ETV Bharat / business

ಅಚ್ಚುಮೆಚ್ಚಿನ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದ ಯುಪಿಐ; 83 ಲಕ್ಷ ಕೋಟಿ ರೂ. ವಹಿವಾಟು! - ಯುಪಿಐ ಆಧರಿತ ಹಲವಾರು ಇಂಟರ್​ಫೇಸ್​​ಗಳ

UPI transactions: ಭಾರತ ಸರ್ಕಾರದ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ ಮೂಲಕ ನಡೆಯುತ್ತಿರುವ ವಹಿವಾಟುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

UPI transactions shot up to Rs 83.2L cr in 2022

author img

By

Published : Aug 20, 2023, 3:53 PM IST

ನವದೆಹಲಿ: ದೇಶದಲ್ಲಿ ಯುಪಿಐ ಅಥವಾ ಏಕೀಕೃತ ಪಾವತಿ ಇಂಟರ್​ ಫೇಸ್​ ವಹಿವಾಟುಗಳು 2018 ಮತ್ತು 2022 ರ ನಡುವೆ ಮೌಲ್ಯ ಮತ್ತು ಪರಿಮಾಣದ ದೃಷ್ಟಿಯಿಂದ ಕ್ರಮವಾಗಿ ಶೇಕಡಾ 1,320 ಮತ್ತು 1,876 ರಷ್ಟು ಹೆಚ್ಚಾಗಿವೆ. 2018 ರಲ್ಲಿ 374.63 ಕೋಟಿಯಷ್ಟಿದ್ದ ಯುಪಿಐ ವಹಿವಾಟುಗಳು, 2022 ರಲ್ಲಿ ಶೇಕಡಾ 1,876 ರಷ್ಟು ಏರಿಕೆಯಾಗಿ 7,403.97 ಕೋಟಿಗೆ ತಲುಪಿವೆ. ಮೌಲ್ಯದ ದೃಷ್ಟಿಯಿಂದ 2018 ರಲ್ಲಿ 5.86 ಲಕ್ಷ ಕೋಟಿ ರೂ.ಗಳಷ್ಟಿದ್ದ ಯುಪಿಐ ವಹಿವಾಟುಗಳು 2022 ರಲ್ಲಿ ಶೇಕಡಾ 1,320 ರಷ್ಟು ಏರಿಕೆಯಾಗಿ 83.2 ಲಕ್ಷ ಕೋಟಿ ರೂ.ಗೆ ತಲುಪಿದೆ.

ಈ ವರ್ಷದ ಫೆಬ್ರವರಿಯಲ್ಲಿ ಆರ್​ಬಿಐ, ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳು ಮತ್ತು ಎನ್ಆರ್​ಐಗಳು ಭಾರತದಲ್ಲಿದ್ದಾಗ ಯುಪಿಐ ಬಳಸಿ ಪಾವತಿ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಆಯ್ದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ (ಬೆಂಗಳೂರು, ಮುಂಬೈ ಮತ್ತು ನವದೆಹಲಿ) ಜಿ 20 ದೇಶಗಳ ಪ್ರಯಾಣಿಕರು ಕೂಡ ಯುಪಿಐ ಮೂಲಕ ಪೇಮೆಂಟ್​​ ಮಾಡುವ ಸೌಲಭ್ಯ ನೀಡಲಾಗಿದೆ. ಇದಲ್ಲದೆ, ತಮ್ಮ ಎನ್ಆರ್​ಇ ಅಥವಾ ಎನ್ಆರ್​ಓ ಖಾತೆಗಳಿಗೆ ಲಿಂಕ್ ಮಾಡಲಾದ ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಹೊಂದಿರುವ ಎನ್ಆರ್​ಐಗಳು ಯುಪಿಐ ಬಳಸುವ ಅವಕಾಶ ಕಲ್ಪಿಸಲಾಗಿದೆ.

ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಹಾಂಗ್ ಕಾಂಗ್, ಒಮಾನ್, ಕತಾರ್, ಯುಎಸ್ಎ, ಸೌದಿ ಅರೇಬಿಯಾ, ಯುಎಇ ಮತ್ತು ಯುನೈಟೆಡ್ ಕಿಂಗಡಮ್​ ಈ 10 ದೇಶಗಳಿಗೆ ಯುಪಿಐ ಪೇಮೆಂಟ್​​ ಸೌಲಭ್ಯ ನೀಡಲಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ತಿಳಿಸಿದೆ. ವಿದೇಶಗಳಲ್ಲಿ ಯುಪಿಐ ಪೇಮೆಂಟ್​​ 2022 ರಿಂದ ಪ್ರಾರಂಭವಾಗಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎನ್​ಪಿಸಿಐ) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಎನ್​ಪಿಸಿಐ ಇಂಟರ್​ ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್ಐಪಿಎಲ್) ಯುಪಿಐನ ಅಂತರರಾಷ್ಟ್ರೀಕರಣದ ಜವಾಬ್ದಾರಿಯನ್ನು ಹೊಂದಿದೆ. ಸಹಯೋಗದ ಸಾಮರ್ಥ್ಯ ಹೊಂದಿರುವ ದೇಶಗಳಲ್ಲಿ ಯುಪಿಐ ವಿಸ್ತರಣೆಗೆ ಆರ್​ಬಿಐ ಅನುಕೂಲ ಮಾಡಿಕೊಡುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಯುಪಿಐ ಆಧರಿತ ಹಲವಾರು ಇಂಟರ್​ಫೇಸ್​​ಗಳ ಆಗಮನದಿಂದಾಗಿ ಕಳೆದ ಕೆಲ ವರ್ಷಗಳಿಂದ ಯುಪಿಐ ವಹಿವಾಟುಗಳು ಹೆಚ್ಚುತ್ತಿವೆ ಮತ್ತು ಜನರು ಎಲ್ಲಾ ರೀತಿಯ ಪಾವತಿಗಾಗಿ ಯುಪಿಐ ಬಳಸುತ್ತಿದ್ದಾರೆ. ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ಸಂಸ್ಥೆಗಳವರೆಗೆ ಎಲ್ಲರೂ ಯುಪಿಐ ಪಾವತಿ ವಿಧಾನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಸರ್ಕಾರ ಕೂಡ ಯುಪಿಐ ಪಾವತಿ ವಿಧಾನಗಳನ್ನು, ಅದರಲ್ಲೂ ವಿಶೇಷವಾಗಿ ಭೀಮ್ ಅಪ್ಲಿಕೇಶನ್ ಅನ್ನು ಉತ್ತೇಜಿಸುತ್ತಿದೆ. ಯುಪಿಐ ಬಳಕೆ ಹೆಚ್ಚಾಗಲು ಇದೂ ಕೂಡ ಒಂದು ಪ್ರಮುಖ ಕಾರಣವಾಗಿದೆ.

ಯುನಿಫೈಡ್ ಪೇಮೆಂಟ್ ಇಂಟರ್​ ಫೇಸ್​ (ಯುಪಿಐ) ಎಂಬ ಸ್ಮಾರ್ಟ್​ ಫೋನ್ ಅಪ್ಲಿಕೇಶನ್ ಮೂಲಕ ನೀವು ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ಹಣ ವರ್ಗಾಯಿಸಬಹುದು. ಇದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​​ಪಿಸಿಐ) ತಯಾರಿಸಿದ ಒಂದೇ ಇಂಟರ್​ಫೇಸ್​ ಹೊಂದಿರುವ ಮೊಬೈಲ್ ಪಾವತಿ ವ್ಯವಸ್ಥೆಯಾಗಿದೆ.

ಇದನ್ನೂ ಓದಿ : ಕೇಂದ್ರ-ರಾಜ್ಯಗಳ ತೆರಿಗೆ ಹಂಚಿಕೆ ವಿಚಾರ; 16ನೇ ಹಣಕಾಸು ಆಯೋಗ ಸ್ಥಾಪನೆ ಶೀಘ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.