ETV Bharat / city

ಬೆಳಗಾವಿ: ರಸ್ತೆ ಮಧ್ಯೆ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ನಾಲ್ವರು ಆರೋಪಿಗಳು ಅಂದರ್ - ಬೆಳಗಾವಿ ದರೋಡೆಕೋರರ ಬಂಧನ

ರಸ್ತೆ ಮಧ್ಯೆ ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸವದತ್ತಿ ತಾಲೂಕಿನ ಮುರುಗೋಡ ಪೊಲೀಸರು ಯಶಸ್ವಿಯಾಗಿದ್ದಾರೆ.

arrest-of-four-accused-in-road-robbery-at-murugoda
ಬೆಳಗಾವಿ ದರೋಡೆಕೋರರ ಬಂಧನ
author img

By

Published : Feb 25, 2020, 10:29 AM IST

Updated : Feb 25, 2020, 12:15 PM IST

ಬೆಳಗಾವಿ: ರಸ್ತೆ ಮಧ್ಯೆ ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸವದತ್ತಿ ತಾಲೂಕಿನ ಮುರುಗೋಡ ಪೊಲೀಸರು ಯಶಸ್ವಿಯಾಗಿದ್ದಾರೆ.

ಸವದತ್ತಿ ತಾಲೂಕಿನ ಮುರಗೋಡ ನಿವಾಸಿ ಮಹೇಶ್ ಹಿರೇಮಠ (50) ಎಂಬುವವರು, ರಾತ್ರಿ 11:15 ರ ಸುಮಾರಿಗೆ ಬೈಕ್​ನಲ್ಲಿ ತಮ್ಮ ಹೊಲಕ್ಕೆ ಹೊರಟಿದ್ದ ಸಂದರ್ಭದಲ್ಲಿ ಮೂವರು ಖದೀಮರು ಏಕಾಏಕಿ ಬೈಕ್ ಅಡ್ಡಗಟ್ಟಿ ಬೆದರಿಸಿ 15 ಸಾವಿರ ಮೌಲ್ಯದ ಮೊಬೈಲ್ ಮತ್ತು 10 ಸಾವಿರ ಹಣ ದೋಚಿ ಪಾರಾರಿಯಾಗಿದ್ದರು. ಈ ಕುರಿತು ಮಹೇಶ್ ಮುರಗೋಡ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿ ಆರೋಪಿಗಳನ್ನು ಪತ್ತೆ ಹಚ್ಚಿರುವ ಪೊಲೀಸರು, ಸವದತ್ತಿ ಮೂಲದ ದೇವಿಂದ್ರ ಶಿನೋಬಿ (19), ದೇವಿಂದ್ರ ಸಣ್ಣಮ್ಮನವರ (19), ಶ್ರೀಶೈಲ ಹೊಂಡೆಪ್ಪನ್ನವರ(21) ಹಾಗೂ ಯಮನಪ್ಪ ಕಡೆಮನಿ (21) ಬಂಧಿಸಿದ್ದು, ಆರೋಪಿಗಳಿಂದ 8 ಮೊಬೈಲ್, 7,800 ರೂ. ಹಣ, ಒಂದು ಚಾಕೂ ಹಾಗೂ ಕೃತ್ಯಕ್ಕೆ ಬಳಸಲಾದ ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ.

Last Updated : Feb 25, 2020, 12:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.