ಬೆಳಗಾವಿ: ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರ ಮಧ್ಯೆ ಗೂಳಿಯೊಂದು ದಿಢೀರ್ ನುಗ್ಗಿದ ಘಟನೆ ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಜಿಲ್ಲೆಯ ಕ್ಯಾಂಪ್ ಪ್ರದೇಶದ ಗೌಳಿ ಗಲ್ಲಿಯಲ್ಲಿ ಓಲ್ಡ್‌ಮ್ಯಾನ್ ಪ್ರತಿಕೃತಿ ದಹಿಸುವುದನ್ನು ನೋಡಲು ಅಪಾರ ಜನ ನೆರೆದಿತ್ತು. ಈ ವೇಳೆ ರಸ್ತೆಯ ಮೇಲೆ ನಿಂತಿದ್ದ ಗೂಳಿ ಏಕಾಏಕಿ ಜನರ ಮಧ್ಯೆ ನುಗ್ಗಿ ಬಂತು. ಮಹಿಳೆಯರು, ಮಕ್ಕಳಿಗೆ ಗುದ್ದಿದ ಗೂಳಿ ರಸ್ತೆಯಲ್ಲಿದ್ದ ಕಾರಿಗೂ ಗುದ್ದಿದೆ. ಬಳಿಕ ಸ್ಥಳೀಯನೋರ್ವ ಗೂಳಿಯ ಬಾಲ ಹಿಡಿದು ಹೊರಗೆ ಓಡಿಸಿದರು.
ಇನ್ನು, ಘಟನೆಯಲ್ಲಿ ನಾಲ್ವರು ಮಹಿಳೆಯರು, ಓರ್ವ ಬಾಲಕ ಗಾಯಗೊಂಡಿದ್ದಾನೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.