ಹೈದರಾಬಾದ್: ವಿಶ್ವ ಆರ್ಥಿಕ ಹಿಂಜರಿತದ ಭೀತಿಗೆ ಒಳಗಾಗಿದೆ. ಕೊರೊನಾ ಕೊಟ್ಟ ಹೊಡೆತ ಸೇರಿದಂತೆ ಇನ್ನಿತರ ಕಾರಣಗಳಿಂದ ಹಣದುಬ್ಬರ ಗಗನಕ್ಕೇರುತ್ತಿದೆ. ಭಾರತವೂ ಇದರಿಂದ ಹೊರತಾಗಿಲ್ಲ. ಹೀಗಾಗಿ ಹಣದುಬ್ಬರ ನಿಯಂತ್ರಣಕ್ಕೆ ಆರ್ಬಿಐ ಮುಂದಾಗಿದ್ದು, ರೆಪೋ ದರ ಏರಿಕೆ ಮಾಡಿದೆ. ಪರಿಣಾಮ, ಬಡ್ಡಿ ದರಗಳು ಗಗನಕ್ಕೇರುತ್ತಿದ್ದು, ಅನೇಕ ಜನರು ತಮ್ಮ ಗೃಹ ಸಾಲವನ್ನು ಬೇಗವೇ ಕಟ್ಟಿ ಮುಗಿಸಲು ಯೋಚಿಸುತ್ತಿದ್ದಾರೆ.
ಆದರೆ, ಹೊಸ ಸಾಲಗಾರರು ಈ ಹೊರೆಯನ್ನು ದೀರ್ಘಕಾಲ ಹೊತ್ತುಕೊಳ್ಳಬೇಕಾಗುತ್ತದೆ. ನೀವು ಕೆಲವು ಅಂಶಗಳ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಆ ಮೂಲಕ ನೀವು ಶೀಘ್ರದಲ್ಲೇ ಸಾಲದಿಂದ ಮುಕ್ತರಾಗಬಹುದು. ಬಡ್ಡಿದರಗಳು ಕಡಿಮೆಯಾದಾಗ ನಾವೆಲ್ಲರೂ ಸಂತೋಷ ಪಡುತ್ತೇವೆ. ಆದರೆ, ಬಡ್ಡಿ ದರಗಳು ಏರುತ್ತಿರುವಾಗ ನಾವು ಸ್ವಲ್ಪ ಚಿಂತಿತರಾಗುತ್ತೇವೆ. ವಾಸ್ತವವಾಗಿ, ಹಣದುಬ್ಬರದ ಆಧಾರದ ಮೇಲೆ ಬಡ್ಡಿದರಗಳು ಏರಿಳಿತಗೊಳ್ಳುತ್ತವೆ ಎಂಬುದನ್ನು ನಾವು - ನೀವೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು.
ಗೃಹ ಸಾಲವು 15 ರಿಂದ 20 ವರ್ಷಗಳ ದೀರ್ಘಾವಧಿಯ ಸಾಲವಾಗಿದೆ. ಈ ಅವಧಿಯಲ್ಲಿ, ಬಡ್ಡಿದರಗಳ ಏರಿಕೆ ಮತ್ತು ಇಳಿಕೆ ಕಾಣುವುದು ಸಾಮಾನ್ಯ. ಆದ್ದರಿಂದ, ಈ ಏರಿಳಿತಗಳನ್ನು ನಕಾರಾತ್ಮಕವಾಗಿ ನೋಡುವುದನ್ನು ಕೈ ಬಿಡಬೇಕು. ಏಕೆಂದರೆ ಬಡ್ಡಿ ದರ ಏರಿಕೆಯಾದರೂ ಅದು ನಿಮ್ಮ EMI ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಇದು ನಿಮ್ಮ ಮಾಸಿಕ ಬಜೆಟ್ ಅನ್ನು ಸಹ ಕಳೆದುಕೊಳ್ಳುವುದಿಲ್ಲ. ನಿಮ್ಮ ಅವಧಿಯನ್ನು ಮಾತ್ರ ವಿಸ್ತರಿಸಲಾಗುವುದು. ಬಡ್ಡಿದರಗಳು ಇಳಿಕೆಯಾದಾಗ ಅದು ಸ್ವಯಂಚಾಲಿತವಾಗಿ ಸರಿ ಹೋಗುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಸಮಯಕ್ಕೆ ಸರಿಯಾಗಿ ಇಎಂಐ ಕಟ್ಟಿ: ಸಾಲದ ಮೇಲೆ EMI ಗಳನ್ನು ಸಕಾಲದಲ್ಲಿ ಪಾವತಿ ಆಗಿದೆಯೋ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದೇ ಹೋದರೆ ಲೇಟ್ ಫೀ ಕಟ್ಟಬೇಕಾಗುತ್ತದೆ. ಇದು ಅನಗತ್ಯ ಹೊರೆಯಾಗಿ ಬದಲಾಗುತ್ತದೆ. ಅಷ್ಟೇ ಅಲ್ಲ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಬೀರುತ್ತದೆ. ಅಂತಹ ಸನ್ನಿವೇಶದಲ್ಲಿ, ಹೊಸ ಸಾಲ ಪಡೆಯಲು ಇದೇ ದೊಡ್ಡ ತೊಡಕಾಗಿ ಪರಿಣಮಿಸಬಹುದು. ಇದಕ್ಕಾಗಿ ನಿಮ್ಮ ಖಾತೆಯಲ್ಲಿ ಅಗತ್ಯ ಹಣವನ್ನು ಮೀಸಲಿರಿಸುವುದು ಉತ್ತಮ.
ಕಡಿಮೆ ಬಡ್ಡಿ ನೀಡುವ ಬ್ಯಾಂಕ್ಗಳ ಬಗ್ಗೆ ವಿಚಾರಿಸಿ, ಸೂಕ್ತ ಬ್ಯಾಂಕ್ ಹುಡಿಕಿ ಅಗತ್ಯ ಸಾಲ ಪಡೆದುಕೊಳ್ಳಿ. ಇಲ್ಲಿ ಪ್ರಮುಖ ಅಂಶ ಏನೆಂದರೆ ಅದು ಕನಿಷ್ಠ 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಇರಬೇಕು. ಆಗ ಮಾತ್ರ, ದೀರ್ಘಾವಧಿಯಲ್ಲಿ ನೀವು ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಸಾಲವನ್ನು ತೆಗೆದುಕೊಂಡ ನಂತರ, ನಿಮ್ಮ ಸಂಬಳವು ಹೆಚ್ಚಾಗಬಹುದು ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಸಹ ಉತ್ತಮವಾಗಬಹುದು.
ಅವಧಿಗೆ ಮುನ್ನವೇ ಸಾಲವನ್ನು ತೀರಿಸಿ: ನೀವು ಒಮ್ಮೆ ಸಾಲ ಪಡೆದ ಮೇಲೆ ನಿಮಗೆ ಅವಧಿಗೆ ಮುನ್ನವೇ ಸಾಲವನ್ನ ತೀರಿಸುವ ವ್ಯವಸ್ಥೆ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ, ಇಲ್ಲವೇ ಭಾಗಶಃ ಪಾವತಿ ವ್ಯವಸ್ಥೆ ಇದೆಯೇ ಎಂಬುದನ್ನು ನೀವು ಸಾಲ ಪಡೆಯುವಾಗ ತಿಳಿದುಕೊಳ್ಳುವುದು ಅಗತ್ಯ. ಆಗ ನಮ್ಮ ಕೈಯಲ್ಲಿ ಜಾಸ್ತಿ ಹಣ ಇದ್ದಾಗ ಹೆಚ್ಚುವರಿ ಇಎಂಐ ಕಟ್ಟಿ ಸಾಲದ ಹೊರೆಯನ್ನು ಬೇಗವೇ ಕಡಿಮೆ ಮಾಡಿಕೊಳ್ಳಬಹುದು.
EMI ಹೆಚ್ಚಳ: ವಾಸ್ತವವಾಗಿ, ನಿಮ್ಮ EMI ನಿಮ್ಮ ಮಾಸಿಕ ಆದಾಯದ ಶೇ 30 ರಿಂದ 40ರಷ್ಟನ್ನು ಮೀರಬಾರದು. ನಿಮ್ಮ ಆದಾಯ ಹೆಚ್ಚಾದರೆ, ನೀವು EMI ನಲ್ಲಿ ಹೆಚ್ಚಳವನ್ನು ಮಾಡಿಕೊಳ್ಳಬಹುದೇ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಇದು ನಿಮ್ಮ ಮಾಸಿಕ ಬಜೆಟ್‌ಗೆ ಧಕ್ಕೆಯಾಗುವುದಿಲ್ಲ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.
ಇದನ್ನು ಓದಿ:ಶೇರ್ ಟ್ರೇಡಿಂಗ್ ಮಾಡುವಿರಾ.. ಮೊದಲು ಈ ವಿಷಯಗಳನ್ನು ತಿಳಿದು ಹೂಡಿಕೆ ಮಾಡಿ..