ಬೆಳಗಾವಿ: ಕಿಲ್ಲರ್ ಕೊರೊನಾಗೆ ಆರು ಸೋಂಕಿತರು ಮೃತಪಟ್ಟಿದ್ದು, ಈವರೆಗೂ ಕೋವಿಡ್-19ನಿಂದ ಮೃತಪಟ್ಟವರ ಸಂಖ್ಯೆ 52ಕ್ಕೆ ಏರಿದೆ. ಅಲ್ಲದೇ ಜಿಲ್ಲೆಯಲ್ಲಿಂದು 155 ಜನರಿಗೆ ಸೋಂಕು ವಕ್ಕರಿಸಿದೆ.
38 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ ದಾಖಲಾದ ಒಟ್ಟು 2304 ಕೊರೊನಾ ಪ್ರಕರಣಗಳ ಪೈಕಿ 680 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, 1572 ಸಕ್ರಿಯ ಪ್ರಕರಣಗಳಿವೆ.