ETV Bharat / city

ಕೋವಿಡ್ ನಿಯಂತ್ರಣದ ಕುರಿತು ಸಚಿವೆ, ಸಂಸದರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ - A meeting of officials headed

ಕಾಗವಾಡ ಹಾಗೂ ನಿಪ್ಪಾಣಿ ಚೆಕ್‌ಪೋಸ್ಟ್‌ಗಳಲ್ಲಿ ಕರ್ನಾಟಕ ಪ್ರವೇಶಿಸಲು ಕಡ್ಡಾಯವಾಗಿ ನೆಗಟಿವ್ ವರದಿಬೇಕು. ಹೀಗಾಗಿ, ಪೊಲೀಸ್ ಇಲಾಖೆ ಗಡಿಯಲ್ಲಿ ಕಟ್ಟೆಚ್ಚರವಹಿಸುತ್ತಿದೆ. ಅದೇ ರೀತಿ ಕೋವಿಡ್ ವ್ಯಾಕ್ಸಿನ್ ಎಲ್ಲರೂ ಪಡೆದುಕೊಳ್ಳಿ..

ಚಿಕ್ಕೋಡಿ
ಚಿಕ್ಕೋಡಿ
author img

By

Published : Apr 21, 2021, 8:56 PM IST

ಚಿಕ್ಕೋಡಿ : ಚಿಕ್ಕೋಡಿ ಉಪಪವಿಭಾಗ ವ್ಯಾಪ್ತಿಯಲ್ಲಿ ಕೊರೊನಾ ವೈರಾಣು ಹರಡುವಿಕೆ ನಿಯಂತ್ರಣದಲ್ಲಿದೆ. ಅದು ಉಲ್ಬಣಗೊಳ್ಳದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಕಸ್ಮಾತ್ ಪರಿಸ್ಥಿತಿ ಕೈಮೀರಿದರೆ ರೋಗ ನಿಯಂತ್ರಣಕ್ಕೆ ಸಜ್ಜಾಗಿರಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಿನಿ ವಿಧಾನಸೌಧದಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಚಿಕ್ಕೋಡಿ, ಅಥಣಿ, ರಾಯಬಾಗ, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗಾಗಿ ಅಗತ್ಯ ಉಪಕರಣಗಳೊಂದಿಗೆ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಬೇಕು. ಅಲ್ಲದೆ ಐಎಂಎ ವೈದ್ಯರೊಂದಿಗೆ ಸುಸಜ್ಜಿತ ಕೋವಿಡ್ ಸೆಂಟರ್​ಗಳನ್ನು ತೆರೆದಿರಬೇಕೆಂದು ಸಲಹೆ ನೀಡಿದರು.

ಸಚಿವೆ, ಸಂಸದರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ..

ಮಾಸ್ಕ್​ ಹಾಗೂ ಸಾಮಾಜಿಕ‌ ಅಂತರವನ್ನು ಪ್ರತಿಯೊಬ್ಬರು ಪಾಲಿಸಬೇಕು. ಕೊವೀಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ವೇಳೆ ಬೆಡ್‌ಗಳು ಕಡಿಮೆಯಾದರೆ, ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಗವಾಡ ಹಾಗೂ ನಿಪ್ಪಾಣಿ ಚೆಕ್‌ಪೋಸ್ಟ್‌ಗಳಲ್ಲಿ ಕರ್ನಾಟಕ ಪ್ರವೇಶಿಸಲು ಕಡ್ಡಾಯವಾಗಿ ನೆಗಟಿವ್ ವರದಿಬೇಕು. ಹೀಗಾಗಿ, ಪೊಲೀಸ್ ಇಲಾಖೆ ಗಡಿಯಲ್ಲಿ ಕಟ್ಟೆಚ್ಚರವಹಿಸುತ್ತಿದೆ. ಅದೇ ರೀತಿ ಕೋವಿಡ್ ವ್ಯಾಕ್ಸಿನ್ ಎಲ್ಲರೂ ಪಡೆದುಕೊಳ್ಳಿ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಕೋವಿಡ್ ರೋಗಿಗಳ ಅನುಕೂಲಕ್ಕಾಗಿ ನೋಡಲ್ ಅಧಿಕಾರಿಯೊಬ್ಬರನ್ನು ನೇಮಕಮಾಡಿ ಸೂಕ್ತ ಮಾಹಿತಿ ಒದಗಿಸಲು ಕ್ರಮಕೈಗೊಳ್ಳಬೇಕು. ಕೋವಿಡ್ ನಿಯಂತ್ರಣ ಮತ್ತು ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ನುರಿತ ವೈದ್ಯರ ಸಹಾಯ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.