ETV Bharat / business

ಪಿಸಿ, ಲ್ಯಾಪ್​ಟಾಪ್​ ಲೈಸೆನ್ಸ್​ ನಿರ್ಬಂಧದ ಗಡುವು 1 ವರ್ಷ ವಿಸ್ತರಿಸಿ; ಕೇಂದ್ರಕ್ಕೆ ಟೆಕ್ ಕಂಪನಿಗಳ ಮನವಿ

ಪಿಸಿ ಮತ್ತು ಲ್ಯಾಪ್​ಟಾಪ್​ ಆಮದಿಗೆ ವಿಧಿಸಲಾಗಿರುವ ಲೈಸೆನ್ಸ್​ ನಿರ್ಬಂಧ ಜಾರಿಗೊಳಿಸುವಿಕೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಬೇಕೆಂದು ತಂತ್ರಜ್ಞಾನ ಉತ್ಪಾದನಾ ಕಂಪನಿಗಳು ಕೇಂದ್ರಕ್ಕೆ ಮನವಿ ಮಾಡಿವೆ.

Top tech firms seek Nov 1 laptop import restriction

author img

By

Published : Aug 9, 2023, 2:30 PM IST

ನವದೆಹಲಿ : ಪಿಸಿ, ಲ್ಯಾಪ್​ಟಾಪ್​ ಮತ್ತು ಟ್ಯಾಬ್ಲೆಟ್​ಗಳನ್ನು ಆಮದು ಮಾಡಿಕೊಳ್ಳಲು ವಿಶೇಷ ಅನುಮತಿ ಪಡೆಯುವ ನಿರ್ಬಂಧನೆಯ ಗಡುವನ್ನು ನವೆಂಬರ್​ 1ರ ಆಚೆಗೆ ವಿಸ್ತರಿಸಬೇಕು ಎಂದು ದೇಶದ ತಂತ್ರಜ್ಞಾನ ಉತ್ಪಾದನಾ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿವೆ. ಹೊಸ ಮಾರ್ಗಸೂಚಿಗಳ ಪ್ರಕಾರ ಉತ್ಪಾದನೆ ಅಥವಾ ಜೋಡಣೆ ಘಟಕಗಳನ್ನು ವಿನ್ಯಾಸಗೊಳಿಸಲು ಮತ್ತು ಸ್ಥಾಪಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ಗಡುವನ್ನು ಕನಿಷ್ಠ 1 ವರ್ಷ ವಿಸ್ತರಿಸಬೇಕೆಂದು ಎಚ್​ಪಿ, ಆಪಲ್ ಮತ್ತು ಡೆಲ್​ನಂಥ ಉನ್ನತ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಗಳು ಸರಕಾರವನ್ನು ಒತ್ತಾಯಿಸಿವೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೈ) ಅಧಿಕಾರಿಗಳೊಂದಿಗಿನ ಸಭೆಯಲ್ಲಿ, ಪ್ರಮುಖ ಉದ್ಯಮ ಸಂಸ್ಥೆಗಳಾದ ಐಟಿ ಹಾರ್ಡ್ ವೇರ್ ಉತ್ಪಾದನಾ ಸಂಘ (ಎಂಎಐಟಿ) ಮತ್ತು ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಸಹ ಭಾಗವಹಿಸಿದ್ದವು. ದೇಶದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಹೆಚ್ಚಿನ ಸಮಯ ಬೇಕು ಎಂದು ಟೆಕ್ ಕಂಪನಿಗಳು ಸರ್ಕಾರಕ್ಕೆ ತಿಳಿಸಿವೆ ಎಂದು ಮೂಲಗಳು ಹೇಳಿವೆ.

ವರದಿಗಳ ಪ್ರಕಾರ ಕೆಲ ಪ್ರಮುಖ ಜಾಗತಿಕ ಕಂಪನಿಗಳು ಸೇರಿದಂತೆ ಸುಮಾರು 44 ಕಂಪನಿಗಳು ಹಾರ್ಡ್​ವೇರ್​ಗಾಗಿ ಉತ್ಪಾದನಾ-ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) 2.0 ಯೋಜನೆಯಡಿ ಪ್ರೋತ್ಸಾಹಕ್ಕಾಗಿ ಅರ್ಜಿಗಳನ್ನು ಸಲ್ಲಿಸಿವೆ. ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ (ಡಿಜಿಎಫ್​ಟಿ) ಅಧಿಸೂಚನೆಯ ಪ್ರಕಾರ, ನವೆಂಬರ್ 1, 2023 ರಿಂದ ಜಾರಿಗೆ ಬರುವಂತೆ ನಿರ್ಬಂಧಿತ ಆಮದು ಸರಕುಗಳ ಕ್ಲಿಯರೆನ್ಸ್​ಗಾಗಿ ಸೂಕ್ತ ಲೈಸೆನ್ಸ್​ ಪಡೆಯುವುದು ಅಗತ್ಯವಾಗಲಿದೆ.

ಆಮದುಗಳನ್ನು ನಿಷೇಧಿಸಲು ನಿರ್ಬಂಧಗಳನ್ನು ವಿಧಿಸಲಾಗಿಲ್ಲ, ಬದಲಾಗಿ ದೇಶೀಯ ಉತ್ಪಾದನೆಯ ಮೂಲಕ ರಫ್ತುಗಳನ್ನು ಉತ್ತೇಜಿಸಲು ಆಮದುಗಳ ಮೇಲೆ ನಿಯಂತ್ರಣ ಹೇರಲಾಗುತ್ತಿದೆ ಎಂದು ಸರ್ಕಾರ ಟೆಕ್ ಕಂಪನಿಗಳಿಗೆ ತಿಳಿಸಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಉದ್ಯಮ ಪ್ರತಿನಿಧಿಗಳು ತಿಳಿಸಿದ್ದಾರೆ. ಕೆಲವು ವರ್ಗದ ಲ್ಯಾಪ್​ಟಾಪ್​ಗಳು ಮತ್ತು ಕಂಪ್ಯೂಟರ್​ಗಳ ಆಮದನ್ನು ನಿರ್ಬಂಧಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಈ ಹಿಂದೆ ನವೆಂಬರ್ 1 ರವರೆಗೆ ಮುಂದೂಡಿತ್ತು. ಈ ಸಾಧನಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರ ಕಂಪನಿಗಳಿಗೆ ಮೂರು ತಿಂಗಳ ಸಮಯ ನೀಡಿತ್ತು.

ನವೆಂಬರ್ 1 ರ ನಂತರ ಯಾವುದೇ ಕಂಪನಿಯು ಪರವಾನಗಿ ಇಲ್ಲದೆ ಲ್ಯಾಪ್​ಟಾಪ್​​ಗಳು, ಕಂಪ್ಯೂಟರ್​ಗಳು ಮತ್ತು ಸಂಬಂಧಿತ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿರ್ಬಂಧಿತ ಸರಕುಗಳನ್ನು ಪರವಾನಗಿ ಇಲ್ಲದೆ 2023 ರ ಅಕ್ಟೋಬರ್ 31 ರವರೆಗೆ ಆಮದು ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಲ್ಯಾಪ್​ಟಾಪ್​ಗಳು, ಟ್ಯಾಬ್ಲೆಟ್​ಗಳು, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್​ಗಳು ಮತ್ತು ಸರ್ವರ್​ಗಳ ಆಮದಿಗೆ ಅಕ್ಟೋಬರ್ 31 ರೊಳಗೆ ಉದಾರ ಪರಿವರ್ತನಾ ವ್ಯವಸ್ಥೆಗಳನ್ನು ಸೂಚಿಸಲಾಗುವುದು ಎಂದು ಕೇಂದ್ರ ಹೇಳಿದೆ. ಸುರಕ್ಷತಾ ಕಾರಣಗಳಿಗಾಗಿ ಮತ್ತು 'ಆತ್ಮನಿರ್ಭರ ಭಾರತ್' ಅಭಿಯಾನವನ್ನು ಉತ್ತೇಜಿಸಲು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.

ಇದನ್ನೂ ಓದಿ: ಗೂಗಲ್​​ನ ಹೊಸ ವೈಶಿಷ್ಟ್ಯ Grammar Check; ಬಳಸುವುದು ಹೇಗೆ?... ನೀವೂ ಒಮ್ಮೆ ಟ್ರೈ ಮಾಡಿ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.