ETV Bharat / city

ರೈತರ ಕೈ ಸೇರದ ಪರಿಹಾರ.. ಸರ್ಕಾರದ ವಿರುದ್ಧ ಅಥಣಿ ರೈತರ ಆಕ್ರೋಶ

author img

By

Published : Oct 23, 2021, 10:03 AM IST

Updated : Oct 23, 2021, 10:17 AM IST

ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿದ ಧಾರಾಕಾರ ಮಳೆಗೆ ಕೃಷ್ಣಾ ನದಿಯಲ್ಲಿ ಪ್ರವಾಹ ಎದುರಾಗಿ ಅಥಣಿ ತಾಲೂಕಿನ 14 ಗ್ರಾಮಗಳು ಪ್ರವಾಹಕ್ಕೆ ಸಿಲುಕಿ, ಭಾರಿ ನಷ್ಟ ಸಂಭವಿಸಿದೆ. ಸರ್ಕಾರ ಪರಿಹಾರವೇನೋ ಘೋಷಿಸಿದೆ. ಆದ್ರೆ ಈವರೆಗೂ ಆ ಹಣ ತಲುಪಿಲ್ಲವೆಂದು ಅನ್ನದಾತರು ಅಸಮಾಧಾನ ಹೊರಹಾಕಿದ್ದಾರೆ.

athani farmers didn't get compensation
ರೈತರ ಕೈ ಸೇರದ ಪರಿಹಾರ

ಅಥಣಿ(ಬೆಳಗಾವಿ): ಕಳೆದ ಮೂರು ತಿಂಗಳ ಹಿಂದೆ ರಣಭೀಕರ ಕೃಷ್ಣಾ ನದಿ ಪ್ರವಾಹಕ್ಕೆ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ರೈತರ ಸಾವಿರಾರು ಹೆಕ್ಟೇರ್ ಬೆಳೆ ನಾಶವಾದರೂ ಸರ್ಕಾರದಿಂದ ನಯಾ ಪೈಸೆಯ ಪರಿಹಾರ ಬಂದಿಲ್ಲವೆಂದು ಆರೋಪಿಸಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

3 ತಿಂಗಳ ಹಿಂದೆ ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿದ ಧಾರಾಕಾರ ಮಳೆಗೆ ಕೃಷ್ಣಾ ನದಿಯಲ್ಲಿ ಪ್ರವಾಹ ಎದುರಾಗಿ ಅಥಣಿ ತಾಲೂಕಿನ 14 ಗ್ರಾಮಗಳು ಪ್ರವಾಹಕ್ಕೆ ಸಿಲುಕಿದವು. ರೈತರು ಬೆಳೆದ ಬೆಳೆ ನೀರಿನಲ್ಲಿ ಕೊಳೆತು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿತ್ತು. ಸರ್ಕಾರ ರೈತರಿಗೆ ನಷ್ಟ ಸರಿ ಹೊಂದಿಸಲು ಪ್ರತಿ ಎಕರೆ ಜಮೀನಿಗೆ 13,300 ರೂಪಾಯಿ ಪರಿಹಾರ ಹಣ ಘೋಷಿಸಿತ್ತು. ಆದ್ರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯಿಂದ ಈವರೆಗೂ ತಾಲೂಕಿನ ನೆರೆ ಸಂತ್ರಸ್ತರ ರೈತರಿಗೆ ಬೆಳೆ ಹಾನಿ ಪರಿಹಾರ ತಲುಪದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರೈತರ ಕೈ ಸೇರದ ಪರಿಹಾರ.. ಸರ್ಕಾರದ ವಿರುದ್ಧ ಅಥಣಿ ರೈತರ ಆಕ್ರೋಶ

ನೆರೆಯಿಂದ ಹಾಳಾದ ಬೆಳೆಯನ್ನು ಜಮೀನಿನಿಂದ ತೆಗೆದು ಬೇರೆ ಬೆಳೆಯನ್ನು ಬೆಳೆಯಲು ಹಣಕಾಸಿನ ತೊಂದರೆ ಉಂಟಾಗಿದ್ದು, ಸರ್ಕಾರದ ಪರಿಹಾರ ಹಣಕ್ಕಾಗಿ ಅನ್ನದಾತರು ಕಾಯುತ್ತಿದ್ದಾರೆ. ಅಥಣಿ ಭಾಗದಲ್ಲಿ ಹೆಚ್ಚಾಗಿ ಕಬ್ಬು ಬೆಳೆಗಾರರು ಇರುವುದರಿಂದ ಪ್ರವಾಹದಿಂದ ಈ ಹಂಗಾಮಿಗೆ ಕಬ್ಬು ಇಲ್ಲದೇ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ.

ಇದನ್ನೂ ಓದಿ: ಹಂದಿ ಫಾರ್ಮ್​ನಿಂದ ದುರ್ನಾತ.. ಸುಳ್ಯ ದೇವಸ್ಥಾನ ಅಪವಿತ್ರವಾಗುತ್ತಿರುವ ಆರೋಪ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲೆಯ ಬೆಳೆಹಾನಿ ಸಮೀಕ್ಷೆ ಮಾಡಲು ಬಂದಾಗ ಇನ್ನು ಒಂದು ವಾರದಲ್ಲಿ ರೈತರ ಖಾತೆಗೆ ನೇರವಾಗಿ ಬೆಳೆಹಾನಿ ಪರಿಹಾರ ಹಣ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಪ್ರವಾಹ ಆಗಿ ಮೂರು ತಿಂಗಳು ಕಳೆದರೂ ಅಥಣಿ ತಾಲೂಕಿನ ರೈತರಿಗೆ ಬೆಳೆ ಪರಿಹಾರ ಸಿಗದೆ ಸಂಕಷ್ಟಕ್ಕೀಡಾಗಿದ್ದಾರೆ.

ಇನ್ನಾದರೂ ಬೆಳಗಾವಿ ಜಿಲ್ಲಾಡಳಿತ ಕಾರ್ಯ ಪ್ರವೃತ್ತರಾಗಿ ಅಥಣಿ ತಾಲೂಕಿನ ನೆರೆ ಸಂತ್ರಸ್ತರ ಬೆಳೆ ಹಾನಿಯ ಪರಿಹಾರದ ಜೊತೆಗೆ ನಾಲ್ಕು ಗ್ರಾಮವಾದ ಝುಂಜರವಾಡ, ಶಿರಹಟ್ಟಿ, ಬಳವಾಡ, ಸವದಿ ನೆರೆಪೀಡಿತ ಗ್ರಾಮಸ್ಥರ ತುರ್ತು ಪರಿಹಾರ ಹತ್ತು ಸಾವಿರ ರೂಪಾಯಿ ಹಣವನ್ನು ಬಿಡುಗಡೆ ಮಾಡುವಂತೆ ರೈತ ಮುಖಂಡ ಎಂ ಸಿ ತಾಂಭೋಳಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Last Updated : Oct 23, 2021, 10:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.