ಇತ್ತೀಚಿನ ಕೆಲವು ವರ್ಷಗಳಿಂದ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸ್ಥಾನಮಾನಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಬದಲಾಗುತ್ತಿರುವ ಟ್ರೆಂಡ್‌ಗಳಿಗೆ ಅನುಗುಣವಾಗಿ ಹಣಕಾಸಿನ ವಿಷಯಗಳಲ್ಲೂ ಕೌಶಲ್ಯದಿಂದ ವ್ಯವಹರಿಸುತ್ತಿದ್ದಾರೆ. ಕೇವಲ ಮನೆಯ ಹಣಕಾಸುಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸುತ್ತಿಲ್ಲ. ಇದಕ್ಕೆ ಬದಲಾಗಿ ಹಣ ಹೂಡಿಕೆ ಮಾಡುವಲ್ಲಿಯೂ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ.
ಅನೇಕ ಭಾರತೀಯ ಮಹಿಳೆಯರು ವಿಶೇಷವಾಗಿ ಹೂಡಿಕೆ ಮಾಡುವಾಗ ನಷ್ಟದ ಭಯ ಹೊಂದಿರುತ್ತಾರಂತೆ. ಹೀಗಾಗಿ ಅವರು ಹೆಚ್ಚಾಗಿ ಚಿನ್ನ ಮತ್ತು ಸ್ಥಿರ ಠೇವಣಿಗಳಂತಹ ಸಾಂಪ್ರದಾಯಿಕ ಹೂಡಿಕೆ ಯೋಜನೆಗಳಿಗೆ (ಎಫ್‌ಡಿ) ಆದ್ಯತೆ ನೀಡುತ್ತಾರೆ. ಆದರೆ ದೀರ್ಘಾವಧಿಯ ಸಂಪತ್ತನ್ನು ಸೃಷ್ಟಿಸಲು ಇವು ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ಹೂಡಿಕೆ ಮಾಡಬೇಕಿದೆ. ಹಾಗಿದ್ದರೆ ಅದಕ್ಕೆ ಕೆಲವೊಂದು ಮಾರ್ಗೋಪಾಯಗಳನ್ನು ಅನುಸರಿಸಲೇಬೇಕಿದೆ.
ಆರ್ಥಿಕ ಸಾಕ್ಷರತೆ ಅತ್ಯಗತ್ಯ: ವರದಿಯೊಂದರ ಪ್ರಕಾರ, ದೇಶದಲ್ಲಿ ಶೇ.21ರಷ್ಟು ಮಹಿಳೆಯರು ಮಾತ್ರ ಆರ್ಥಿಕವಾಗಿ ಸಾಕ್ಷರಸ್ಥರಾಗಿದ್ದಾರೆ. ಅವರೇ ಕೆಲವೊಮ್ಮೆ ಸರಿಯಾದ ಹೂಡಿಕೆಗಳನ್ನು ಆಯ್ಕೆ ಮಾಡುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಎಲ್ಲವೂ ನಮ್ಮ ಬೆರಳಂಚಿನಲ್ಲಿ ಸಿಗುವುದರಿಂದ ಮೊದಲಿಗಿಂತ ಎಲ್ಲವೂ ಬದಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೂಡಿಕೆ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಸುದ್ದಿಪತ್ರಗಳು, ವೆಬ್‌ಸೈಟ್‌ಗಳು, ಉಚಿತ ಆನ್‌ಲೈನ್ ಕೋರ್ಸ್‌ಗಳು, ವಿಡಿಯೋಗಳು ಮತ್ತು ಪಾಡ್‌ಕಾಸ್ಟ್‌ಗಳಂತಹ ಹಲವು ಸೌಲಭ್ಯಗಳಿವೆ.
ಇದನ್ನೂ ಓದಿ: ಹೊಸ ಕಾನೂನಿಗೆ ಉದ್ಯಮಿಗಳು ತತ್ತರ.. ಪುರುಷರಿಗೆ ಯುವತಿಯರ ಡ್ರೆಸ್ ಹಾಕಿ ಜಾಹೀರಾತು ಕ್ರಿಯೇಟ್!
ಹೂಡಿಕೆ ಆಯ್ಕೆಗಳ ಬಗ್ಗೆ ಯಾವುದೇ ಅನುಮಾನಗಳಿದ್ದಲ್ಲಿ ಅವುಗಳನ್ನು ನಿವಾರಿಸಲು ಆಯಾ ಸಂಸ್ಥೆಗಳ ಸಹಾಯ ಕೇಂದ್ರಗಳು ಕೂಡಾ ಇವೆ. ಹಣದ ವ್ಯವಹಾರವನ್ನು ಹೇಗೆ ನಿರ್ವಹಿಸುವುದು, ಮನೆಯ ಬಜೆಟ್ ಯೋಜಿಸುವುದು, ನಿರ್ದಿಷ್ಟ ಹಣಕಾಸಿನ ಗುರಿಗಳನ್ನು ತಲುಪಲು, ನಿಮ್ಮ ಹಣವನ್ನು ಹೇಗೆ ಹೂಡಿಕೆ ಮಾಡುವುದು ಮತ್ತು ಹಣಕಾಸಿನ ಅರಿವು ಮೂಡಿಸುವಲ್ಲಿ ಇವು ಸಹಾಯಕ.
ಉಳಿತಾಯವನ್ನು ಹೂಡಿಕೆಯಾಗಿ ಪರಿವರ್ತಿಸಿ: ನಷ್ಟದ ಸಂಭವ ಇಲ್ಲದ ಸುರಕ್ಷಿತ ಯೋಜನೆಗಳಲ್ಲಿ ಹಣವನ್ನು ಉಳಿಸಬಹುದು. ಆದರೆ, ಏರುತ್ತಿರುವ ಹಣದುಬ್ಬರದಿಂದ ಕೊಂಚ ಕಷ್ಟವೆನಿಸಬಹುದು. ಆದರೆ ನಿಮ್ಮ ಗುರಿ ಸಾಧಿಸಲು ಮತ್ತು ದೀರ್ಘಾವಧಿಯ ಸಂಪತ್ತನ್ನು ಸೃಷ್ಟಿಸಲು ಹೂಡಿಕೆಗಳು ಅನಿವಾರ್ಯವಾಗಿದೆ. ಅದಕ್ಕಾಗಿ ಅನೇಕ ಹೂಡಿಕೆ ಯೋಜನೆಗಳು ಲಭ್ಯವಿದೆ. ಅವರು ನಿಮ್ಮ ಹಣವನ್ನು ಉಳಿಸಲು ನಿಮಗಾಗಿ ಸಹಾಯ ಮಾಡುತ್ತಾರೆ. ಉಳಿತಾಯವನ್ನು ಅಂತಹ ಯೋಜನೆಗಳಿಗೆ ತಿರುಗಿಸಲು ಪ್ರಯತ್ನಿಸಿ. ವ್ಯವಸ್ಥಿತ ಹೂಡಿಕೆ ಯೋಜನೆಯನ್ನು ಇಂದಿನಿಂದಲೇ ಪ್ರಾರಂಭಿಸಿ. ಉತ್ತಮ ಉಳಿತಾಯಕ್ಕಾಗಿ ಭದ್ರತಾ ಯೋಜನೆಗಳು ಮತ್ತು ಮ್ಯೂಚುಯಲ್ ಫಂಡ್‌ಗಳಲ್ಲಿ ನಿಯಮಿತವಾಗಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಇಂದಿನಿಂದಲೇ ತೊಡಗಿ.
ವಿಮೆ ವಿಚಾರಕ್ಕೆ ಆದ್ಯತೆ ನೀಡಿ: ಇತ್ತೀಚಿನ ದಿನಗಳಲ್ಲಿ, ಮನೆಯ ಹಣಕಾಸಿನ ವಿಷಯದಲ್ಲಿ ಮಹಿಳೆಯರು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದರೆ, ವಿಮೆ ವಿಚಾರಕ್ಕೆ ಮಾತ್ರ ಅವರಿನ್ನೂ ಸೂಕ್ತ ಆದ್ಯತೆ ನೀಡಿಲ್ಲ. ಮಹಿಳೆಯರು ಆರೋಗ್ಯ ವಿಮೆ ಮತ್ತು ಜೀವ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳಬೇಕು. ಅನಿರೀಕ್ಷಿತ ಅನಾರೋಗ್ಯವು ನಿಮ್ಮ ಸಂಪೂರ್ಣ ಉಳಿತಾಯವನ್ನು ಅಳಿಸಿಹಾಕಬಹುದು.
ಹಾಗಾಗಿ ಇದನ್ನು ತಪ್ಪಿಸಲು, ನೀವು ಆರೋಗ್ಯ ವಿಮೆಯನ್ನು ಹೊಂದಿರಬೇಕು. ಅಹಿತಕರ ಘಟನೆಗಳ ಸಂದರ್ಭದಲ್ಲಿ ಜೀವ ವಿಮೆ ಕುಟುಂಬದವರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ. ನಿಮ್ಮ ಹಣಕಾಸು ಯೋಜನೆಯಲ್ಲಿ ವಿಮಾ ಪಾಲಿಸಿಗಳನ್ನು ಸೇರಿಸುವುದು ಅತ್ಯಗತ್ಯ. ಲಭ್ಯವಿರುವ ವಿಮಾ ಪಾಲಿಸಿಗಳನ್ನು ನೋಡಿ ಮತ್ತು ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಪಾಲಿಸಿಯನ್ನು ಆಯ್ಕೆ ಮಾಡಲು ಪ್ರಯತ್ನಿಸಿ.
ಇದನ್ನೂ ಓದಿ: ಸಾತ್ಪುರ ಪರ್ವತ ಶ್ರೇಣಿಯಲ್ಲಿದೆ ಅಮ್ಜಾರಿ ಎಂಬ ಜೇನು ಗ್ರಾಮ: ಬದುಕಿಗೆ ಆಸರೆಯಾದ ಜೇನು ಸಾಕಾಣಿಕೆ