ETV Bharat / business

ನೀವು ಯಾವ ಪದ್ಧತಿಯಲ್ಲಿ ತೆರಿಗೆ ಪಾವತಿಸುತ್ತೀರಿ..? ನಿಮ್ಮ ಸಹಾಯಕ್ಕೆ IT ಇಲಾಖೆಯಿಂದ ಕ್ಯಾಲ್ಕುಲೇಟರ್ ವ್ಯವಸ್ಥೆ! - ರಿಟರ್ನ್ಸ್ ಫಾರ್ಮ್‌ಗಳನ್ನು ಬಿಡುಗಡೆ

ಹಳೆಯ ಅಥವಾ ಹೊಸ ತೆರಿಗೆ ವ್ಯವಸ್ಥೆಗಳಲ್ಲಿ ಯಾವುದು ಪ್ರಯೋಜನಕಾರಿ ಎಂಬ ಅನುಮಾನ ಎಲ್ಲರಿಗೂ ಇದೆ. ಈ ಬಗ್ಗೆ ಸ್ಪಷ್ಟತೆಯನ್ನು ಒದಗಿಸಲು, ತೆರಿಗೆ ಕ್ಯಾಲ್ಕುಲೇಟರ್ ಅನ್ನು ಆದಾಯ ತೆರಿಗೆ ಇಲಾಖೆ ತನ್ನ ಅಧಿಕೃತ ಪೋರ್ಟಲ್‌ನಲ್ಲಿ ಹೊಸದಾಗಿ ಪರಿಚಯಿಸಿದೆ. www.incometax.gov.in ಬೇಟಿ ನೀಡ ಆ ಬಗ್ಗೆ ತಿಳಿದುಕೊಳ್ಳಬಹುದು.

Visit IT department website for newly launched Tax Calculator
ನೀವು ಯಾವ ಪದ್ಧತಿಯಲ್ಲಿ ತೆರಿಗೆ ಪಾವತಿಸುತ್ತೀರಿ..? ನಿಮ್ಮ ಸಹಾಯಕ್ಕೆ IT ಇಲಾಖೆಯಿಂದ ಕ್ಯಾಲ್ಕುಲೇಟರ್ ವ್ಯವಸ್ಥೆ!
author img

By

Published : Feb 27, 2023, 8:08 AM IST

ಹೈದರಾಬಾದ್: ಯಾವುದೇ ಸಂದರ್ಭದಲ್ಲೂ ತೆರಿಗೆ ಲೆಕ್ಕಾಚಾರವನ್ನು ನಿರ್ಲಕ್ಷಿಸಬಾರದು. ನೀವು ಎಷ್ಟು ತೆರಿಗೆ ಪಾವತಿಸಬೇಕು ಮತ್ತು ಹಳೆಯ ಅಥವಾ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಯಾವುದು ನಮಗೆ ಪ್ರಯೋಜನಕಾರಿ ಎಂಬ ಬಗ್ಗೆ ಯೋಚಿಸಿ ಮುಂದುವರಿಯುವುದು ಲೇಸು. ಹೀಗಂತಾ ಅದರಲ್ಲೇ ಸಮಯ ವ್ಯರ್ಥ ಮಾಡುವುದು ಬೇಡ. ತೆರಿಗೆ ಪಾವತಿದಾರರಿಗೆ ಸಹಾಯ ಮಾಡಲು, ಆದಾಯ ತೆರಿಗೆ (ಐಟಿ) ಇಲಾಖೆ ತನ್ನ ಪೋರ್ಟಲ್‌ನಲ್ಲಿ ತೆರಿಗೆ ಕ್ಯಾಲ್ಕುಲೇಟರ್ ಅನ್ನು ಹೊಸದಾಗಿ ಪರಿಚಯಿಸಿದೆ. ಇದನ್ನು ಬಳಸುವುದರಿಂದ ಯಾವ ವ್ಯವಸ್ಥೆಯಲ್ಲಿ ಎಷ್ಟು ತೆರಿಗೆ ಅನ್ವಯವಾಗುತ್ತದೆ. ಯಾವುದು ಪ್ರಯೋಜನಕಾರಿ ಎಂಬಂತಹ ವಿಷಯಗಳನ್ನು ಸುಲಭವಾಗಿ ಕಂಡುಹಿಡಿಯಬಹುದು.

ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ ತೆರಿಗೆ ರಿಟರ್ನ್ಸ್ ಸಲ್ಲಿಸಲು ಏಪ್ರಿಲ್ 1 ರಿಂದ ಅನುಮತಿಸಲಾಗುವುದು. ಈಗಾಗಲೇ ರಿಟರ್ನ್ಸ್ ಫಾರ್ಮ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರಲ್ಲಿ ತೆರಿಗೆ ಅರಿವು ಹೆಚ್ಚಿಸಲು ಐಟಿ ತೆರಿಗೆ ಕ್ಯಾಲ್ಕುಲೇಟರ್ ಅನ್ನು ರೂಪಿಸಿದೆ. ಹೊಸ ಮತ್ತು ಹಳೆಯ ವ್ಯವಸ್ಥೆಗಳಲ್ಲಿ ನಿಮ್ಮ ಅನ್ವಯವಾಗುವ ತೆರಿಗೆ ಬಗ್ಗೆ ತಿಳಿಯಲು, ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ - www.incometax.gov.in ಲಾಗಿನ್​ ಆಗಿ, ಐಟಿ ತೆರಿಗೆ ಕ್ಯಾಲ್ಕುಲೇಟರ್‌ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಏನೆಲ್ಲ ಮಾಹಿತಿ ಪಡೆಯಬಹುದು: ತ್ವರಿತ ಲಿಂಕ್‌ಗಳಲ್ಲಿ ನೀವು 'ಆದಾಯ ತೆರಿಗೆ ಕ್ಯಾಲ್ಕುಲೇಟರ್' ಅನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿದರೆ ಎರಡು ಆಯ್ಕೆಗಳು ಕಾಣಿಸುತ್ತವೆ. 1) ಮೂಲ ಕ್ಯಾಲ್ಕುಲೇಟರ್. 2) ಸುಧಾರಿತ ಕ್ಯಾಲ್ಕುಲೇಟರ್. ಎರಡನ್ನೂ ಬಳಸಿ, ಎಷ್ಟು ತೆರಿಗೆ ಅನ್ವಯವಾಗುತ್ತದೆ ಎಂದು ತಿಳಿಯಬಹುದು. ಮೂಲ ಕ್ಯಾಲ್ಕುಲೇಟರ್‌ನಲ್ಲಿ, ನೀವು ಮೌಲ್ಯಮಾಪನದ ವರ್ಷ, ತೆರಿಗೆದಾರರ ವರ್ಗ (ವೈಯಕ್ತಿಕ, HUF, LLP ನಂತಹ), ತೆರಿಗೆದಾರರ ವಯಸ್ಸು, ವಸತಿ ಸ್ಥಿತಿ ಇತ್ಯಾದಿಗಳನ್ನು ಆಯ್ಕೆ ಮಾಡಬೇಕು. ನಿಮ್ಮ ವಾರ್ಷಿಕ ಆದಾಯ ಮತ್ತು ನಿಮ್ಮ ಒಟ್ಟು ಕಡಿತಗಳನ್ನು ನಮೂದಿಸಿ. ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳ ಅಡಿ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬುದು ನಮಗೆ ನೇರವಾಗಿ ತಿಳಿಯುತ್ತದೆ.

ಹಳೆಯದು ಮತ್ತು ಹೊಸತು ಇದರಲ್ಲಿ ಯಾವುದು ಬೆಸ್ಟ್​?: ಸುಧಾರಿತ ಕ್ಯಾಲ್ಕುಲೇಟರ್ ಪಾವತಿಸಬೇಕಾದ ತೆರಿಗೆಯ ಹೆಚ್ಚು ವಿವರವಾದ ಲೆಕ್ಕಾಚಾರವನ್ನು ನೀಡುವುದರಿಂದ ಸುಲಭವಾಗಿ ತಿಳಿಯಲು ಉಪಯುಕ್ತವಾಗಿದೆ. ಮೊದಲು ನೀವು ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ ಎಂಬುದನ್ನು ಅರಿತುಕೊಳ್ಳಬೇಕು. ಅದರ ನಂತರ ಆಯ್ದ ಮೌಲ್ಯಮಾಪನ ವರ್ಷ, ತೆರಿಗೆದಾರರ ವರ್ಗ, ತೆರಿಗೆದಾರರ ವಯಸ್ಸು, ವಸತಿ ಸ್ಥಿತಿ ಇತ್ಯಾದಿ. ನೀವು ಕ್ಯಾಲ್ಕುಲೇಟರ್ ಕೇಳಿದ ವಿವರಗಳನ್ನು ನೀಡಬೇಕು. ಮೊದಲು ನಿಮ್ಮ ಸಂಬಳದ ಆದಾಯವನ್ನು ನಮೂದಿಸಿ. ನೀವು ಮನೆಯಿಂದ ಆದಾಯವನ್ನು ಹೊಂದಿದ್ದರೆ (ಮನೆಯ ಮೇಲಿನ ಬಡ್ಡಿ, ಬಾಡಿಗೆಯಿಂದ ಬರುವ ಆದಾಯ), ಬಂಡವಾಳ ಆದಾಯ, ಇತರ ಮೂಲಗಳಿಂದ ಯಾವುದೇ ಆದಾಯ. ಆಯಾ ವಿಭಾಗಗಳಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ.

ನಿಮ್ಮ ಆದಾಯದ ಎಲ್ಲ ಮೂಲಗಳ ಬಗ್ಗೆ ಅಲ್ಲಿ ನಮೋದಿಸಿ: ತೆರಿಗೆ ಉಳಿಸುವ ಹೂಡಿಕೆಗಳು ಮತ್ತು ಇತರ ವಿನಾಯಿತಿಗಳಿಗೆ ಸಂಬಂಧಿಸಿದ ವಿವರಗಳನ್ನು ಕಡಿತದ ಅಡಿಯಲ್ಲಿ ಕಂಡುಬರುವ ಆದಾಯದ ವಿವರಗಳನ್ನು ಕ್ಲಿಕ್ ಮಾಡುವ ಮೂಲಕ ನೀಡಬೇಕು. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಕಡಿತಗಳು ಅನ್ವಯಿಸುವುದಿಲ್ಲ. ಆದ್ದರಿಂದ, ಸಂಬಂಧಿತ ವಿವರಗಳನ್ನು ನಮೂದಿಸಲು ಯಾವುದೇ ಅವಕಾಶವಿರುವುದಿಲ್ಲ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ, ಕೆಲವು ವಿಭಾಗಗಳ ಅಡಿ ವಿನಾಯಿತಿಗಳು ಕಂಡುಬರುತ್ತವೆ. ಅವರು ನೇರವಾಗಿ ನೋಂದಾಯಿಸಿಕೊಳ್ಳಬಹುದು.

ತೆರಿಗೆದಾರರು ತಮ್ಮ ಆದಾಯ, ವಿನಾಯಿತಿ ಇತ್ಯಾದಿಗಳ ಮಾಹಿತಿಯಿಂದ ಆದಾಯ ತೆರಿಗೆ ಇಲಾಖೆ ಒದಗಿಸಿದ ಕ್ಯಾಲ್ಕುಲೇಟರ್ ಬಳಸಿ ತೆರಿಗೆಯನ್ನು ಲೆಕ್ಕ ಹಾಕಬಹುದು. ಯಾವ ವಿಧಾನವು ಪ್ರಯೋಜನಕಾರಿ ಎಂದು ತಿಳಿದುಕೊಂಡು, ಆ ವಿಧಾನವನ್ನು ಆಯ್ಕೆ ಮಾಡಿ ಮತ್ತು ರಿಟರ್ನ್ಸ್ ಸಲ್ಲಿಸಬಹುದು.

ಇದನ್ನು ಓದಿ: ನಿಮ್ಮ ಸಿಬಿಲ್​ ಸ್ಕೋರ್​ 750ಕ್ಕಿಂತ ಇಳಿಕೆಯಾಗಿದೆಯೇ ? ಹಾಗಾದರೆ ನೀವು ಮಾಡಬೇಕಾಗಿರುವುದು ಇಷ್ಟು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.