಬಳಿ ನಡೆದಿದೆ. ತರಕಾರಿ ಸಾಗಿಸುತ್ತಿದ್ದ ವಾಹನವನ್ನು ತಡೆದ ರೈತರು ತೂಕದ ಯಂತ್ರವನ್ನು ಕಲ್ಲಿನಿಂದ ಜಜ್ಜಿ ಆಕ್ರೋಶ ವ್ಯಕ್ತಪಡಿಸಿದರು.

ಕೊಡಚವಾಡ, ಚಿಕ್ಕದಿಣ್ಣಕೊಪ್ಪ, ಹೀರೇಮುನವಳ್ಳಿ, ಪಾರಿಶ್ವಾಡ, ದೇವಲತ್ತಿ, ಗಂದಿಗವಾಡ ಸೇರಿ ಹಲವು ಗ್ರಾಮಗಳಲ್ಲಿ ಈ ಸಮಸ್ಯೆ ಇದೆ. ಸ್ಥಳೀಯ ವಾಹನ ಚಾಲಕರನ್ನು ಸಂಪರ್ಕಿಸಿ ಖಾಸಗಿ ಮಾರುಕಟ್ಟೆ ದಲ್ಲಾಳಿಗಳು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ದಲ್ಲಾಳಿಗಳ ವಿರುದ್ಧ ಬೆಳಗಾವಿ ರೈತರ ಆಕ್ರೋಶ

ಹಸಿಮೆಣಸಿನಕಾಯಿ, ಹಾಗಲಕಾಯಿ ಸೇರಿ ಇತರೆ ತರಕಾರಿ ತೂಕ ಮಾಡುವ ವೇಳೆ 50 ಕೆ.ಜಿ ತೂಕ ಇದ್ದರೆ 7 ಕೆಜಿ ಕಡಿಮೆ ತೋರಿಸಿ ಮೋಸ ಮಾಡಲಾಗುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ಮೆಣಸಿನಕಾಯಿ ಸಾಗಿಸುತ್ತಿದ್ದ ವಾಹನ ತಡೆದು ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಬಳಿಕ ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಇದನ್ನೂ ಓದಿ: ಟೊಮೆಟೊ, ನುಗ್ಗೇಕಾಯಿ ದುಬಾರಿ: ರಾಜ್ಯದಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.