ಬೆಳಗಾವಿ: ರಸ್ತೆ ಅಪಘಾತದಲ್ಲಿ ಲಾರಿಯ ಮುಂಭಾಗದ ಚಕ್ರದಿಂದ ಯುವತಿ ಜಸ್ಟ್ ಮಿಸ್ ಆಗಿರುವ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕ್ಷಣಾರ್ಧದಲ್ಲಿ ಯುವತಿಯ ಪ್ರಾಣ ಉಳಿದಿರುವ ಘಟನೆ ತಾಲೂಕಿನ ಗಣೇಶಪುರದಲ್ಲಿ ನಡೆದಿದೆ.
ಗಣೇಶಪುರ ರಸ್ತೆಯಲ್ಲಿ ಸ್ಕೂಟಿ ಮೇಲೆ ತೆರಳುತ್ತಿರುವಾಗ ಯುವತಿಗೆ ನಾಯಿ ಅಡ್ಡ ಬಂದಿದೆ. ಈ ವೇಳೆ ವೇಗ ನಿಯಂತ್ರಣಕ್ಕೆ ಬಾರದೇ ಸ್ಕೂಟಿ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ. ಇತ್ತ ಹಿಂಬದಿಯಿಂದ ಬರುತ್ತಿದ್ದ ಲಾರಿ ಚಾಲಕ, ತಕ್ಷಣ ಬ್ರೇಕ್ ಹಾಕಿ ಲಾರಿಯನ್ನು ನಿಲ್ಲಿಸಿದ್ದಾನೆ. ಚಾಲಕನ ಸಮಯಪ್ರಜ್ಞೆಯಿಂದ ಕ್ಷಣಾರ್ಧದಲ್ಲಿ ಯುವತಿಯ ಪ್ರಾಣ ಉಳಿದಿದ್ದು, ಅಪಘಾತದ ಭಯಾನಕ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಳಗಾವಿ ದಕ್ಷಿಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ.. ಮದರಸಾ ಶಿಕ್ಷಕನಿಗೆ 67 ವರ್ಷ ಶಿಕ್ಷೆ ನೀಡಿದ ಕೋರ್ಟ್