ETV Bharat / business

ಇಂದಿನ ಸ್ಟಾಕ್​ ಮಾರ್ಕೆಟ್​ ಮಾಹಿತಿ: ವಾಲ್​ಸ್ಟ್ರೀಟ್‌ ದುರ್ಬಲ ವಹಿವಾಟಿನಿಂದಾಗಿ ಕುಸಿದ ಏಷ್ಯನ್ ಷೇರುಗಳು - ಉಚ್ಚಾಟಿತ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್

ಓಪನ್​ ಎಐ ಸಂಸ್ಥೆಯ ಉಚ್ಚಾಟಿತ ಸಿಇಒ ಮರಳಿ ಕಂಪನಿ ಸೇರುತ್ತಿರುವುದು ತಂತ್ರಜ್ಞಾನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಏಷ್ಯಾ ಸ್ಟಾಕ್​ ಮಾರ್ಕೆಟ್​ಗಳೂ ನಷ್ಟಕ್ಕೀಡಾಗಿವೆ.

ಇಂದಿನ ಸ್ಟಾಕ್​ ಮಾರ್ಕೆಟ್​ ಮಾಹಿತಿ
ಇಂದಿನ ಸ್ಟಾಕ್​ ಮಾರ್ಕೆಟ್​ ಮಾಹಿತಿ
author img

By ETV Bharat Karnataka Team

Published : Nov 22, 2023, 3:29 PM IST

ಬ್ಯಾಂಕಾಕ್: ಚಾಟ್‌ಜಿಪಿಟಿ ತಯಾರಕ ಓಪನ್‌ಎಐನ ಉಚ್ಚಾಟಿತ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್​ ಕಂಪನಿಗೆ ಮರಳಿರುವುದು ಏಷ್ಯಾ ಷೇರು ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿದೆ. ಬುಧವಾರದ ವಹಿವಾಟಿನಲ್ಲಿ ಮುಂಬೈ ಮತ್ತು ಟೋಕಿಯೊ ಹೊರತುಪಡಿಸಿ ಇತರ ಪ್ರಮುಖ ಮಾರುಕಟ್ಟೆಗಳು ಕುಸಿತ ಕಂಡವು.

ಗರಿಷ್ಠ ಏರಿಕೆ ಕಾಣುತ್ತಾ ಸಾಗಿದ್ದ ವಾಲ್​​ಸ್ಟ್ರೀಟ್​ ಷೇರುಗಳು ಕೂಡ ನಷ್ಟಕ್ಕೆ ಒಳಗಾದವು. ಅಮೆರಿಕದ ಫ್ಯೂಚರ್ಸ್ ಷೇರಿನಲ್ಲೂ ಬದಲಾವಣೆಯಾಗಿದ್ದು, ತೈಲ ಬೆಲೆಗಳು ಇಳಿದಿವೆ. ನಾಳೆ(ಗುರುವಾರ) ಅಮೆರಿಕ ಮತ್ತು ಜಪಾನ್‌ ಮಾರುಕಟ್ಟೆಗಳಿಗೆ ರಜಾದಿನಕ್ಕೂ ಮೊದಲು ವಹಿವಾಟು ಕುಸಿದಿದೆ.

ಓಪನ್‌-ಎಐನಲ್ಲಿ ಶೇ.56 ರಷ್ಟು ಹೂಡಿಕೆ ಮಾಡಿರುವ ಮತ್ತು ಅದರ ತಂತ್ರಜ್ಞಾನದ ಹಕ್ಕುಗಳನ್ನು ಹೊಂದಿರುವ ಮೈಕ್ರೋಸಾಫ್ಟ್, ಉಚ್ಚಾಟಿತ ಸಿಇಒ ಆಲ್ಟ್‌ಮ್ಯಾನ್‌ರನ್ನು ನೇಮಿಸಿಕೊಳ್ಳಲು ಮುಂದಾಗಿತ್ತು. ಬಳಿಕ ಓಪನ್​ ಎಐ ನೌಕರರ ಒತ್ತಡ ಮತ್ತು ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾಡೆಲ್ಲಾ ಅವರ ವಿರೋಧದಿಂದಾಗಿ ಓಪನ್‌ಎಐ ಆಲ್ಟ್‌ಮ್ಯಾನ್‌ರನ್ನು ಮರಳಿ ನೇಮಿಸಿಕೊಳ್ಳಲು ಒಪ್ಪಿದೆ. ಈ ಬಗ್ಗೆ ಸ್ವತಃ ಆಲ್ಟ್‌ಮ್ಯಾನ್‌ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆ ಷೇರು ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದೆ.

ನಷ್ಟಕ್ಕೀಡಾದ ಮಾರುಕಟ್ಟೆಗಳು: ಹಾಂ​ಕಾಂಗ್‌ನ ಹ್ಯಾಂಗ್​ಸೆಂಗ್ ಶೇಕಡಾ 0.4 ರಷ್ಟು ಕುಸಿದಿದೆ. ಶಾಂಘೈ ಕಾಂಪೋಸಿಟ್ ಸೂಚ್ಯಂಕವು ಶೇಕಡಾ 0.7 ರಷ್ಟು, ಆಸ್ಟ್ರೇಲಿಯಾದ SandP/ASX ಶೇಕಡಾ 0.1 ರಷ್ಟು, ತೈವಾನ್, ಥಾಯ್ಲೆಂಡ್​​ ಷೇರುಗಳೂ ಕುಸಿದವು. SandP 500 ಕಳೆದ 17 ದಿನಗಳಲ್ಲಿ ಮೂರನೇ ಬಾರಿಗೆ ನಷ್ಟಕ್ಕೆ ಶೇಕಡಾ 0.2 ಕುಸಿದಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಶೇಕಡಾ 0.2 ರಷ್ಟು, ನಾಸ್ಡಾಕ್ ಕೋಆರ್ಡಿನೇಷನ್​ ಶೇಕಡಾ 0.6 ರಷ್ಟು ಕುಸಿತ ಕಂಡಿದೆ. ಜುಲೈ, ಅಕ್ಟೋಬರ್​, ನವೆಂಬರ್​ ತ್ರೈಮಾಸಿಕದಲ್ಲಿ ಗಳಿಕೆ ಮಾಡಿದ್ದ ಚಿಲ್ಲರೆ ವ್ಯಾಪಾರಿಗಳು ಮಿಶ್ರ ಅನುಭವ ಪಡೆದಿದ್ದಾರೆ. ಉತ್ತಮ ಲಾಭದ ಹೊರತಾಗಿಯೂ ಲೋವ್ಸ್ ಮಾರುಕಟ್ಟೆ ಶೇಕಡಾ 3.1 ರಷ್ಟು ಕುಸಿದಿದೆ. ಮಾರುಕಟ್ಟೆ ವಿಶ್ಲೇಷಕರ ಭವಿಷ್ಯವನ್ನ ಹುಸಿ ಮಾಡಿದ್ದ ಬೆಸ್ಟ್ ಬೈ ಶೇಕಡಾ 0.7 ರಷ್ಟು, ಡಿಕ್‌ನ ಸ್ಪೋರ್ಟಿಂಗ್ ಗೂಡ್ಸ್ 2.2 ರಷ್ಟು ನಷ್ಟ ಅನುಭವಿಸಿವೆ.

ಲಾಭ ಅನುಭವಿಸಿದ ಮಾರುಕಟ್ಟೆಗಳು: ಟೋಕಿಯೊದ ನಿಕ್ಕಿ ಮಾರುಕಟ್ಟೆ 225 ಅಂಕ, ಶೇಕಡಾ 0.3 ರಷ್ಟು ಏರಿಕೆ ಕಂಡು 33,451.83 ಕ್ಕೆ ತಲುಪಿದೆ. ಸಿಯೋಲ್‌ನ ಕೋಸ್ಪಿ ಶೇಕಡಾ 0.1 ರಷ್ಟು ಏರಿಕೆ ಕಂಡು 2,511.70 ಕ್ಕೆ ತಲುಪಿದೆ. ಪ್ರಾಪರ್ಟಿ ಡೆವಲಪರ್ ಸುನಾಕ್ ಚೈನಾ ಹೋಲ್ಡಿಂಗ್‌ನ ಷೇರುಗಳು ಶೇಕಡಾ 2.3 ರಷ್ಟು ಏರಿವೆ. ಮುಂಬೈನ ಸೆನ್ಸೆಕ್ಸ್​ ಮಾರುಕಟ್ಟೆ ಕೂಡ ಲಾಭದತ್ತ ಸಾಗಿದೆ.

ಮುಂದಿನ ವರ್ಷದ (2024) ಆರಂಭದಲ್ಲಿ ಅಮೆರಿಕದ ಆರ್ಥಿಕತೆಯು ತುಸು ಹಿಂಜರಿತಕ್ಕೀಡಾಗುವ ಸಾಧ್ಯತೆ ಇದೆ. ದರ ಕಡಿತದಂತಹ ನಿರ್ಧಾರ ಕೈಗೊಳ್ಳಲಿದೆ ಎಂದು ಡಾಯ್ಚ ಬ್ಯಾಂಕ್ ನಿರೀಕ್ಷಿಸಿದೆ. ವಾಲ್​ಸ್ಟ್ರೀಟ್‌ ಷೇರುಗಳು ಉದ್ಯೋಗ ಮಾರುಕಟ್ಟೆ ಮತ್ತು ನಿಧಾನಗತಿ ಹಣದುಬ್ಬರದಿಂದಾಗಿ ಹಿಂಜರಿತಕ್ಕೀಡಾಗುವುದೇ ಎಂಬುದು ದ್ವಂದ್ವವಾಗಿದೆ. ಕಳೆದ 10 ವರ್ಷಗಳಿಂದ ಅದರ ಖಜಾನೆಯು 4.41 ಶೇಕಡಾ ಪ್ರಗತಿ ಸಾಧಿಸಿದೆ. 2007 ರಿಂದ ಅತ್ಯುನ್ನತ ಮಟ್ಟದಲ್ಲಿ ಏರಿಕೆ ದಾಖಲಿಸಿತ್ತು. ಷೇರುಗಳು ಮತ್ತು ಇತರ ಹೂಡಿಕೆಗಳಿಗೆ ದರ ಇಳಿಕೆ ಮಾಡುವುದರ ಮೂಲಕ ಶೇಕಡಾ 5 ಕ್ಕಿಂತ ಹೆಚ್ಚು ಮಾರುಕಟ್ಟೆಯಲ್ಲಿ ಪ್ರಗತಿ ಸಾಧಿಸಿತ್ತು.

ಕಚ್ಚಾತೈಲ ದರ ಇಳಿಕೆ: ನ್ಯೂಯಾರ್ಕ್ ಮರ್ಕೆಂಟೈಲ್ ಎಕ್ಸ್‌ಚೇಂಜ್‌ನಲ್ಲಿ ಅಮೆರಿಕದ ಬೆಂಚ್‌ಮಾರ್ಕ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 19 ಸೆಂಟ್‌ಗಳಿಂದ 77.58 ಯುಎಸ್​ ಡಾಲರ್​ಗೆ ಇಳಿದಿದೆ. ಮಂಗಳವಾರಕ್ಕೆ ಹೋಲಿಸಿದರೆ (77.77 ) 6 ಸೆಂಟ್‌ಗಳಷ್ಟು ಇಳಿಕೆ ಕಂಡಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 22 ಸೆಂಟ್ಸ್ ಇಳಿದು 82.23 ಯುಎಸ್​ ಡಾಲರ್​ಗೆ ತಲುಪಿದೆ.

ಇದನ್ನೂ ಓದಿ: ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತು ನಿಲ್ಲಿಸುವಂತೆ ಎಲ್ಲಾ ರಾಷ್ಟ್ರಗಳಿಗೆ ಸೌದಿ ಅರೇಬಿಯಾ ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.