ETV Bharat / business

ವಾಹನ ವಿಮೆ ಮಾಡಿಸುವ ಮುನ್ನ ಅನುಸರಿಸಬೇಕಾದ ಟಿಪ್ಸ್..​ - ಈಟಿವಿ ಭಾರತ ಕನ್ನಡ

ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ ದಂಡ ಭರಿಸಬೇಕಾಗಬಹುದು. ವಿಮೆ ಇಲ್ಲದಿರುವಾಗ ಏನಾದರೂ ಅಪಘಾತ ಸಂಭವಿಸಿದರೆ ವಾಹನ ಮಾಲೀಕನೇ ಎಲ್ಲಾ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಆದ್ದರಿಂದ, ಯಾವುದೇ ಸಂದರ್ಭದಲ್ಲಿ, ನೀವು ಕನಿಷ್ಠ ಪಕ್ಷ ಥರ್ಡ್ ಪಾರ್ಟಿ ವಿಮೆ ಹೊಂದಿರದೆ ವಾಹನ ಚಲಾಯಿಸಲೇಬೇಡಿ.

ವಾಹನ ವಿಮೆ ಕೊಳ್ಳುವ ಮುನ್ನ ಅನುಸರಿಸಬೇಕಾದ ಟಿಪ್ಸ್​
Tips for selecting the best insurance coverage for your vehicles
author img

By

Published : Oct 31, 2022, 12:00 PM IST

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಜನತೆ ಹೊಸ ವಾಹನ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ಹೊಸ ವಾಹನ ಖರೀದಿಸಿ ರಸ್ತೆಗಿಳಿಯುವ ಮುನ್ನ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಅಗತ್ಯ. ಇದರಲ್ಲಿ ಮೊದಲನೆಯದು ವಾಹನ ವಿಮೆ ಮಾಡಿಸುವುದು. ಹೊಸ ದ್ವಿಚಕ್ರ ವಾಹನಗಳಿಗೆ ಐದು ವರ್ಷಗಳ ಥರ್ಡ್-ಪಾರ್ಟಿ ವಿಮೆ ಮತ್ತು ಕಾರುಗಳಿಗೆ ಮೂರು ವರ್ಷಗಳ ವಿಮೆ ಕಡ್ಡಾಯವಾಗಿದೆ. ಆದರೆ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳುವಾಗ ಜನ ಕೆಲ ತಪ್ಪುಗಳನ್ನು ಮಾಡುತ್ತಾರೆ. ಹೀಗಾಗಿ ಈ ಬಗ್ಗೆ ಸರಿಯಾದ ತಿಳುವಳಿಕೆ ಇದ್ದಲ್ಲಿ ಸೂಕ್ತವಾದ ವಿಮಾ ಪಾಲಿಸಿ ಆಯ್ಕೆ ಮಾಡಬಹುದು.

ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ ದಂಡ ಭರಿಸಬೇಕಾಗಬಹುದು. ವಿಮೆ ಇಲ್ಲದಿರುವಾಗ ಏನಾದರೂ ಅಪಘಾತ ಸಂಭವಿಸಿದರೆ ವಾಹನ ಮಾಲೀಕನೇ ಎಲ್ಲಾ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಆದ್ದರಿಂದ, ಯಾವುದೇ ಸಂದರ್ಭದಲ್ಲಿ, ನೀವು ಕನಿಷ್ಠ ಪಕ್ಷ ಥರ್ಡ್ ಪಾರ್ಟಿ ವಿಮೆ ಹೊಂದಿರದೆ ವಾಹನ ಚಲಾಯಿಸಲೇಬೇಡಿ. ಆದರೆ ಕಾರು ಮತ್ತು ಬೈಕ್‌ಗಳ ಮಾರಾಟಗಾರರು ಅವರು ಒಪ್ಪಂದ ಮಾಡಿಕೊಂಡಿರುವ ವಿಮಾ ಕಂಪನಿಗಳ ಪಾಲಿಸಿಯನ್ನೇ ಕೊಳ್ಳುವಂತೆ ನಿಮ್ಮ ಮೇಲೆ ಪ್ರಭಾವ ಬೀರಬಹುದು ಎಂಬುದು ಗೊತ್ತಿರಲಿ.

ಅಪಘಾತ ಅಥವಾ ಕಳ್ಳತನದ ಸಂದರ್ಭದಲ್ಲಿ ಸಮಗ್ರ ವಿಮಾ ಪಾಲಿಸಿ ನಿಮಗೆ ಪರಿಹಾರ ಒದಗಿಸುತ್ತದೆ, ಇಲ್ಲದಿದ್ದರೆ ನೀವು ನಷ್ಟಕ್ಕೊಳಗಾಗಬಹುದು. ಹೆಚ್ಚಿನ ಜನರು ಸಮಗ್ರ ಕಾರು ವಿಮೆಯನ್ನು ಸಮಯಕ್ಕೆ ಸರಿಯಾಗಿ ನವೀಕರಿಸುವುದಿಲ್ಲ, ಥರ್ಡ್ ಪಾರ್ಟಿ ವಿಮಾ ಪಾಲಿಸಿ ಸಾಕೆಂದು ಭಾವಿಸುತ್ತಾರೆ. ಆದರೆ ಇದು ಸರಿಯಲ್ಲ. ಕಾರಿಗೆ ಸಣ್ಣಪುಟ್ಟ ಹಾನಿಯಾದರೂ ದುರಸ್ತಿಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ ವಿಮಾ ಪಾಲಿಸಿ ಇದ್ದಲ್ಲಿ ನಿಮ್ಮ ಜೇಬಿಗೆ ಯಾವುದೇ ಹಣಕಾಸಿನ ಒತ್ತಡ ಇರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ವಿಮೆ ಪಡೆಯುವ ಸಮಯದಲ್ಲಿ ಕಾರಿನ ಮೌಲ್ಯ ನಿರ್ಧರಿಸುವುದು ಬಹಳ ಮುಖ್ಯ. ಹೆಚ್ಚಿನ ಸಂದರ್ಭಗಳಲ್ಲಿ ವಿಮಾ ಪ್ರಿಮಿಯಂ ಕಡಿಮೆ ಮಾಡಲು ಘೋಷಿತ ವಿಮಾ ಮೌಲ್ಯವನ್ನು (IDV) ಕಡಿಮೆ ತೋರಿಸಲಾಗುತ್ತದೆ. ನಿಮ್ಮ ಕಾರಿಗೆ ಯಾವುದೇ ಹಾನಿಯಾದಾಗ ಅದರ ಬದಲಾಗಿ ನೀಡಲಾಗುವ ಮೌಲ್ಯ ಇದು. ಮೌಲ್ಯ ಕಡಿಮೆ ಮಾಡುವುದರಿಂದ ನೀವು ಒಂದಿಷ್ಟು ಪ್ರೀಮಿಯಂ ಉಳಿಸಬಹುದು. ಆದರೆ ಕಾರಿಗೆ ಏನಾದರೂ ಹಾನಿಯಾದರೆ ಮಾತ್ರ ನೀವು ಸಂಪೂರ್ಣ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸೂಕ್ತ ಘೋಷಿತ ವಿಮಾ ಮೌಲ್ಯವನ್ನು ನಿರ್ಧರಿಸುವುದು ಬಹಳ ಮುಖ್ಯ.

ಕೆಲ ಸಂದರ್ಭಗಳಲ್ಲಿ ಸಪ್ಲಿಮೆಂಟರಿ ವಿಮಾ ಪಾಲಿಸಿಗಳನ್ನು ಪಡೆಯುವುದು ಸಹ ಸರಿಯಾಗಿದೆ. ಇದು ಹೊಸ ಕಾರಿಗೆ ಹೆಚ್ಚುವರಿ ರಕ್ಷಣೆ ನೀಡುತ್ತದೆ. ಈ ದಿನಗಳಲ್ಲಿ ಕೆಲವು ಅನಗತ್ಯ ಆಡ್-ಆನ್ ಪಾಲಿಸಿಗಳನ್ನು ಸಹ ನೀಡಲಾಗುತ್ತದೆ. ಆದ್ದರಿಂದ, ನಿಮಗೆ ಪ್ರಯೋಜನಕಾರಿಯಾದ ಆಡ್-ಆನ್ ಅನ್ನು ಟಿಕ್ ಮಾಡುವುದು ಉತ್ತಮ.

ಕಡಿಮೆ ಪ್ರಿಮಿಯಂ ಇದೆ ಎಂಬ ಒಂದೇ ಕಾರಣಕ್ಕೆ ಪಾಲಿಸಿ ಕೊಳ್ಳುವುದು ಸೂಕ್ತವಲ್ಲ. ವಿಮಾ ಕಂಪನಿ ಒದಗಿಸುವ ಸೇವೆಗಳನ್ನು ಪರಿಶೀಲಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಬೇಕು. ಈಗಾಗಲೇ ನಿಮ್ಮ ಬಳಿಯಿರುವ ಕಾರನ್ನು ಮಾರಾಟ ಮಾಡುವ ಮೂಲಕ ನೀವು ಹೊಸ ಕಾರನ್ನು ಖರೀದಿಸುತ್ತಿದ್ದರೆ, ನೋ ಕ್ಲೈಮ್ ಬೋನಸ್ ಅನ್ವಯಿಸುತ್ತದೆಯಾ ನೋಡಿ. ಇದರಿಂದ ನೀವು ವಿಮಾ ಕಂತುಗಳಲ್ಲಿ ಸ್ವಲ್ಪ ರಿಯಾಯಿತಿ ಪಡೆಯಬಹುದು.

ಇದನ್ನೂ ಓದಿ: ಬೆಂಗಳೂರಲ್ಲಿ ವಾಹನ ವಿಮೆ ಬದಲಾಯಿಸುವ ಬೃಹತ್ ಜಾಲ ಪತ್ತೆ: ಆರೋಪಿ ಅಂದರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.