ಸರಿಯಾಗಿ ಇನ್ಸ್ಟಾಲ್ಮೆಂಟ್ಗಳನ್ನು (ಕಂತುಗಳು) ಕಟ್ಟುವ ತಮ್ಮ ಗ್ರಾಹಕರಿಗೆ ಬ್ಯಾಂಕ್ಗಳು ಉತ್ತಮ ಆಫರ್ಗಳನ್ನು ನೀಡುತ್ತವೆ. ಐದು ವರ್ಷಗಳ ಹಿಂದೆ ನೀವು ಗೃಹ ಸಾಲ ಪಡೆದಿದ್ದರೆ, ನಿಮ್ಮ ಮನೆಯ ಮೌಲ್ಯ ಇದೀಗ ಹೆಚ್ಚಿರುತ್ತದೆ. ಅದೇ ರೀತಿ ನಿಮ್ಮ ಆದಾಯ ಕೂಡ ಹೆಚ್ಚಾಗಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ಬ್ಯಾಂಕ್ಗಳು ನಿಮ್ಮ ಪ್ರಸ್ತುತ ಗೃಹ ಸಾಲದ ಮೇಲೆ ಟಾಪ್ ಅಪ್ ಲೋನ್ಗಳ ಆಫರ್ ನೀಡುತ್ತವೆ. ಇಂತಹ ಟಾಪ್ ಅಪ್ಗಳಿಗೆ ಯಾವಾಗ ನೀವು ಹೋಗಬಹುದು ಎಂಬುದರ ಮಾಹಿತಿ ಇಲ್ಲಿದೆ.
ಇಂದಿನ ದಿನದಲ್ಲಿ, ಗೃಹ ಸಾಲದ ಮೇಲಿನ ಬಡ್ಡಿದರ ಹೆಚ್ಚಳಗೊಂಡಿದೆ. 8.5 ರಿಂದ 9ರಷ್ಟು ಬಡ್ಡಿ ಹೆಚ್ಚಳಗೊಂಡಿದೆ. ಅಂದಾಜಿನ ಅನುಸಾರ, ಭವಿಷ್ಯದಲ್ಲಿ ಬಡ್ಡಿದರ 35 ನಿಂದ 50 ಬೇಸಿಸ್ ಪಾಯಿಂಟ್ ಹೆಚ್ಚಳಗೊಳ್ಳುವ ಸಾಧ್ಯತೆ ಇದೆ. ಇದರ ಮಧ್ಯೆ, ಬ್ಯಾಂಕ್ಗಳು ಹೊಸ ಸಾಲವನ್ನು ನೀಡುತ್ತಿವೆ. ಗೃಹ ಸಾಲ ಟಾಪ್ ಅಪ್ಗಳು ಎಲ್ಲಾ ಪ್ರಯೋಜನವನ್ನು ಹೊಂದಿರುವುದಿಲ್ಲ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 24ರ ಪ್ರಕಾರ, ಗೃಹ ಸಾಲಗಳು ಎರಡು ಲಕ್ಷದವರೆಗಿನ ತೆರಿಗೆ ಕಡಿತಕ್ಕೆ ಸಹಾಯಕವಾಗಲಿದೆ. ಸೆಕ್ಷನ್ 80 ಸಿಯ ಮೂಲಕ ಪ್ರಿನ್ಸಿಪಲ್ ಮಿತಿ ಅನುಸಾರ ತೆರಿಗೆ ವಿನಾಯಿತಿಯನ್ನು ಹೊಂದಬಹುದು. ಈ ಟಾಪ್ ಅಪ್ಗಳು ಈ ಸೌಲಭ್ಯವನ್ನು ಹೊಂದಿರುವುದಿಲ್ಲ.
ಟಾಪ್ ಅಪ್ ಅವಧಿ: ಹಣದ ಅವಶ್ಯಕತೆ ಇದ್ದಾಗ ಗೃಹ ಸಾಲದ ಮೇಲಿನ ಈ ಟಾಪ್ ಅಪ್ಗಳು ಕೆಲವು ಪ್ರಯೋಜನಗಳನ್ನು ಹೊಂದಿದೆ. ಟಾಪ್ ಅಪ್ ದೀರ್ಘ ಅವಧಿ ಹೊಂದಿದ್ದು, ವೈಯಕ್ತಿಕ ಅಥವಾ ಗೋಲ್ಡ್ ಲೋನ್ಗಳಿಗೆ ಹೋಲಿಸಿಕೊಂಡರೆ ಕಡಿಮೆ ಬಡ್ಡಿದರ ಹೊಂದಿದೆ. ಗೃಹದ ಸಾಲದ ಅವಧಿ ಹೋಲಿಸಿದರೆ, ಈ ಟಾಪ್ ಅಪ್ ಸಾಲದ ಅವಧಿ ನಿರ್ಧರಿಸಬಹುದು. ಗೃಹ ಸಾಲವನ್ನು 15 ವರ್ಷಕ್ಕೆ ನೀಡಿದರೆ, ಟಾಪ್ ಅಪ್ ಲೋನ್ಗಳಿಗೂ 15 ವರ್ಷಗಳ ಅವಧಿ ನೀಡಲಾಗುವುದು. ಇತರೆ ಲೋನ್ಗಳಿಗೆ ಈ ಅವಧಿ ಇರುವುದಿಲ್ಲ.
ವಿವಿಧ ಬ್ಯಾಂಕ್ಗಳು ವಿವಿಧ ನಿಯಮ ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ಗಳ ಟಾಪ್ ಅಪ್ ನಿಯಮವನ್ನು ಮೊದಲು ಅರಿಯಬೇಕು. ಒಟ್ಟಿಗೆ ನಿಮಗೆ ಹಣ ಬೇಡ ಎಂದರೆ, ಓವರ್ ಡ್ರಾಫ್ಟ್ ಸೌಲಭ್ಯಗಳು ಟಾಪ್ ಅಪ್ ಲೋನ್ಗಳಲ್ಲಿ ಪಡೆಯಬಹುದು. ಗೃಹ ಸಾಲಕ್ಕೆ ಹೋಲಿಕೆ ಮಾಡಿದರೆ, ಇದರ ಬಡ್ಡಿದರ ಕೊಂಚ ಹೆಚ್ಚಿದೆ. ದೀರ್ಘಾವಧಿಗೆ ಮತ್ತು ಬೇಕಾದಾಗ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಹಣ ಬಳಕೆಗೆ ತಕ್ಕಂತೆ ಈ ಬಡ್ಡಿದರ ಬದಲಾಗುತ್ತದೆ. ಆದರೆ, ಇದರ ಹೊರೆ ಹೆಚ್ಚಿರುವುದಿಲ್ಲ.
ಕಂತು ಪಾವತಿ ಅನುಸಾರ ಟಾಪ್ ಅಪ್: ಪ್ರಸ್ತುತ ಗೃಹ ಸಾಲದಲ್ಲಿ ಸಾಲದಾತರ ಎಲ್ಲಾ ಮಾಹಿತಿಗಳು ಬ್ಯಾಂಕ್ಗಳು ಹೊಂದಿರುತ್ತವೆ. ಇದು ಲೋನ್ ಇನ್ಸ್ಟಾಲ್ಮೆಂಟ್ಗಳು ಹೇಗೆ ಪಾವತಿಸಿದರು ಎಂಬುದನ್ನು ಇದು ತೋರಿಸುತ್ತದೆ. ಟಾಪ್ ಅಪ್ ತೆಗೆದುಕೊಳ್ಳಬೇಕು ಎಂದರೆ ಇನ್ಸ್ಟಾಲ್ಮೆಂಟ್ಗಳನ್ನು ಸರಿಯಾಗಿ ಪಾವತಿಸಿದ ಮಾಹಿತಿಯನ್ನು ತೋರಿಸಬೇಕಾಗುತ್ತದೆ. ಇದರ ಜೊತೆಗೆ ಆದಾಯ ಮತ್ತು ಇತರೆ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಆದಾಯ, ಗೃಹ ಸಾಲದ ಮೊತ್ತ, ಅಡಮಾನ ಇಟ್ಟ ಆಸ್ತಿಯ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಈ ಟಾಪ್ ಅಪ್ ಲೋನ್ ಮೌಲ್ಯ ನಿಗದಿಯಾಗುತ್ತದೆ.
ಗೃಹ ಸಾಲದ ಬಡ್ಡಿದರದಷ್ಟೇ ಈ ಟಾಪ್ ಅಪ್ ಲೋನ್ಗಳ ಬಡ್ಡಿದರ ಇದೆ. ಕೆಲವು ಬ್ಯಾಂಕ್ಗಳು ಮತ್ತು ಸಾಲ ಸಂಸ್ಥೆಗಳು ಈ ಟಾಪ್ ಅಪ್ ಲೋನ್ಗಳನ್ನು ಮುಂಗಡವಾಗಿ ನೀಡುತ್ತವೆ. ಅತಿ ಹೆಚ್ಚಿನ ಬಡ್ಡಿದರದಲ್ಲಿ ತೆಗೆದುಕೊಳ್ಳುವ ಬದಲಾಗಿ, ಹಣದ ಅವಶ್ಯಕತೆ ಇದ್ದಾಗ ಈ ಟಾಪ್ ಅಪ್ ಲೋನ್ ಪಡೆಯುವುದೊಳಿತು.
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: ಅಪಾಯದಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆ?