ETV Bharat / business

UPI ಲೈಟ್ ಮಿತಿ ಹೆಚ್ಚಳ ಮಾಡಿದ ಆರ್​ಬಿಐ.. ನೆಟ್ ಇಲ್ಲದೆಯೂ UPIಯಿಂದ ಹಣ ಪಾವತಿಸಬಹುದು!

author img

By ETV Bharat Karnataka Team

Published : Aug 25, 2023, 2:04 PM IST

Upi Lite Without Internet : ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ ಲೈಟ್ ಮೂಲಕ ಪಾವತಿಸುವ ಮಿತಿಯನ್ನು ರೂ.200 ರಿಂದ ರೂ.500 ಕ್ಕೆ ಹೆಚ್ಚಿಸಿದೆ. ಇಂಟರ್ನೆಟ್ ಇಲ್ಲದೇ ಸಣ್ಣ ಮೊತ್ತ ಪಾವತಿಸಲು ತರಲಾದ UPI ಲೈಟ್ ಅನ್ನು ವಿಸ್ತರಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

upi transaction limit offline mode  UPI Lite Limit Increase  transaction limit offline mode raise to rs 500  reserve bank o India  UPI ಲೈಟ್ ಮಿತಿ ಹೆಚ್ಚಳ ಮಾಡಿದ ಆರ್​ಬಿಐ  ನೆಟ್ ಇಲ್ಲದೆಯೂ UPIಯಿಂದ ಹಣ ಪಾವತಿ  ಭಾರತೀಯ ರಿಸರ್ವ್ ಬ್ಯಾಂಕ್  ಯುಪಿಐ ಲೈಟ್ ಮೂಲಕ ಪಾವತಿಸುವ ಮಿತಿ  ಇದು ಹೇಗೆ ಕಾರ್ಯನಿರ್ವಹಿಸುತ್ತದೆ  ಇಂಟರ್ನೆಟ್ ಇಲ್ಲದ ಪಾವತಿಗಳು  NPCI ಯುಪಿಐ ಲೈಟ್ ವಾಲೆಟ್
UPI ಲೈಟ್ ಮಿತಿ ಹೆಚ್ಚಳ ಮಾಡಿದ ಆರ್​ಬಿಐ

ಹೈದರಾಬಾದ್​, ತೆಲಂಗಾಣ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಯುಪಿಐ ಲೈಟ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದನ್ನು ಇಂಟರ್ನೆಟ್ ಇಲ್ಲದೆ ಸಣ್ಣ ಮೊತ್ತವನ್ನು ಪಾವತಿಸಲು ತರಲಾಗಿದೆ. ಪಾವತಿ ಮೊತ್ತವನ್ನು 200 ರೂ.ನಿಂದ 500 ರೂ.ಗೆ ಹೆಚ್ಚಿಸಲಾಗಿದೆ. ಇಂಟರ್ನೆಟ್ ವ್ಯವಸ್ಥೆ ಕಡಿಮೆ ಇರುವ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದನ್ನು ಬಳಸಿಕೊಂಡು ಆಫ್‌ಲೈನ್ ಮೋಡ್‌ನಲ್ಲಿ ದಿನಕ್ಕೆ ರೂ.2 ಸಾವಿರದವರೆಗೆ ಪಾವತಿ ಮಾಡಬಹುದು ಎಂದು ತಿಳಿದು ಬಂದಿದೆ. ಪ್ರಸ್ತುತ ಪ್ರತಿ ತಿಂಗಳು ಯುಪಿಐ ಲೈಟ್‌ನಲ್ಲಿ ಒಂದು ಕೋಟಿ ವಹಿವಾಟು ನಡೆಯುತ್ತಿದೆ ಎಂದು ಆರ್‌ಬಿಐ ಹೇಳಿದೆ.

UPI Lite Without Internet : ಕೆಲವು ದಿನಗಳ ಹಿಂದೆ, NPCI ಯುಪಿಐ ಲೈಟ್ ವಾಲೆಟ್ ಅನ್ನು ಪೇಟಿಎಂ ಮತ್ತು ಮೊಬಿಕ್ವಿಕ್‌ನಂತಹ ಆನ್-ಡಿವೈಸ್ ವ್ಯಾಲೆಟ್‌ಗಳಂತೆಯೇ ಪರಿಚಯಿಸಲಾಗುವುದು ಎಂದು ಘೋಷಿಸಿತು. ಬಳಕೆದಾರರು ಇದನ್ನು ಬಳಸಿಕೊಂಡು ಸಣ್ಣ ವಹಿವಾಟುಗಳನ್ನು ಮಾಡಬಹುದು. ಈ ವ್ಯಾಲೆಟ್‌ನಲ್ಲಿ ಹಣವನ್ನು ಸಂಗ್ರಹಿಸಲು NPCI ಸೌಲಭ್ಯವನ್ನು ಸಹ ಒದಗಿಸುತ್ತದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ..?: UPI ಲೈಟ್ ವಾಲೆಟ್ ತನ್ನ ಲಭ್ಯತೆಯ ಆರಂಭಿಕ ದಿನಗಳಲ್ಲಿ 'ನಿಯರ್ ಆಫ್‌ಲೈನ್ ಮೋಡ್​'ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು NPCI ಬಹಿರಂಗಪಡಿಸಿದೆ. ಡೆಬಿಟ್ ಪಾವತಿಗಳನ್ನು ಆಫ್‌ಲೈನ್‌ನಲ್ಲಿ ಮಾಡಲಾಗುತ್ತದೆ ಮತ್ತು ಕ್ರೆಡಿಟ್ ಪಾವತಿಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಬಳಕೆದಾರರು ಆನ್‌ಲೈನ್‌ಗೆ ಬಂದಾಗ ಕ್ರೆಡಿಟ್ ಪಾವತಿಗಳನ್ನು ನವೀಕರಿಸಲಾಗುತ್ತದೆ. ಆದಾಗ್ಯೂ, NPCI ಎಲ್ಲಾ ರೀತಿಯ ಪಾವತಿಗಳನ್ನು ಆಫ್‌ಲೈನ್‌ನಲ್ಲಿ ತರಲು ಕ್ರಮೇಣ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದೆ. ಈ ಯುಪಿಐ ಲೈಟ್ ವ್ಯಾಲೆಟ್‌ನಲ್ಲಿರುವ ಹಣಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಆರ್‌ಬಿಐ ಆರಂಭದಲ್ಲಿ ಸ್ಪಷ್ಟಪಡಿಸಿದೆ. UPI ಲೈಟ್ ಖಾತೆಗಳ ಸಂಖ್ಯೆಯು ಬಳಕೆದಾರರು ಬಳಸುವ UPI ಅಪ್ಲಿಕೇಶನ್‌ಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.

ಇಂಟರ್ನೆಟ್ ಇಲ್ಲದ ಪಾವತಿಗಳು..: ಪ್ರಮುಖ ಡಿಜಿಟಲ್ ಪಾವತಿ ಕಂಪನಿ Paytm ಕೆಲವು ದಿನಗಳ ಹಿಂದೆ ಹೊಸ ವೈಶಿಷ್ಟ್ಯದೊಂದಿಗೆ ಬಳಕೆದಾರರಿಗೆ ಪರಿಚಯಿಸಿತ್ತು. ಪ್ರತಿ ಬಾರಿ ಪಾವತಿ ಮಾಡುವಾಗ ಪಿನ್ ನಮೂದಿಸುವ ಅಗತ್ಯವಿರಲಿಲ್ಲ. ಪೇಟಿಎಂನಲ್ಲಿ 'UPI ಲೈಟ್' ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. UPI ಮೂಲಕ ಹಣವನ್ನು ಕಳುಹಿಸುವ ಮತ್ತು ಸ್ವೀಕರಿಸುವ ಪ್ರಕ್ರಿಯೆಗಳನ್ನು ಸರಳಗೊಳಿಸಲು ಈ UPI ಲೈಟ್ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ.

ಓದಿ: ಡ್ಯೂಪ್ಲೆಕ್ಸ್ ಹೌಸ್ Vs ಫ್ಲಾಟ್- ಇವೆರಡರಲ್ಲಿ ಯಾವ ಆಯ್ಕೆ ಉತ್ತಮ: ಯಾವುದನ್ನ ಖರೀದಿಸಿದರೆ ಬೆಸ್ಟ್​..?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.