ನವದೆಹಲಿ: ದಿನಕ್ಕೆ 40 ಲಕ್ಷ ರೂಪಾಯಿ ಹಣ ಹೆಚ್ಚುವರಿಯಾಗಿ ವ್ಯಯವಾಗುತ್ತಿದೆ. ಈ ಆರ್ಥಿಕ ಸೋರಿಕೆಯನ್ನು ತಡೆಯಲು ನೌಕರರ ವಜಾ ಮಾಡದೇ ನನ್ನ ಬಳಿ ಬೇರೆ ಯಾವುದೇ ಆಯ್ಕೆ ಇಲ್ಲ ಎಂದು ಟ್ವಿಟರ್ನ ಹೊಸ ಮಾಲೀಕ, ಜಗತ್ತಿನ ನಂ.1 ಧನಿಕ ಎಲೋನ್ ಮಸ್ಕ್ ಹೇಳಿದರು.
ಭಾರತ ಸೇರಿದಂತೆ ಜಾಗತಿಕವಾಗಿ ಸುಮಾರು 3,800 ಕ್ಕೂ ಅಧಿಕ ನೌಕರರನ್ನು ಕಡಿತಗೊಳಿಸಿದ ಕ್ರಮಕ್ಕೆ ಕಾರಣ ನೀಡಿ ಟ್ವೀಟ್ ಮಾಡಿರುವ ಕಂಪನಿಯ ಹೊಸ ಸಿಇಒ, ಉದ್ಯೋಗ ಕಳೆದುಕೊಂಡ ಎಲ್ಲ ನೌಕಕರಿಗೆ 3 ತಿಂಗಳ ಪರಿಹಾರ ನೀಡಲಾಗಿದೆ. ಕಾನೂನುಬದ್ಧವಾಗಿ ನೀಡುವ ಹಣಕ್ಕಿಂತಲೂ ಇದು ಶೇ.50 ರಷ್ಟು ಅಧಿಕವಾಗಿದೆ. ಸಂಸ್ಥೆಯನ್ನು ಉಳಿಸಲು ಹೆಚ್ಚುವರಿ ಉದ್ಯೋಗಿಗಳ ಕಡಿತ ಅಗತ್ಯವಾಗಿತ್ತು. ದಿನಕ್ಕೆ 40 ಲಕ್ಷ (4 ಮಿಲಿಯನ್ ಡಾಲರ್) ರೂಪಾಯಿ ವೇತನ ವ್ಯಯವಾಗುತ್ತಿತ್ತು ಎಂದು ತಿಳಿಸಿದರು.
ಮಾಧ್ಯಮ ಸುದ್ದಿಯೇ ಬೇರೆ: ಕಂಪನಿಯು ಅತ್ಯಧಿಕ ನಷ್ಟದಲ್ಲಿದೆ. ಜಾಹೀರಾತುದಾರರು ಸಂಸ್ಥೆಯ ಸಕ್ರಿಯ ಗುಂಪುಗಳ ಅನಗತ್ಯ ಒತ್ತಡಕ್ಕೆ ಒಳಗಾಗಿದೆ. ಇದನ್ನು ಕಡಿಮೆ ಮಾಡಲು ನೌಕರರ ವಜಾ ಬೇಕಿತ್ತು. ಸಂಸ್ಥೆ ನಿರಾಳ ಮತ್ತು ಒತ್ತಡ ರಹಿತ ಕಾರ್ಯಕ್ಕೆ ಒತ್ತು ನೀಡಲಾಗುವುದು. ಸಂಸ್ಥೆ ನಡೆಯ ಬಗ್ಗೆ ಮಾಧ್ಯಮಗಳಲ್ಲಿ ಕಠಿಣವಾಗಿ ಭಿತ್ತವಾಗಿದೆ. ಆದರೆ, ಅದು ನಿಜವಲ್ಲ. ನೌಕರರನ್ನು ಗೌರವಪೂರ್ವಕವಾಗಿ ನಡೆಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ನಷ್ಟ ಭರಿಸಲು ಬ್ಲೂಟಿಕ್ಗೆ ಶುಲ್ಕ: ಇನ್ನು ಅಧಿಕೃತ ಟ್ವಿಟ್ಟರ್ ಖಾತೆಗೆ ಬ್ಲೂಟಿಕ್ ಉಳಿಸಿಕೊಳ್ಳಲು ಮಾಸಿಕ 8 ಡಾಲರ್ ಶುಲ್ಕು ನೀಡಲು ಕೇಳಿಬಂದ ವಿರೋಧಕ್ಕೆ ಉತ್ತರಿಸಿರುವ ಮಸ್ಕ್, ಕಂಪನಿ ಏಪ್ರಿಲ್- ಜೂನ್ನಲ್ಲಿ 270 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಕಂಪನಿಯ ಆದಾಯ ಶೇ.1ಕ್ಕೆ ಕುಸಿದು 1.18 ಬಿಲಿಯನ್ ಡಾಲರ್ಗೆ ತಲುಪಿದೆ. ಹೀಗಾಗಿ ಅಲ್ಪಪ್ರಮಾಣದ ಶುಲ್ಕ ವಿಧಿಸಲಾಗಿದೆ. ಜಾಹೀರಾತು ಕುಸಿತವೂ ಇದಕ್ಕೆ ಕಾರಣವಾಗಿದೆ ಎಂದೂ ತಿಳಿಸಿದರು.
ಓದಿ: ಟ್ವಿಟರ್ ಆದಾಯದಲ್ಲಿ ಗಣನೀಯ ಕುಸಿತ.. ಸ್ವತಃ ಟ್ವೀಟ್ ಮಾಡಿ ಅಳಲು ತೋಡಿಕೊಂಡ ಮಸ್ಕ್