ETV Bharat / city

ಬೆಳಗಾವಿಯಲ್ಲಿ ಸೋಮವಾರದವರೆಗೆ ನಿಷೇಧಾಜ್ಞೆ.. - ಶಿವಾಜಿಗೆ ಅವಮಾನ

ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿ ಜಾರಿಗೊಳಿಸಿರುವ ನಿಷೇಧಾಜ್ಞೆಯನ್ನು ಸೋಮವಾರದವರೆಗೆ ಮುಂದುವರಿಸಿ ಆದೇಶ ಹೊರಡಿಸಲಾಗಿದೆ.

ಬೆಳಗಾವಿಯಲ್ಲಿ ನಿಷೇಧಾಜ್ಞೆ,ಬೆಳಗಾವಿ ಗಲಭೆ
ಬೆಳಗಾವಿಯಲ್ಲಿ ನಿಷೇಧಾಜ್ಞೆ
author img

By

Published : Dec 18, 2021, 6:40 PM IST

Updated : Dec 18, 2021, 6:58 PM IST

ಬೆಳಗಾವಿ : ಶಿವಾಜಿ ಮಹಾರಾಜ, ಸಂಗೊಳ್ಳಿ ರಾಯಣ್ಣ ಪ್ರತಿಮೆಗಳಿಗೆ ಅಪಮಾನ ಪ್ರಕರಣ ಸಂಬಂಧ ಉಂಟಾದ ಗಲಭೆ ಹಿನ್ನೆಲೆ ಬೆಳಗಾವಿಯಲ್ಲಿ ಜಾರಿಗೊಳಿಸಿರುವ 144 ಸೆಕ್ಷನ್ ನಿಷೇಧಾಜ್ಞೆ ಸೋಮವಾರದವರೆಗೆ ಮುಂದುವರೆಯಲಿದೆ.

ಘಟನೆ ಖಂಡಿಸಿ ಬೆಳಗಾವಿ ನಗರದಲ್ಲಿನ ಕಲ್ಲು ತೂರಾಟದಿಂದಾಗ ಪರಿಸ್ಥಿತಿ ಹದಗೆಟ್ಟಿತ್ತು. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಬೆಳಗಾವಿಯಲ್ಲಿ ನಿಷೇಧಾಜ್ಞೆ,ಬೆಳಗಾವಿ ಗಲಭೆ
ಬೆಳಗಾವಿಯಲ್ಲಿ ಸೋಮವಾರದವರೆಗೆ ನಿಷೇಧಾಜ್ಞೆ ಮುಂದುವರಿಕೆ

ಇದೀಗ ಅದನ್ನು ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಮುಂದುವರಿಸಿ ಜಿಲ್ಲಾ ದಂಡಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ನಗರ ಹಾಗೂ ತಾಲೂಕಿನಾದ್ಯಂತ ನಿಷೇಧಾಜ್ಞೆ ಇರಲಿದೆ. ಐದಕ್ಕಿಂತ ಹೆಚ್ಚು ಜನರು ಸೇರದಂತೆ ಮತ್ತು ಸಭೆ-ಸಮಾರಂಭ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದು ಅವಮಾನಿಸಿದ ಘಟನೆ ಖಂಡಿಸಿ ಹಿಂದೂ, ಎಂಇಎಸ್ ಸಂಘಟನೆಗಳು ಬೆಳಗಾವಿಯಲ್ಲಿ ಕಳೆದ ರಾತ್ರಿ ಪ್ರತಿಭಟನೆಗೆ ಇಳಿದಿದ್ದವು. ಆ ವೇಳೆ ಕಲ್ಲು ತೂರಾಟ ಕೂಡ ನಡೆದಿತ್ತು.

ಬಳಿಕ ಕಿಡಿಗೇಡಿಗಳು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಧ್ವಂಸ ಮಾಡಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡಲು ಕಾರಣವಾಗಿದೆ. ಸದ್ಯ ಬೆಳಗಾವಿ ಬೂದಿ ಮುಚ್ಚಿದ ಕೆಂಡದಂತಿದೆ. ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

(ಇದನ್ನೂ ಓದಿ: Monkeys V/s Dogs : 300ಕ್ಕೂ ಹೆಚ್ಚು ನಾಯಿಮರಿಗಳನ್ನ ಕೊಂದು ಪ್ರತೀಕಾರ ತೀರಿಸಿಕೊಂಡ ಮಂಗಗಳು)

Last Updated : Dec 18, 2021, 6:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.