ETV Bharat / business

ಕೇಂದ್ರ ಬಜೆಟ್​ ಮಂಡನೆ: ಬಜೆಟ್​ ಭಾಷಣಕ್ಕೆ ಸ್ವಾದ ತುಂಬಿದ್ದ ವಿತ್ತ ಸಚಿವರ ಶಾಯಿರಿಗಳು

author img

By

Published : Jan 27, 2023, 7:53 PM IST

ಬಜೆಟ್​ನಲ್ಲಿ ಯಾವಾಗಲೂ ಅಂಕಿ ಅಂಶಗಳೇ ಇರುವುದರಿಂದ ಭಾಷಣ ನೀರಸವಾಗಿರುತ್ತದೆ. ಆದರೆ, ಕೆಲ ವರ್ಷಗಳಿಂದೀಚೆಗೆ ವಿತ್ತ ಸಚಿವರುಗಳು ತಮ್ಮ ಭಾಷಣದಲ್ಲಿ ಶಾಯಿರಿ, ಕವನ, ವಚನಗಳ ಸ್ವಾದವನ್ನು ತುಂಬುವ ಪ್ರವೃತ್ತಿ ಬೆಳೆದುಕೊಂಡು ಬರುತ್ತಿದ್ದಾರೆ. ಬಜೆಟ್​ ಮಂಡನೆ ವೇಳೆ ಯಾವ ನಾಯಕರು ಯಾವ ಕವಿತೆ ವಾಚಿಸಿದರು ಎನ್ನುವ ಮಾಹಿತಿ ಇಲ್ಲಿದೆ.

Manmohan singh and Nirmala Seetharaman
ಮನಬೋಹನ್​ ಸಿಂಗ್​ ಹಾಗೂ ನಿರ್ಮಲಾ ಸೀತರಾಮನ್​

ನವದೆಹಲಿ: ಕೇಂದ್ರದ ಬಜೆಟ್​ ಮಂಡನೆಗೆ ದಿನಗಣನೆ ಪ್ರಾರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಕೇಂದ್ರ ಬಜೆಟ್​ ಮಂಡನೆಗೆ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ. ವಿತ್ತ ಸಚಿವರು ಎಷ್ಟರ ಮಟ್ಟಿಗೆ ಬಜೆಟ್​ ಮಂಡನೆಗೆ ಕಾತುರರಾಗಿದ್ದಾರೋ ಅಷ್ಟೇ ದೇಶದ ಜನರು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಜೆಟ್​ ಮಂಡನೆಯೆಂದರೆ ಸುದೀರ್ಘವಾದ ಲೆಕ್ಕಾಚಾರದ ಬರವಣಿಗೆಯೊಂದನ್ನು ಹಣಕಾಸು ಸಚಿವರು ಓದುತ್ತಾರೆ. ಈ ನೀರಸವಾದ ಭಾಷಣವನ್ನು ಸ್ವಲ್ಪ ರಸವತ್ತಾಗಿ ಮಾಡಲು ವಿತ್ತ ಸಚಿವರುಗಳು ಬಜೆಟ್​ ಮಂಡನೆ ಮಾಡುವ ಮೊದಲು ಕಾವ್ಯಗಳ ಅಥವಾ ವಚನಗಳ ಮೂಲಕ ಪ್ರಾರಂಭಿಸುವುದು ಹೆಚ್ಚು ಆಕರ್ಷವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಈ ಬಜೆಟ್​ ಮಂಡನೆಯನ್ನು ಕಾವ್ಯಗಳ ಮೂಲಕ ಪ್ರಾರಂಭಿಸುವುದು ಸದನದ ವಾತಾವರಣವನ್ನು ತಿಳಿಗೊಳಿಸುವಲ್ಲಿ ಪಾತ್ರ ವಹಿಸಿದೆ. ಕೆಲವು ವರ್ಷಗಳ ಹಿಂದೆ ಬಜೆಟ್​ ಮಂಡನೆಯೆಂದರೆ ವಿತ್ತ ಸಚಿವರು ಭವಿಷ್ಯದ ಯೋಜನೆಗಳು, ಯೋಜನೆಗಳಿಗಾಗಿ ಸರ್ಕಾರ ವ್ಯಯಿಸುವ ಹಣಕಾಸಿನ ಲೆಕ್ಕಾಚಾರದ ವರದಿಯಾಗಿರುತ್ತಿತ್ತು. ಆದರೆ 1991- 92ರ ಕೇಂದ್ರ ಬಜೆಟ್​ ಮಂಡಿಸಿದ ಹಣಕಾಸು ಸಚಿವ ಮನಮೋಹನ್​ ಸಿಂಗ್​ ಅವರಿಂದ ಪ್ರಾರಂಭಿಸಿ ಕಳೆದ ಬಾರಿಯ ಬಜೆಟ್​ ಮಂಡಿಸಿದ ಹಾಗೂ ಈ ವರ್ಷದ ಬಜೆಟ್​ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ವರೆಗೆ ಈ ವಚನ, ಕಾವ್ಯಗಳನ್ನು ಓದುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದಾರೆ.

ಒಂದಲ್ಲ ಹಲವಾರು ಬಾರಿ ನೀರಸ ಎನಿಸುವ ಕೇಂದ್ರದ ಬಜೆಟ್​ಗೆ ತಮ್ಮ ಕಾವ್ಯ, ವಚನಗಳ ವಾಚನದ ಮೂಲಕ ರಸ ತುಂಬಿದ್ದಾರೆ. ಬಜೆಟ್​ ಮಂಡನೆಯ ಹೊಸ್ತಿಲಲ್ಲಿರುವ ಈ ಹೊತ್ತಲ್ಲಿ, ಇದುವರೆಗೆ ತಮ್ಮ ಕಾವ್ಯ ವಾಚನದ ಮೂಲಕ ಬಜೆಟ್​ನನ್ನು ಒಂದಷ್ಟು ಆಕರ್ಷಣೀಯವಾಗಿಸಿದ ಬಜೆಟ್​ ಮಂಡನೆ ಮತ್ತು ವಿತ್ತ ಸಚಿವರತ್ತ ಒಂದು ನೋಟ ಇಲ್ಲಿದೆ...

ನಾಲ್ಕು ಬಾರಿ ಬಜೆಟ್​ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್​ ಅವರು ವಿತ್ತ ಸಚಿವೆಯಾದ ಬಳಿಕ ಇದುವರೆಗೆ ನಾಲ್ಕು ಬಾರಿ ಬಜೆಟ್​ ಮಂಡನೆ ಮಾಡಿದ್ದು, ಈ ಬಾರಿ ಐದನೇ ಬಜೆಟ್​ ಮಂಡನೆಗೆ ತಯಾರಾಗಿದ್ದಾರೆ. 2022ರಲ್ಲಿ ತಮ್ಮ ನಾಲ್ಕನೇ ಬಜೆಟ್​ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್​, ರಾಜನಾದವನು ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಅದಕ್ಕಾಗಿ ಬೇಜವಾಬ್ದಾರಿ ಬಿಟ್ಟು ಧರ್ಮದ ಮಾರ್ಗದಲ್ಲಿ ನಡೆಯಬೇಕು. ಸರಿಯಾಗಿ ತೆರಿಗೆ ವಸೂಲಿ ಮಾಡಿ, ಅದನ್ನು ಜನರ ಕಲ್ಯಾಣಕ್ಕಾಗಿ ಸದುಪಯೋಗಪಡಿಸಿಕೊಳ್ಳಬೇಕು ಎನ್ನುವ ಭಾವಾರ್ಥವಿದ್ದ ಕಾವ್ಯದ ಭಾಗವನ್ನು ಓದಿದ್ದರು.

2021ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣದ ಮಧ್ಯದಲ್ಲಿ ರವೀಂದ್ರನಾಥ ಠಾಗೋರರ ಕವಿತೆಯನ್ನು ವಾಚಿಸಿದ್ದರು. 'ಬೆಳಗ್ಗೆ ಕತ್ತಲಾದರೂ, ಆ ಕತ್ತಲಲ್ಲೂ ಬೆಳಕನ್ನು ಅನುಭವಿಸುವ ಹಕ್ಕಿಯೇ ನಂಬಿಕೆ.' ಎಂಬ ಕಾವ್ಯದ ಸಾಲುಗಳನ್ನು ಉದ್ಧರಿಸಿದ್ದರು. 2020ರ ಕೇಂದ್ರ ಬಜೆಟ್ ಉದ್ಘಾಟನಾ ಭಾಷಣದಲ್ಲಿ ಕಾಶ್ಮೀರಿ ಕವಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಂಡಿತ್ ದೀನಾನಾಥ್ ಕೌಲ್ ಅವರು ಬರೆದ ಕವನವನ್ನು ವಾಚಿಸಿದ್ದರು.

ಈ ಕವಿತೆಯು ಕಾಶ್ಮೀರದ ಶಾಲಿಮಾರ್ ಬಾಗ್ ಮತ್ತು ದಾಲ್ ಸರೋವರವನ್ನು ಉಲ್ಲೇಖಿಸುತ್ತದೆ. ಭಾರತವು ಎಲ್ಲಾ ನಾಗರಿಕರಿಗೆ ಸೇರಿದೆ ಎಂದು ಒತ್ತಿ ಹೇಳುತ್ತದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಇದು ನಡೆದಿದೆ. ಕವಿತೆಯ ಕೆಲವು ಸಾಲುಗಳು ಹೀಗಿವೆ- 'ನಮ್ಮ ದೇಶ ಶಾಲಿಮಾರ್ ಬಾಗ್ ಇದ್ದಂತೆ, ನಮ್ಮ ದೇಶ ದಾಲ್ ಸರೋವರದಲ್ಲಿ ಅರಳಿದ ಕಮಲದಂತೆ, ನಮ್ಮ ದೇಶ ಯುವಕರ ಬೆಚ್ಚಗಿನ ರಕ್ತದಂತಿದೆ, ನಮ್ಮ ದೇಶ ವಿಶ್ವದಲ್ಲೇ ಅತ್ಯಂತ ಪ್ರೀತಿಯ ದೇಶ...'

2019ರ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉರ್ದು ಬರಹಗಾರ ಮಂಜೂರ್ ಹಶ್ಮಿ ಅವರ ದ್ವಿಪದಿಯನ್ನು ಉಲ್ಲೇಖಿಸಿ, ಮುಂದಿನ ಕೆಲವು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಭಾರತದ ದಿಟ್ಟ ಗುರಿಯನ್ನು ಒತ್ತಿ ಹೇಳಿದ್ದರು.

2017 ರಲ್ಲಿ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಬಜೆಟ್​ ಮಂಡನೆ ಮಾಡಿದ್ದರು. ಸರ್ಕಾರ ಕಪ್ಪುಹಣದ ವಿರುದ್ಧ ಸಮರ ಸಾರಿದ ಬಜೆಟ್‌ನಲ್ಲಿ ಜೇಟ್ಲಿ ಹೊಸ ಸರ್ಕಾರವನ್ನು ಸ್ವಾಗತಿಸಲು ಕವನವೊಂದನ್ನು ಹೇಳಿದ್ದರು. 'ಇದು ಹೊಸ ಜಗತ್ತು, ಇದು ಹೊಸ ಯುಗ, ಇದು ಹೊಸ ಉತ್ಸಾಹ, ಕೆಲವು ಈಗಾಗಲೇ ಕತ್ತಲೆಯಾಗಿದೆ ಮತ್ತು ಕೆಲವು ಇಂದಿನ ಬಣ್ಣಗಳು; ಎಂಬ ಅರ್ಥಗಳಿರುವ ಸಾಲುಗಳನ್ನು ಹೇಳಿದ್ದರು.

2016ರಲ್ಲಿ ಬಜೆಟ್​ ಮಂಡಿಸಿದ್ದ ಅರುಣ್ ಜೇಟ್ಲಿ ಅವರು ಹಿಂದಿನ ಸರ್ಕಾರದಿಂದ ಬಂದ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡಿದ್ದರು. ಅದನ್ನು ಹೇಗೆ ಸರಿಪಡಿಸಬೇಕು ಎಂದು ನನಗೆ ತಿಳಿದಿದೆ ಎಂದು ಹೇಳಿದ್ದ ಅವರು, ಇದೇ ರೀತಿಯ ಪರಿಸ್ಥಿತಿಯನ್ನು ವಿವರಿಸುವ ಉರ್ದು ಕಾವ್ಯವೊಂದನ್ನು ಹೇಳಿದ್ದರು. ಆ ಸಾಲುಗಳು ಹೀಗಿವೆ - ’’ನಮ್ಮ ದೋಣಿಯನ್ನು ಅಲೆಗಳ, ಬಿರುಗಾಳಿಗಳ ಮೂಲಕ ಸೋಲಿಸಲಾಯಿತು, ಎಷ್ಟೇ ಬಿರುಗಾಳಿ, ಅಲೆಗಳು ಬಂದರೂ ನದಿಯನ್ನು ಧೈರ್ಯದಿಂದ ದಾಟಲು ನಮ್ಮ ಕೈಯ್ಯಲ್ಲಿ ಹುಟ್ಟು ಇದೆ’’ ಎಂದಿದ್ದರು.

2013ರಲ್ಲಿ ಹಣಕಾಸು ಸಚಿವರಾಗಿದ್ದ ಪಿ ಚಿದಂಬರಂ ಅವರು ಬಜೆಟ್​ ಮಂಡನೆ ಮಾಡಿದ್ದರು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡರೆ ಭಾರತ ಪ್ರಗತಿ ಹೊಂದಬಹುದು ಎಂದು ಹೇಳಿದ್ದ ಚಿದಂಬರಂ ಅವರು ತಮ್ಮ ಚಿಂತನೆಗಳನ್ನು ವಿವರಿಸಲು ತಮಿಳಿನಲ್ಲಿ ಒಂದು ಕವಿತೆಯನ್ನು ಓದಿದ್ದರು. ಕವನದ ಸಾಹಿತ್ಯ ಹೀಗಿದೆ...’’ಕಳಂಗಾತು ಕಂಡ ವಿನಯಕ್ಕನ ತುಳಂಗಾತು ತುಕ್ಕಂಗ್ ಕಡಿಂತು ಸೇಯಲ್.. ಅದರರ್ಥ ದೃಷ್ಟಿಕೋನ ಸ್ಪಷ್ಟವಾಗಿ, ಸರಿಯಾಗಿರುವ ಮತ್ತು ಸಾಧಿಸುವ ಬಲವಾದ ಛಲ ಇರುವವನು ಅಂದುಕೊಂಡದ್ದನ್ನು ನೆರವೇರಿಸುತ್ತಾನೆ’’ ಎಂಬುದಾಗಿತ್ತು.

2005 ರ ಬಜೆಟ್​ ಅನ್ನು ಅಂದಿನ ಹಣಕಾಸು ಸಚಿವರಾಗಿದ್ದ ಜಸ್ವಂತ್ ಸಿಂಗ್ ಮಂಡಿಸಿದ್ದರು. ಅವರೂ ಕವಿತೆಯೊಂದರ ಸಾಲುಗಳಿಂದಲೇ ಬಜೆಟ್​ ಮಂಡಿಸಿದ್ದರು. 2001 ರ ಬಜೆಟ್​ ಮಂಡಿಸಿದ್ದ ಯಶವಂತ್ ಸಿನ್ಹಾ ಅವರು, ಬಜೆಟ್‌ನಲ್ಲಿ ನಿಗದಿಪಡಿಸಲಾದ ಸುಧಾರಣೆಗಳು ಎರಡನೇ ತಲೆಮಾರಿನ ಸುಧಾರಣೆಗಳು, ಬೆಳವಣಿಗೆ ಮತ್ತು ದಕ್ಷತೆಯೊಂದಿಗೆ ಇಕ್ವಿಟಿಯನ್ನು ಗುರಿಯಾಗಿಸಿಕೊಂಡಿವೆ ಎಂದು ಹೇಳುವ, ಇದಕ್ಕೆ ಒತ್ತು ನೀಡುವಂತಹವ ಕವಿತೆ ವಾಚಿಸಿದ್ದರು. ನಾವು ತೀರದಲ್ಲಿ ಎಷ್ಟು ದೂರ ನಡೆಯುತ್ತೇವೆ ಎನ್ನುವುದ ಮುಖ್ಯವಲ್ಲ, ಸಮಯದ ಚಂಡಮಾರುತದ ವಿರುದ್ಧ ಹೋರಾಡುವುದು ಅವಶ್ಯಕ ಎನ್ನುವ ಸಾಲುಗಳಾಗಿದ್ದವು ಅವು.

1991ರಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ಐತಿಹಾಸಿಕ ಬಜೆಟ್​ ಮಂಡನೆ ಮಾಡಿದ್ದರು. ಭಾಷಣದಲ್ಲಿ ಹಲವಾರು ಆರ್ಥಿಕ ಸುಧಾರಣೆಗಳನ್ನು ತಂದರು, ಮಾಜಿ ಪ್ರಧಾನಿ ಅಲ್ಲಾಮ ಇಕ್ಬಾಲ್ ಅವರನ್ನು ಉಲ್ಲೇಖಿಸಿದ್ದರು.

ಇದನ್ನೂ ಓದಿ: ಕೇಂದ್ರ ಬಜೆಟ್​ 2023: ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾದ 9.4 ಲಕ್ಷ ಕೋಟಿ ಬಡ್ಡಿ ಪಾವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.