ಹೈದರಾಬಾದ್: ಒಮ್ಮೊಮ್ಮೆ ಏನೇನೋ ನಡೆದು ಬಿಡುತ್ತೆ. ತಂತ್ರಜ್ಞಾನದ ಪ್ರಭಾವವೋ ಅಥವಾ ಕಣ್ತಪ್ಪಿನಿಂದಾದ ಪ್ರಮಾದವೋ ಗೊತ್ತಿಲ್ಲ. ಆದರೆ ಇಲ್ಲೊಬ್ಬ ಗ್ರಾಹಕ ಬ್ಯಾಂಕ್ವೊಂದರಿಂದ ಪಡೆದಿದ್ದು ಕೇವಲ 45 ಸಾವಿರ ರೂ. ಲಿಮಿಟ್ ಇರುವ ಕ್ರೆಡಿಟ್ ಕಾರ್ಡ್ ನ್ನು. ಆದರೆ ಆ ಗ್ರಾಹಕ ಬಳಸಿದ್ದು ಬರೋಬ್ಬರಿ 41.69 ಲಕ್ಷ ರೂ.ಗಳನ್ನು.
ಮತ್ತೊಬ್ಬ ವ್ಯಕ್ತಿ 90 ಸಾವಿರ ಮಿತಿ ಇರುವ ಕ್ರೆಡಿಟ್ ಕಾರ್ಡ್ನಿಂದ 26.85 ಲಕ್ಷ ರೂ.ಗಳನ್ನು ಬಳಸಿಕೊಂಡಿದ್ದಾರೆ. ಇದು ನಂತರ ಆಯಾ ಸಂಬಂಧ ಪಟ್ಟ ಬ್ಯಾಂಕ್ಗಳಿಗೆ ತಮಗೆ ಮೋಸ ಆಗಿರುವುದು ಗೊತ್ತಾಗಿದೆ. ಈಗ ಅವರು ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನು?: ಗಚ್ಚಿಬೌಲಿಯ ಬ್ಯಾಂಕ್‌ನಿಂದ ಇಬ್ಬರು ವ್ಯಕ್ತಿಗಳು ಕ್ರೆಡಿಟ್ ಕಾರ್ಡ್ ತೆಗೆದುಕೊಂಡಿದ್ದಾರೆ. ಕಾರ್ಡ್ ಗಳ ಮಿತಿ ಮೀರಿ 68.55 ಲಕ್ಷ ರೂಗಳನ್ನು ಬಳಸಿದ್ದಾರೆ. ಎರಡೂ ಕಾರ್ಡ್‌ಗಳ ಕ್ರೆಡಿಟ್ ಮಿತಿ ಕೇವಲ 1.35 ಲಕ್ಷ ರೂ.. ಆದರೆ ಈ ಎರಡೂ ಬಳಕೆದಾರರು ತಮ್ಮ ಮಿತಿಗೂ 100 ಪಟ್ಟು ಅಧಿಕ ಹಣ ಬಳಕೆ ಮಾಡಿಕೊಂಡಿದ್ದಾರೆ.
ಕ್ರೆಡಿಟ್ ಕಾರ್ಡ್ ವಂಚನೆ: ಇದರಿಂದ ಅನುಮಾನ ಬಂದ ಬ್ಯಾಂಕ್ ಸಿಬ್ಬಂದಿ, ಇವರ ವಹಿವಾಟುಗಳನ್ನು ಪತ್ತೆ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಬಳಕೆದಾರರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಇವರ ವಿಳಾಸ ಮಾತ್ರ ಗೊತ್ತೇ ಆಗಿಲ್ಲ. ಹೀಗಾಗಿ ಬ್ಯಾಂಕ್ ಮ್ಯಾನೇಜರ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಮತ್ತು ಪೊಲೀಸರು ಮೂಲ ಮಿತಿಯನ್ನು ಮೀರಿ ಹಣ ಹಿಂಪಡೆಯಲು ಹೇಗೆ ಯಶಸ್ವಿಯಾದರು ಎಂಬುದನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಇದನ್ನು ಓದಿ:ಮಹಿಳಾ ಹೆಡ್ ಕಾನ್ಸ್ಟೇಬಲ್ಗೆ ಡ್ರ್ಯಾಗರ್ ನಿಂದ ಇರಿದ ರೌಡಿಶೀಟರ್