ETV Bharat / city

ಆರತಕ್ಷತೆಯಲ್ಲಿ ಕನ್ನಡದ ಕಂಪು: ಕನ್ನಡ ಸಾಹಿತ್ಯ ಸಮ್ಮೇಳನ ರೀತಿಯ ಸಂಭ್ರಮ - ಬೆಳಗಾವಿ ಲೇಟೆಸ್ಟ್​ ನ್ಯೂಸ್​

ಕನ್ನಡಪ್ರೇಮಿಯೊಬ್ಬರು ತಮ್ಮ ಆರತಕ್ಷತೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ, ದಾಂಪತ್ಯ ಕವಿಗೋಷ್ಟಿ, ಕನ್ನಡಪರ ಹೋರಾಟ ಸಂಕಲನಗೋಷ್ಠಿ ಮತ್ತು ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆಯಂತಹ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

a-couple-celebrate-special-marriage-reception-in-belagum
ಆರಕ್ಷತೆಯಲ್ಲಿ ಕನ್ನಡದ ಕಂಪು: ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿಯೇ ಸಂಭ್ರಮ
author img

By

Published : Jan 4, 2021, 5:01 PM IST

ಚಿಕ್ಕೋಡಿ (ಬೆಳಗಾವಿ): ಸಾಮಾನ್ಯವಾಗಿ ವಿವಾಹ ಆರತಕ್ಷತೆ ಎಂದರೆ ಪೆಂಡಾಲ್, ಡಿಜೆ, ಬಂಧು-ಬಳಗ, ಮಾವಿನ ತಳಿರು-ತೋರಣಗಳು ಇರುತ್ತವೆ. ಆದರೆ, ಇಲ್ಲೊಬ್ಬ ಕನ್ನಡಪ್ರೇಮಿ ವಿನೂತನವಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ.

ಆರತಕ್ಷತೆಯಲ್ಲಿ ಕನ್ನಡದ ಕಂಪು: ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿಯೇ ಸಂಭ್ರಮ

ಕಳೆದ ಡಿಸೆಂಬರ್ 17 ರಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ಕುಮಾರ ತಳವಾರ ಹಾಗೂ ಸಂಧ್ಯಾ ಬನಸೋಡೆ ಹಿರಿಯರ ಸಮ್ಮುಖದಲ್ಲಿ ಸರಳ ವಿವಾಹವಾಗಿದ್ದರು. ಸಂಧ್ಯಾ ಮೂಲತಃ ಅಥಣಿ ತಾಲೂಕಿನ ಅನಂತಪೂರ ಗ್ರಾಮದವರಾಗಿದ್ದು, ಸದ್ಯ ಎಂ.ಎ ಪ್ರಥಮ ವ್ಯಾಸಂಗ ಮಾಡುತ್ತಿದ್ದಾರೆ. ಕುಮಾರ ಅವರ ಕನ್ನಡಪರ ಕಾಳಜಿ, ಚಿಂತನೆಗಳಿಗೆ ಪ್ರೇರಣೆಯಾಗಿ ಇಬ್ಬರು ವಿನೂತನವಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ.

ಜನವರಿ 3ರ ಭಾನುವಾರದಂದು ಸಂಕೇಶ್ವರ ಪಟ್ಟಣದಲ್ಲಿ ಇವರ ಆರತಕ್ಷತೆ ಕಾರ್ಯಕ್ರಮವನ್ನು ವಿನೂತನವಾಗಿ ಹಮ್ಮಿಕೊಂಡಿದ್ದು, ಇದೊಂದು ಆರತಕ್ಷತೆ ಕಾರ್ಯಕ್ರಮವಾಗದೆ, ಒಂದು ರೀತಿಯ ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿಯೇ ನಡೆದಿದೆ.

ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ, ದಾಂಪತ್ಯ ಕವಿಗೋಷ್ಠಿ, ಕನ್ನಡಪರ ಹೋರಾಟ ಸಂಕಲನಗೋಷ್ಠಿ ಮತ್ತು ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆಯಂತಹ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.