ETV Bharat / business

ವಾಲ್​​​ಸ್ಟ್ರೀಟ್​​ನಲ್ಲಿ ಮುಂದುವರಿದ ಏರಿಳಿತ.. ಟೆಕ್​​ ಷೇರುಗಳ ಅಬ್ಬರ..ನಾಸ್ಡಾಕ್​​​​​​​​​ನಲ್ಲಿ ಉತ್ಸಾಹ - ಅಮೆರಿಕದ ಫೆಡರಲ್​ ಬ್ಯಾಂಕ್​

ಅಮೆರಿಕದ ಫೆಡರಲ್​ ಬ್ಯಾಂಕ್​ ಚೇರಮನ್​ ಜೆರೋಮ್ ಪೊವೆಲ್ ಅವರು ಹಣದುಬ್ಬರ ನಿಯಂತ್ರಣ ಮಾಡುವ ಯುದ್ಧದಲ್ಲಿ ಕೇಂದ್ರೀಯ ಬ್ಯಾಂಕ್ ಅಂತಿಮವಾಗಿ ಪ್ರಗತಿಯನ್ನು ನಿರೀಕ್ಷಿಸುತ್ತಿದೆ ಎಂದು ಹೇಳಿದ್ದಾರೆ. ಇದು ಷೇರು ಮಾರುಕಟ್ಟೆಯಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.

Wall Street's rally rolls on, led by torrid tech stocks
ವಾಲ್​​​ಸ್ಟ್ರೀಟ್​​ನಲ್ಲಿ ಮುಂದುವರಿದ ಏರಿಳಿತ.. ಟೆಕ್​​ ಷೇರುಗಳ ಅಬ್ಬರ..ನಾಸ್ಡಾಕ್​​​​​​​​​ನಲ್ಲಿ ಉತ್ಸಾಹ
author img

By

Published : Feb 3, 2023, 6:55 AM IST

ನ್ಯೂಯಾರ್ಕ್: ವಾಲ್ ಸ್ಟ್ರೀಟ್​​ ನಲ್ಲಿ ಷೇರು ಖರೀದ ಅಬ್ಬರ ಜೋರಾಗಿತ್ತು. ಫೇಸ್​​ಬುಕ್​​ ಹಾಗೂ ಅದರ ಸಂಬಂಧಿ ಷೇರುಗಳು ಏರಿಕೆ ದಾಖಲಿಸಿದವು. ಅದರಲ್ಲೂ ಟೆಕ್​ ಸ್ಟಾಕ್​ಗಳಲ್ಲಿ ಮೇರೆ ಮೀರಿದ ಉತ್ಸಾಹ ಕಂಡುಬಂತು. ಈ ಮೂಲಕ S&P 500 ಆಗಸ್ಟ್‌ನಿಂದ ಗರಿಷ್ಠ ಮಟ್ಟವನ್ನು ಮುಟ್ಟಿದ ನಂತರ ಒಂದು ದಿನದ ಮಧ್ಯಾಹ್ನದ ವಹಿವಾಟಿನಲ್ಲಿ ಶೇ 1.5 ಏರಿಕೆ ದಾಖಲಿಸಿದೆ.

ನಾಸ್ಡಾಕ್ ಷೇರುಪೇಟೆ ಶೇ 3.1 ಏರಿಕೆ ದಾಖಲಿಸಿದೆ. ಇನ್ನೊಂದೆಡೆ ಡೌ ಜೋನ್ಸ್ ಇಂಡಸ್ಟ್ರಿಯಲ್ ಎವರೇಜ್ ಮಂದಗತಿಯಲ್ಲಿದೆ. ಡೌ ಜೋನ್ಸ್​ ಮಾರುಕಟ್ಟೆಯಲ್ಲಿ ಟೆಕ್​ ಷೇರುಗಳಿಗೆ ಅಷ್ಟೊಂದು ಒತ್ತು ನೀಡುವುದಿಲ್ಲ. ಹಾಗಾಗಿ ಇಲ್ಲಿ ಕೊಂಚ ಕುಸಿತ ಕಂಡು ಬಂದಿದೆ. ವಿಶ್ಲೇಷಕರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೆಟಾ ಕಂಪನಿ ಷೇರುಗಳ ಬೆಲೆಯಲ್ಲಿ ಶೇ 26 ರಷ್ಟು ಹೆಚ್ಚಳ ಕಂಡು ಬಂದಿದೆ. ಆದರ ಕಂಪನಿಯ ಇತ್ತೀಚನ ಲಾಭವು ನಿರೀಕ್ಷೆಗಿಂತ ಕಡಿಮೆಯಿದ್ದರೂ, ಫೇಸ್‌ಬುಕ್‌ ಆಡಳಿತ ಮಂಡಳಿ 40 ಶತಕೋಟಿ ಡಾಲರ್​ನಷ್ಟು ಷೇರುಗಳನ್ನು ಮರಳಿ ಖರೀದಿಸುವ ಕಾರ್ಯಕ್ರಮ ಘೋಷಿಸಿದರು.

ಫೆಡರಲ್ ರಿಸರ್ವ್ ತನ್ನ ಬಡ್ಡಿದರಗಳ ಹೆಚ್ಚಳಕ್ಕೆ ಶೀಘ್ರ ವಿರಾಮ ನೀಡಬಹುದು ಎಂದು ಹೇಳಲಾಗುತ್ತಿದ್ದು, ಇದೇ ಭರವಸೆಯ ಮೇಲೆ ವರ್ಷದ ಆರಂಭದಲ್ಲಿ ಷೇರುಗಳು ಈಗಾಗಲೇ ಏರಿಳಿತಗೊಂಡಿವೆ. ಫೆಡರಲ್​ ಬ್ಯಾಂಕ್​ ಬಡ್ಡಿದರ ಏರಿಕೆ ಮಾಡುವುದರಿಂದ ಹಣದುಬ್ಬರವೇನೋ ನಿಯಂತ್ರಣಕ್ಕೆ ಬರುತ್ತದೆ. ಆದರೆ, ಆರ್ಥಿಕತೆ ಮತ್ತು ಹೂಡಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಇದನ್ನು ಓದಿ: ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಳ: ಆಭರಣ ಪ್ರಿಯರಿಗೆ ಶಾಕ್‌! ಹೀಗಿದೆ ಹೊಸ ದರ..

ಫೆಡ್ ಚೇರ್ ಜೆರೋಮ್ ಪೊವೆಲ್ ಅವರು ಹಣದುಬ್ಬರ ನಿಯಂತ್ರಣ ಮಾಡುವ ಯುದ್ಧದಲ್ಲಿ ಕೇಂದ್ರೀಯ ಬ್ಯಾಂಕ್ ಅಂತಿಮವಾಗಿ ಪ್ರಗತಿಯನ್ನು ನಿರೀಕ್ಷಿಸುತ್ತಿದೆ ಎಂದು ಹೇಳಿದ್ದಾರೆ. ಇದು ಷೇರುಪೇಟೆಯಲ್ಲಿ ಹರ್ಷಕ್ಕೆ ಕಾರಣವಾಗಿದೆ. ಬಡ್ಡಿ ದರ ಕಡಿತವು ಮಾರುಕಟ್ಟೆಗಳಿಗೆ ಸ್ಟೀರಾಯ್ಡ್‌ಗಳಂತೆ ಕಾರ್ಯನಿರ್ವಹಿಸುತ್ತದೆ. ಬೆಲೆಗಳನ್ನು ರಸಭರಿತಗೊಳಿಸುತ್ತದೆ ಮತ್ತು ಆರ್ಥಿಕತೆಗೆ ಬೆಂಬಲವನ್ನು ನೀಡುತ್ತದೆ.

ಹಣದುಬ್ಬರ ನಿಯಂತ್ರಣಕ್ಕೆ ಬಂದರೆ ಫೆಡ್​ ಬಡ್ಡಿದರ ಏರಿಕೆಯನ್ಹು ನಿಲ್ಲಿಸಬಹುದು. ಮೀತಿಮೀರಿ ಹಣದುಬ್ಬರ ಏರಿಕೆ ಕಾಣುತ್ತಿದ್ದರೆ, ಕಠಿಣ ಕ್ರಮ ಅನಿವಾರ್ಯವಾಗುತ್ತದೆ. ಆಗ ಮಾರುಕಟ್ಟೆಯಲ್ಲಿ ನಿರುತ್ಸಾಹ ಕಂಡು ಬರುವುದು ಕಾಮನ್​.

ವಾಲ್​​ಸ್ಟ್ರೀಟ್‌ನ ಮುಂದಿನ ದೊಡ್ಡ ಈವೆಂಟ್ ಆಪಲ್, ಅಮೆಜಾನ್ ಮತ್ತು ಗೂಗಲ್‌ನ ಮೂಲ ಕಂಪನಿಯಾದ ಆಲ್ಫಾಬೆಟ್ ಸೇರಿದಂತೆ ಇತರ ಷೇರುಗಳ ಬೆಲೆ ಶೇ 3 ರಷ್ಟು ಏರಿಕೆ ಕಂಡು ಬಂದಿವೆ. ಇದು S&P 500 ಮತ್ತು ಇತರ ಸೂಚ್ಯಂಕಗಳ ಮೇಲೆ ಹೆಚ್ಚು ಪ್ರಭಾವ ಬೀರುವಂತೆ ಮಾಡಿದೆ. ದೊಡ್ಡ ದೊಡ್ಡ ತಂತ್ರಜ್ಞಾನ ಕಂಪನಿಗಳು ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ನೌಕರರನ್ನು ವಜಾ ಮಾಡಿವೆ. ಆದರೆ, ಗುರುವಾರದ ವರದಿಯು ಉದ್ಯೋಗ ಕಡಿತಗಳು ಇನ್ಮುಂದೆ ವ್ಯಾಪಕವಾಗಿರಲ್ಲ ಎಂದು ಸೂಚಿಸಿದೆ.

ಇದನ್ನು ಓದಿ:ಅದಾನಿ ಗ್ರೂಪ್​​ನೊಂದಿಗಿನ ವ್ಯವಹಾರದ ಮಾಹಿತಿ ನೀಡುವಂತೆ ಎಲ್ಲ ಬ್ಯಾಂಕ್​ಗಳಿಗೆ ಆರ್​ಬಿಐ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.