ಬೆಳಗಾವಿ: ಕೊರೊನಾ ವೈರಸ್ ಅಪಾಯವನ್ನ ಅರಿಯದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಟ್ಯಾಂಕರ್ ನೀರಿಗೆ ಮುಗಿಬೀಳುತ್ತಿದ್ದಾರೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೀರು ತುಂಬಿಕೊಳ್ಳಲು ಮುಗಿಬಿದ್ದರು. ಇದಕ್ಕೆ ಕಾರಣ ರಾಮದುರ್ಗದ ಶ್ರೀಪತಿ ನಗರದಲ್ಲಿ ಕುಡಿಯುವ ನೀರಿನ ಪಂಪ್‌ಸೆಟ್ ಕೆಟ್ಟು ಹೋಗಿರುವುದು. ಪಂಪ್‌ಸೆಟ್ ಕೆಟ್ಟು ಹೋದರೂ ದುರಸ್ತಿ ಮಾಡಿಲ್ಲ.
ಹೀಗಾಗಿ ಅಲ್ಲಿನ ಜನರಿಗೆ ನೀರಿನ ಅಭಾವ ಇರುವ ಕಾರಣ ರಾಮದುರ್ಗ ಪುರಸಭೆಯಿಂದಲೇ ನೀರು ಸರಬರಾಜು ಮಾಡಲಾಗುತ್ತಿದ್ದು, ನೀರು ತೆಗೆದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಗಿಬಿದ್ದಿದ್ದಾರೆ.