ETV Bharat / business

Explainer: ಕೇಂದ್ರ ಬಜೆಟ್​​​​ನ ವಿಶೇಷತೆ ಏನು? ಹಣಕಾಸು ಮಸೂದೆ ಮಹತ್ವ ಹೀಗಿದೆ!

ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಈ ಬಾರಿ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.

Union Budget 2024-25: What is the Finance Bill in the Budget?
Explainer: ಕೇಂದ್ರ ಬಜೆಟ್​​​​ನ ವಿಶೇಷತೆ ಏನು? ಹಣಕಾಸು ಮಸೂದೆ ಮಹತ್ವ ಹೀಗಿದೆ!
author img

By ETV Bharat Karnataka Team

Published : Jan 12, 2024, 10:38 PM IST

ಹೈದರಾಬಾದ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂಬರುವ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್​ ಅಥವಾ ಲೇಖಾನುದಾನವನ್ನು ಮಂಡಿಸುವ ಸಾಧ್ಯತೆ ಇದೆ. ಇದಕ್ಕಾಗಿ ಅವರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮುಂದಿನ ಹಣಕಾಸು ವರ್ಷದ ಸರ್ಕಾರದ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಅಂದಾಜುಗಳನ್ನು ಈ ಲೇಖಾನುದಾನ ಒಳಗೊಂಡಿರಲಿದೆ.

ಪ್ರಸ್ತುತ17ನೇ ಲೋಕಸಭೆಗೆ ಜನರು ನೀಡಿರುವ ಆದೇಶವು ಈ ವರ್ಷದ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್​ ಅಧಿವೇಶನದಲ್ಲಿ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್​ ಮಂಡನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಬಾರಿ ಸರ್ಕಾರ ಲೇಖಾನುದಾನವನ್ನು ಮಂಡಿಸಿ ಅದಕ್ಕೆ ಅನುಮೋದನೆ ಪಡೆದುಕೊಳ್ಳಲಿದೆ. ಆದಾಗ್ಯೂ, ಸಾಮಾನ್ಯ ಬಜೆಟ್‌ನಂತೆ, ಈ ವರ್ಷವೂ ವೋಟ್ ಆನ್ ಅಕೌಂಟ್‌ನಲ್ಲಿ ಹಣಕಾಸು ಮಸೂದೆ ಲೋಕಸಭೆಯಲ್ಲಿ ಮಂಡಿಸಲಾಗುವುದು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸುವ ಲೇಖಾನುದಾನಕ್ಕೆ ಸದನದ ಅನುಮೋದನೆ ಪಡೆಯಬೇಕಾಗುತ್ತದೆ.

ಏನಿದು ಹಣಕಾಸು ವಿಧೇಯಕ: ಬಜೆಟ್ ಪ್ರಸ್ತಾವನೆಗಳು ಭಾರತದ ಕನ್ಸಾಲಿಡೇಟೆಡ್ ಫಂಡ್‌ನಿಂದ ಹಣವನ್ನು ಹಿಂಪಡೆಯುವುದನ್ನು ಒಳಗೊಂಡಿರುವುದರಿಂದ ಮತ್ತು ಅವು ತೆರಿಗೆ ಪ್ರಸ್ತಾಪಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ ಸರ್ಕಾರವು ಭಾರತದ ಕನ್ಸಾಲಿಡೇಟೆಡ್ ಫಂಡ್‌ನಿಂದ ಹಣವನ್ನು ಹಿಂಪಡೆಯಲು ಮತ್ತು ಯಾವುದೇ ತೆರಿಗೆಯನ್ನು ವಿಧಿಸಲು ಅಥವಾ ಯಾವುದೇ ಬದಲಾವಣೆಗಳನ್ನು ಮಾಡಲು ವಿದೇಯಕವನ್ನು ಮಂಡಿಸಿ, ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ಕಾನೂನು ಮಾಡಬೇಕಾದ ಅಗತ್ಯವಿದೆ. ಬಜೆಟ್ ಪ್ರಸ್ತಾವನೆಗಳನ್ನು ಜಾರಿಗೊಳಿಸುವ ಮಸೂದೆಯನ್ನು ಹಣಕಾಸು ಮಸೂದೆ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಹಣಕಾಸು ಮಸೂದೆಗಳಿಗೆ ಸಂಬಂಧಿಸಿದ ವಿಶೇಷ ನಿಬಂಧನೆಗಳೊಂದಿಗೆ ವ್ಯವಹರಿಸುವ ಆರ್ಟಿಕಲ್ 117 ರ ಅಡಿಯಲ್ಲಿ ಈ ಹಣಕಾಸು ವಿಧೇಯಕಗಳನ್ನು ಇರಿಸಲಾಗಿದೆ.

ಆರ್ಟಿಕಲ್ 117 ಹಣಕಾಸು ವಿಧೇಯಕಗಳಿಗೆ ಸಂಬಂಧಿಸಿದ ವಿಶೇಷ ನಿಬಂಧನೆಗಳೊಂದಿಗೆ ವ್ಯವಹರಿಸುತ್ತವೆ. ಹಣಕಾಸು ವಿಧೇಯಕಗಳ ಬಗ್ಗೆ ಸಂವಿಧಾನ 110ನೇ ವಿಧಿಯಲ್ಲಿ ವಿವರಣೆ ನೀಡಲಾಗಿದೆ. ಹಣಕಾಸು ವಿಧೇಯಕಗಳು ಯಾವುದೇ ತೆರಿಗೆ ಹೇರಿಕೆ, ರದ್ದತಿ, ಉಪಶಮನ, ಬದಲಾವಣೆ ಅಥವಾ ನಿಯಂತ್ರಣ ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಈ ವಿಧೇಯಕಗಳನ್ನು ಮಂಡನೆ ಮಾಡುವ ಮೂಲಕ ಹಣ ಎರವಲು ಪಡೆಯುವ ಹಾಗೂ ನಿಯಂತ್ರಣ ಮಾಡುವ ಅಥವಾ ಭಾರತ ಸರ್ಕಾರದಿಂದ ಯಾವುದೇ ಗ್ಯಾರಂಟಿ ನೀಡುವಿಕೆ ಅಥವಾ ಇತರ ವಿಷಯಗಳ ಜೊತೆಗೆ ಭಾರತ ಸರ್ಕಾರವು ಕೈಗೊಂಡ ಅಥವಾ ಕೈಗೊಳ್ಳಬೇಕಾದ ಯಾವುದೇ ಹಣಕಾಸಿನ ಬಾಧ್ಯತೆಗಳಿಗೆ ಸಂಬಂಧಿಸಿದಂತೆ ಕಾನೂನಿನ ತಿದ್ದುಪಡಿಯೊಂದಿಗೆ ಈ ಮಸೂದೆ ವ್ಯವಹರಿಸುತ್ತದೆ.

ಹಣಕಾಸು ಮಸೂದೆಯು ಭಾರತ ಸರ್ಕಾರಕ್ಕೆ ತನ್ನ ವೆಚ್ಚಕ್ಕಾಗಿ ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾದಿಂದ ಹಣವನ್ನು ಹಿಂಪಡೆಯಲು ಅಧಿಕಾರ ನೀಡುತ್ತದೆ. ಹಣಕಾಸು ಮಸೂದೆಯ ಮೂಲಕ ಹಲವಾರು ಕಾನೂನುಗಳನ್ನು ತಿದ್ದುಪಡಿ ಮಾಡುವುದು ಇದುವರೆಗೂ ನಡೆದುಕೊಂಡು ಬಂದ ಕಾನೂನು ಬದ್ಧ ಪ್ರಕ್ರಿಯೆಯಾಗಿದೆ. ಹಣಕಾಸು ಮಸೂದೆಗೆ ರಾಜ್ಯಸಭೆ ನಿಗದಿತ ಅವಧಿಯಲ್ಲಿ ಅನುಮೋದನೆ ನೀಡದಿದ್ದರೆ, ಅದು ಅಂಗೀಕಾರ ಆಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ. ಹಣಕಾಸು ವಿಧೇಯಕ ವಿಚಾರವಾಗಿ ರಾಜ್ಯಸಭೆಯ ಪಾತ್ರ ಗೌಣವಾಗಿದೆ.

  • " class="align-text-top noRightClick twitterSection" data="">

ಇದನ್ನು ಓದಿ:ಬಿಟ್​ಕಾಯಿನ್ ಇಟಿಎಫ್​ ಷೇರು ವಹಿವಾಟಿಗೆ ಕೊನೆಗೂ ಅನುಮತಿ ನೀಡಿದ ಯುಎಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.