ETV Bharat / business

ಈರುಳ್ಳಿ ರಫ್ತಿನ ಮೇಲೆ ಯಾವುದೇ ನಿರ್ಬಂಧವಿಲ್ಲ: ಕೇಂದ್ರದ ಸ್ಪಷ್ಟನೆ - ವಾರ್ಷಿಕವಾಗಿ ಈ ರಫ್ತಿನ ಪ್ರಮಾಣದಲ್ಲಿ

ಈರುಳ್ಳಿ ರಫ್ತಿಗೆ ವಿಧಿಸಿರುವ ನಿರ್ಬಂಧ ತೆಗೆದು ಹಾಕುವಂತೆ ಎನ್​ಸಿಪಿ ನಾಯಕಿಯ ಟ್ವೀಟ್​ಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್​ ಗೋಯೆಲ್​ ಅಂಕಿ ಅಂಶಗಳ ಸಮೇತ ತಿರುಗೇಟು ನೀಡಿದ್ದು, ಜನರಿಗೆ ತಪ್ಪು ಸುದ್ದಿ ತಲುಪಿಸಬೇಡಿ ಎಂದಿದ್ದಾರೆ

oniononion
onion
author img

By

Published : Feb 27, 2023, 11:13 AM IST

ನವದೆಹಲಿ: ಭಾರತದಿಂದ ಈರುಳ್ಳಿ ರಫ್ತಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. 2022ರ ಏಪ್ರಿಲ್​ನಿಂದ ಡಿಸೆಂಬರ್​ವರೆಗೆ 523.8 ಮಿಲಿಯನ್​ ಈರುಳ್ಳಿ ರಫ್ತು ಮಾಡಲಾಗಿದೆ. ವಾರ್ಷಿಕವಾಗಿ ಈ ರಫ್ತಿನ ಪ್ರಮಾಣದಲ್ಲಿ ಶೇ 16.3ರಷ್ಟು ಏರಿಕೆಯಾಗಿದೆ. ಭಾರತದಿಂದ ಈರುಳ್ಳಿ ರಫ್ತಿಗೆ ನಿಷೇಧ ಹೇರಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ಸ್ಪಷ್ಟಪಡಿಸಿದೆ.

ಯಾವುದೇ ನಿರ್ಬಂಧ ಹೇರಿಲ್ಲ: ಪ್ರಸ್ತುತ ಈರುಳ್ಳಿ ರಫ್ತಿಗೆ ಯಾವುದೇ ನಿರ್ಬಂಧ ಅಥವಾ ನಿಷೇಧ ಹೇರಿಲ್ಲ. ಈರುಳ್ಳಿ ವ್ಯಾಪಾರ ನೀತಿಯು ಉಚಿತ ವರ್ಗದ ಅಡಿಯಲ್ಲಿದೆ. ಬೇರೆ ದೇಶಕ್ಕೆ ಈರುಳ್ಳಿಗಳನ್ನು ನಮ್ಮ ದೇಶದಿಂದ ಕಳುಹಿಸುವುದಕ್ಕೆ ಯಾವುದೇ ಅಡೆತಡೆಗಳನ್ನು ವಿಧಿಸಿಲ್ಲ. ಈ ಸಂಬಂಧ ಯಾವುದೇ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಬೇಡಿ ಎಂದು ಕೇಂದ್ರ ಸಚಿವ ಪಿಯೂಷ್​ ಗೋಯೆಲ್​, ಎನ್​ಸಿಪಿ ನಾಯಕಿ ಸುಪ್ರಿಯಾ ಸುಳೆಗೆ ತಿರುಗೇಟು ನೀಡಿದ್ದಾರೆ.

ತಪ್ಪುದಾರಿಗೆ ಎಳೆಯಬೇಡಿ: ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ವಿಧಿಸಿರುವ ನಿಷೇಧವನ್ನು ಹಿಂಪಡೆಯುವಂತೆ ಆಗ್ರಹಿಸಿ ಎನ್​ಸಿಪಿ ನಾಯಕಿ ಸುಪ್ರಿಯಾ ಸುಳೆ ಟ್ವೀಟ್​ ಮಾಡಿದ್ದರು. ಈ ಟ್ವೀಟ್​ಗೆ ಉತ್ತರಿಸಿರುವ ಕೇಂದ್ರ ವಾಣಿಕ್ಯ ಸಚಿವ ಪಿಯೂಷ್​ ಗೋಯೆಲ್​, ತಪ್ಪು ದಾರಿಗೆ ಎಳೆಯುತ್ತಿರುವ ಇಂತಹ ಹೇಳಿಕೆ ನೀಡುತ್ತಿರುವುದು ದುರದುಷ್ಟಕರ. 2022ರ ಜುಲೈನಿಂದ ಡಿಸೆಂಬರ್​ವರೆಗೆ ಈರುಳ್ಳಿ ರಫ್ತು ಪ್ರತಿ ತಿಂಗಳು 40 ಮಿಲಿಯನ್ ಅಮೆರಿಕನ್​ ಡಾಲರ್​​ ಮಾರ್ಕ್‌ಗಿಂತ ಹೆಚ್ಚಿದೆ. ಇದರಿಂದ ನಮ್ಮ ಅನ್ನದಾತರಿಗೆ ಪ್ರಯೋಜನಕಾರಿಯಾಗಿದೆ ಎಂದಿದ್ದಾರೆ.

ಮೋದಿ ಸರ್ಕಾರದ ಬೆಂಬಲ ಮತ್ತು ಸುಧಾರಣೆ ನೀತಿ ಹೊಂದಿದ್ದು, ಇದರಿಂದ ಕೃಷಿಕರು ತಮ್ಮ ಇಳುವರಿ ಹೆಚ್ಚಿಸಲು ಮತ್ತು ಉತ್ತಪನ್ನದ ಗುಣಮಟ್ಟ ಕಾಪಾಡಲು ಸಹಾಯಕವಾಗಿದೆ. ಭಾರತದಿಂದ ಅತಿ ಹೆಚ್ಚು ಈರುಳ್ಳಿ ರಫ್ತು ಮಾಡುತ್ತಿರುವ ಗೌರವಕ್ಕೆ ಮಹಾರಾಷ್ಟ್ರ ಪಾತ್ರವಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಈರುಳ್ಳಿ ಬೀಜಕ್ಕೆ ಮಾತ್ರ ನಿರ್ಬಂಧ: ಈರುಳ್ಳಿ ಬೀಜಗಳಿಗೆ ರಫ್ತಿಗೆ ಮಾತ್ರ ನಿರ್ಬಂಧ ಹೇರಲಾಗಿದೆ. ಅದನ್ನು ಕೂಡ ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯದ ಅಧಿಕಾರದ ಅಡಿ ಅನುಮತಿಸಲಾಗಿದೆ. ಏತನ್ಮಧ್ಯೆ, 2022-23ರ ವಾರ್ಷಿಕ ಅವಧಿಯಲ್ಲಿ ಮಾರುಕಟ್ಟೆಯ ಮಧ್ಯಸ್ಥಿಕೆಗೆ ಅಗತ್ಯ ಉಂಟಾದರೆ ಎಂಬ ಕಾರಣದಿಂದ ಸರ್ಕಾರ 2.5 ಲಕ್ಷ ಮೆಟ್ರಿಕ್​ ಟನ್​ನ ತುರ್ತು ಸಂಗ್ರಹ ಮಾಡಿತ್ತು.

ದೇಶದಲ್ಲಿನ ಈರುಳ್ಳಿ ಉತ್ಪಾದನೆ: ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಒಟ್ಟು ಈರುಳ್ಳಿಯಲ್ಲಿ ಶೇ 10-15 ರಷ್ಟನ್ನು ರಫ್ತು ಮಾಡಲಾಗುತ್ತದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಿಂದ ಹೆಚ್ಚಿನ ಈರುಳ್ಳಿ ರಫ್ತು ಮಾಡಲಾಗುತ್ತದೆ. ಖಾರಿಫ್ ಮತ್ತು ರಬಿ ಈರುಳ್ಳಿಯನ್ನು ರಫ್ತು ಮಾಡಲಾಗುತ್ತದೆ. ಸಾಮಾನ್ಯವಾಗಿ ಮಳೆಯಿಂದಾಗಿ ಈರುಳ್ಳಿ ಕೊಳೆಯುವ ಸಾಧ್ಯತೆ ಹೆಚ್ಚಿರುವುದರಿಂದ ಸೆಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳುಗಳಲ್ಲಿ ಈರುಳ್ಳಿ ಬೆಲೆ ಹೆಚ್ಚುತ್ತದೆ. ಪಶ್ಚಿಮ ಏಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಾ ಮತ್ತು ನೇಪಾಳದಿಂದ ಭಾರತದ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಇದೆ.

ಜಾಗತಿಕವಾಗಿ ಅಡುಗೆಗೆ ಬಳಕೆಯಾಗುವ ಅತಿ ಹೆಚ್ಚಿನ ತರಕಾರಿಗಳಲ್ಲಿ ಈರುಳ್ಳಿ ಪ್ರಮುಖವಾಗಿದೆ. ಬಹುತೇಕ ಅಡುಗೆಗಳು ಈರುಳ್ಳಿ ಮತ್ತು ಟೊಮೆಟೊ ಪ್ರಧಾನವಾಗಿರುತ್ತದೆ. ಸೂಪ್​ನಿಂದ ಅಡುಗೆ ಅಲಂಕಾರದವರೆಗೆ ಈರುಳ್ಳಿಯನ್ನು ಬಳಸುವುದರಿಂದಾಗಿ ಇದಕ್ಕೆ ಬೇಡಿಕೆ ಹೆಚ್ಚಿದೆ.

ಇದನ್ನೂ ಓದಿ: ನೀವು ಯಾವ ಪದ್ಧತಿಯಲ್ಲಿ ತೆರಿಗೆ ಪಾವತಿಸುತ್ತೀರಿ..? ನಿಮ್ಮ ಸಹಾಯಕ್ಕೆ IT ಇಲಾಖೆಯಿಂದ ಕ್ಯಾಲ್ಕುಲೇಟರ್ ವ್ಯವಸ್ಥೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.