ETV Bharat / business

ಇವರ ಉದ್ಯಮಕ್ಕೆ ಮಹಿಳೆಯರ ಸಂಪಾದನೆಯೇ ಮೊದಲ ಬಂಡವಾಳ - ಸಂಪ್ರದಾಯದಲ್ಲಿ ಮಹಿಳೆ ಮನೆ

ಮಹಿಳೆಯರ ಸಂಪಾದನೆ ಬಳಸಿ ಯಶಸ್ವಿ ಉದ್ಯಮಿ ಇವರು - ಗಂಡನ ಗುರಿ ಸಾಧನೆಗೆ ಹೆಗಲು ಕೊಟ್ಟ ಮಹಿಳೆಯರು - ಮಹಿಳೆಯ ಬೆಂಬಲಕ್ಕೂ ಹೇಳಬೇಕು ಹ್ಯಾಟ್ಸ್​ಆಫ್​​

ಇವರ ಉದ್ಯಮಕ್ಕೆ ಮಹಿಳೆಯರ ಸಂಪಾದನೆಯೇ ಮೊದಲ ಬಂಡವಾಳ
womens-income-was-the-first-investment-in-their-business
author img

By

Published : Jan 14, 2023, 4:56 PM IST

ಹೈದರಾಬಾದ್​: ಭಾರತದಲ್ಲಿ ಇಂದಿಗೂ ಪಿತೃತ್ವ ಕುಟುಂಬ ಮಾದರಿಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಅದರ ಅನುಸಾರ ಕುಟುಂಬದ ಮುಖ್ಯಸ್ಥ ಪುರುಷ. ಈ ಸಂಪ್ರದಾಯದಲ್ಲಿ ಮಹಿಳೆ ಮನೆಗೆ ಸೀಮಿತವಾಗಿ, ಮನೆಯ ಸಂಪಾದನೆ ಮೂಲ ಗಂಡು ಆಗಿರಲಿದ್ದಾನೆ. ಈ ಕಲ್ಪನೆ ಇದೀಗ ಬದಲಾವಣೆ ಕಾಣುತ್ತಿದೆ. ಅದರಲ್ಲೂ ವಿಶೇಷವಾಗಿ ಯುವಜನರಲ್ಲಿ. ಯುವ ಜನತೆ ಪಾಶ್ವಿಮಾತ್ಯ ಸಂಸ್ಕೃತಿಯಂತೆ ಮನೆಯ ಕಠಿಣ ಕೆಲಸಗಳಲ್ಲೂ ಭಾಗಿಯಾಗುತ್ತಿದ್ದಾರೆ. ಜೀವನ ಮಟ್ಟ ಏರಿಕೆಯಾಗುತ್ತಿರುವುದು ಇದಕ್ಕೆ ಕಾರಣ ಎಂದರೆ ತಪ್ಪಾಗಲಾರದು.

ಎಷ್ಟೇ ಸಂಪ್ರದಾಯ ಕಟ್ಟುಪಾಡುಗಳ ನಡುವೆಯೂ ಮಹಿಳೆಯರು ಕುಟುಂಬ ಕಾರಣಕ್ಕೆ ಗಂಡನ ಗುರಿ ಸಾಧನೆಯ ಪೂರೈಸಲು ಅವರ ಪರವಾಗಿ ನಿಂತು ಬೆಂಬಲಿಸುತ್ತಾರೆ. ಪುರುಷರು ತಮ್ಮ ಗುರಿ ಸಾಧಿಸುವ ವೃತ್ತಿಯಲ್ಲಿ ಬ್ಯುಸಿಯಾದರೆ, ಕುಟುಂಬದ ಜವಾಬ್ದಾರಿ ಹೊರುವ ಬಗ್ಗೆ ಕೇಳುತ್ತೇವೆ. ಗಂಡನ ಕನಸುಗಳ ನನಸು ಮಾಡಲು ಕನಸುಗಳನ್ನು ತ್ಯಾಗ ಮಾಡಿರುವುದನ್ನು ಕೇಳುತ್ತೇವೆ. ಪುರುಷರ ಯಶಸ್ಸಿನ ಆರಂಭಕ್ಕೆ ಅವರ ಉದ್ಯಮಕ್ಕಾಗಿ ಮಹಿಳೆಯರು ಆರಂಭದಲ್ಲಿ ಬಂಡವಾಳ ನೀಡುತ್ತಾರೆ ಎಂಬುದರ ಕುರಿತು ರಿಚಾ ಸಿಂಗ್​ ಎಂಬುವವರು ಇತ್ತೀಚಿಗೆ ಟ್ವಿಟರ್​ನಲ್ಲಿ ನೆನಪಿಸಿದ್ದರು.

ಆಕೆ ದುಡಿಯುತ್ತಾಳೆ... ನಾನು ಖರ್ಚು ಮಾಡುತ್ತೇನೆ: ನನ್ನ ಹೆಂಡತಿ ದುಡಿಯುತ್ತಾಳೆ. ನಾನು ಖರ್ಚು ಮಾಡುತ್ತೇನೆ ಎಂದು ಸಂಕೋಚದಿಂದಲೇ ತಿಳಿಸಿದ್ದಾರೆ ಫ್ಲಟ್​ಹೆಡ್ಸ್​ ಸಹ ಸಂಸ್ಥಾಪಕ ಗಣೇಶ್​ ಬಾಲಕೃಷ್ಣನ್​. ನಿಮ್ಮ ಹೆಂಡತಿಯ ಸಂಬಳದಲ್ಲಿ ನೀವು ಜೀವನ ಮಾಡುತ್ತಿದ್ದರೆ, ಭಾರತೀಯ ಸಮಾಜ ನಿಮ್ಮನ್ನು ಯಾವ ದೃಷ್ಟಿಕೋನದಿಂದ ನೋಡುತ್ತದೆ ಎಂಬುದನ್ನು ನಾನು ಅರ್ಥೈಸಿಕೊಳ್ಳುತ್ತೇವೆ ಎನ್ನುತ್ತಾರೆ ರಿಚಾ. ಅಲ್ಲದೇ, ಇಬ್ಬರು ಪ್ರಮುಖ ಉದ್ಯಮಿಗಳು ತಮ್ಮ ಹೆಂಡತಿಯರಿಂದ ಆರ್ಥಿಕ ಸಹಾಯ ಪಡೆದು ಹೇಗೆ ಯಶಸ್ವಿಯಾದರು ಎಂಬುದನ್ನು ಉಲ್ಲೇಖಿಸಿದ್ದಾರೆ.

ಸುಧಾಮೂರ್ತಿ ಬಂಡವಾಳ: ಇನ್ಫೋಸಿಸ್​ ಸಹ ಸಂಸ್ಥಾಪರಾದ ನಾರಾಯಣಮೂರ್ತಿ ತಮ್ಮ ಕಂಪನಿಯನ್ನು ಆರಂಭದಲ್ಲಿ ಕಟ್ಟಿದ್ದು, ಸುಧಾಮೂರ್ತಿ ನೀಡಿದ ಬಂಡವಾಳದಲ್ಲಿ. ಈ ಮೊದಲು ಈ ಸಂಬಂಧ ಮಾತನಾಡಿದ ನಾರಾಯಣ ಮೂರ್ತಿ, ನನ್ನ ಉದ್ಯಮದಲ್ಲಿ ನಾನು ವಿಫಲನಾದೆ. ಆ ಸಮಯದಲ್ಲಿ ಸುಧಾಮೂರ್ತಿ 10 ಸಾವಿರ ರೂಗಳನ್ನು ಸಾಲದ ರೂಪದಲ್ಲಿ ಇನ್ಫೋಸಿಸ್​ ಸಂಸ್ಥೆಗೆ ಮೊದಲ ಬಂಡವಾಳವಾಗಿ ನೀಡಿದರು ಎಂದಿದ್ದರು.

ಓಲಾ ಕ್ಯಾಬ್​ ಸಿಇಒ ಭಾವೇಶ್​ ಅಗರ್​ವಾಲ್​ ಕೂಡ ಆರಂಭದಲ್ಲಿ ಹೆಂಡತಿ ರಾಜಲಕ್ಷ್ಮಿ ಅಗರ್​ವಾಲ್​ ಅವರಿಂದ ಆರ್ಥಿಕ ಸಹಾಯ ಪಡೆದಿದ್ದರು. ಓಲಾದ ಆರಂಭದಲ್ಲಿ, ಆರ್ಡರ್​ಗಳು ಹೆಚ್ಚಿದ್ದಾಗ ಅವರು ಹೆಂಡತಿ ಕಾರ್​ ಅನ್ನು ಕ್ಯಾಬ್​ ಆಗಿ ಬಳಸಿದ್ದರು ಎಂಬುದನ್ನು ರಿಚಾ ಸಿಂಗ್​ ಹೇಳಿದ್ದಾರೆ.

ಹೆಂಡತಿ ಜೊತೆ ಜೀವನ: ಹೆಂಡತಿಯಿಂದ ಸಹಾಯ ಪಡೆದು ಅನೇಕ ಸಂಸ್ಥಾಪಕರು ಸ್ಟಾರ್ಟ್​ ಅಪ್​ಗಳನ್ನು ಕಟ್ಟಿದ್ದಾರೆ. ನಮ್ಮ ಜೀವನವೂ ನಾವು ಮದುವೆಯಾದವರೊಂದಿಗೆ ಅವಲಂಬಿತವಾಗಿದೆ ಎಂದಿದ್ದಾರೆ. ಅವರ ಈ ಪೋಸ್ಟ್​​ಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ನೆಟಿಜನ್​ಗಳು, ಹೆಚ್ಚು ಪ್ರಚಲಿತವಲ್ಲದ ಪ್ರಮುಖ ವಿಷಯವನ್ನು ಭಾರತದ ಸಮಾಜ ಅಭಿಪ್ರಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮತ್ತೊಂದು ಟ್ವಿಟರ್​ನಲ್ಲಿ ನೌಕ್ರಿ.ಕಾಮ್​ನ ಆರಂಭಕ್ಕೆ ಹೆಂಡತಿ ಹೇಗೆ ಬೆಂಬಲಿಸಿದಳು ಎಂದು ಸಂಜೀವ್​ ಬಿಕ್ಚಂದನಿ ತಿಳಿಸಿದ್ದಾರೆ. ಮತ್ತೊಂದು ಟ್ವೀಟಿಗರೊಬ್ಬರು ತಮ್ಮ ಹೆಂಡತಿ ಸಹಾಯ ಅಘಾದ, ನಾನು ಕೆಲಸ ತೊರೆದು ಮತ್ತೊಂದು ಕೆಲಸದ ಹುಡುಕಾಟ ನಡೆಸಿದಾಗ ಹೆಂಡತಿಯಿಂದ ಭದ್ರತೆಯ ಭರವಸೆ ಸಿಕ್ಕಿತು ಎಂದು ನೆನಪಿಸಿಕೊಂಡಿದ್ದಾರೆ.

ಇದು ಮಾತ್ರವಲ್ಲ. ಅನೇಕ ಮಹಿಳೆಯರು ನಿತ್ಯ ಜೀವನದಲ್ಲಿ ಯಾವುದೇ ನಿರೀಕ್ಷೆ ಪಡದೇ ಕುಟುಂಬಕ್ಕಾಗಿ ಕಷ್ಟಪಡುತ್ತಿದ್ದಾರೆ. ಇಂತಹ ಮಹಿಳೆಯರಿಗೆ ದೊಡ್ಡ ನಮಸ್ಕಾರಗಳನ್ನು ಹೇಳಲೇಬೇಕಿದೆ.

ಇದನ್ನೂ ಓದಿ: ತೆರಿಗೆ ಹೊರೆ ತಗ್ಗಿಸಲು, ದೀರ್ಘಾವಧಿ ಹೂಡಿಕೆಗೆ ಇಎಲ್ಎಸ್​ಎಸ್ ಫಂಡ್​ಗಳು ಸಹಕಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.