ETV Bharat / business

ಅದಾನಿ ಹಿಂಡನ್​ಬರ್ಗ್​ ಕೇಸ್.. ಗುಪ್ತ ಮಾಹಿತಿಯನ್ನು ಸುಪ್ರೀಂಕೋರ್ಟ್​ ಗಮನಕ್ಕೆ ತಾರದ ಸೆಬಿ: ಆರೋಪ - ಅದಾನಿ ಕೇಸ್

ಮಾರುಕಟ್ಟೆ ನಿಯಂತ್ರಕವಾದ ಸೆಬಿ ಅದಾನಿ ಕೇಸ್​ನ ಪ್ರಮುಖ ಅಂಶಗಳನ್ನು ಬಚ್ಚಿಟ್ಟಿದೆ. ಆದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ತನಿಖೆಯ ಸಾರಾಂಶವನ್ನು ಕೋರ್ಟ್​ ಗಮನಕ್ಕೆ ತಂದಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅದಾನಿ ಹಿಂಡನ್​ಬರ್ಗ್​ ಕೇಸ್
ಅದಾನಿ ಹಿಂಡನ್​ಬರ್ಗ್​ ಕೇಸ್
author img

By ETV Bharat Karnataka Team

Published : Sep 11, 2023, 11:04 PM IST

ನವದೆಹಲಿ: ಅದಾನಿ-ಹಿಂಡನ್‌ಬರ್ಗ್‌ ಪ್ರಕರಣದಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಮಾರುಕಟ್ಟೆ ನಿಯಂತ್ರಕವಾದ ಸೆಬಿ ಕೇಸ್​ನ ಪ್ರಮುಖ ಅಂಶಗಳನ್ನು ಬಚ್ಚಿಟ್ಟಿದೆ. ಆದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ತನಿಖೆಯ ಸಾರಾಂಶವನ್ನು ಕೋರ್ಟ್​ ಗಮನಕ್ಕೆ ತಂದಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಅದರಲ್ಲಿ ಈ ಆರೋಪ ಮಾಡಲಾಗಿದೆ. ಅದಾನಿ ಸಮೂಹ ದುಬೈ ಮತ್ತು ಮಾರಿಷಸ್ ಮೂಲದ ಘಟಕಗಳ ಮೂಲಕ ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಜನವರಿ 2014 ರ ಡಿಆರ್‌ಐ ಎಚ್ಚರಿಕೆಯನ್ನು ಸೆಬಿ ಮರೆಮಾಚಿದೆ ಎಂದು ದೂರಲಾಗಿದೆ. 2014 ರಲ್ಲಿ ಯುಎಇ ಮೂಲದ ಅಂಗಸಂಸ್ಥೆಯಿಂದ ಅದಾನಿ ಗ್ರೂಪ್‌ನ ಸಂಸ್ಥೆಗಳು ಉಪಕರಣ ಮತ್ತು ಯಂತ್ರೋಪಕರಣಗಳ ಆಮದಿನಲ್ಲಿ ನಡೆಸಿದ ಅವ್ಯವಹಾರ ಪ್ರಕರಣವನ್ನು ಡಿಆರ್‌ಐ ತನಿಖೆ ನಡೆಸುತ್ತಿದೆ. ಈ ಸಂಬಂಧ ಡಿಆರ್‌ಐ ಮೇ 15, 2014 ರಂದು ಶೋಕಾಸ್ ನೋಟಿಸ್ ಸಹ ನೀಡಿದೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಸೆಬಿ ಈ ಮಹತ್ವದ ಮಾಹಿತಿಯನ್ನು ನ್ಯಾಯಾಲಯದಿಂದ ಮರೆಮಾಚಿರುವುದು ಮತ್ತು ಡಿಆರ್‌ಐ ನೀಡಿದ ನೋಟಿಸ್​ ಬಗ್ಗೆಯೂ ಯಾವುದೇ ತನಿಖೆ ನಡೆಸದಿರುವುದು ಆಘಾತಕಾರಿಯಾಗಿದೆ ಎಂದು ಪಿಐಎಲ್​ ಹೇಳಿದೆ. ಅದಾನಿ ಗ್ರೂಪ್​ನಿಂದ 2,323 ಕೋಟಿ ರೂ.ಗಳ ವಂಚನೆ ಆರೋಪ ಇರುವ ಸಿಡಿ ಮತ್ತು ಡಿಆರ್‌ಐ ತನಿಖೆ ನಡೆಸುತ್ತಿರುವ ಪ್ರಕರಣದ ಕುರಿತು ಎರಡು ಟಿಪ್ಪಣಿಗಳನ್ನು ಒಳಗೊಂಡಿದೆ. ಡಿಆರ್‌ಐನ ಮುಂಬೈ ವಲಯ ಘಟಕದಿಂದ ಹೆಚ್ಚಿನ ದಾಖಲೆಗಳನ್ನು ಪಡೆಯಬಹುದು ಎಂದು ಅದು ಹೇಳಿದೆ.

ಡಿಆರ್‌ಐನ ನೋಟಿಸ್​ನಲ್ಲಿನ ಸತ್ಯವನ್ನು ಸೆಬಿಯು ರಹಸ್ಯವಾಗಿಟ್ಟಿದೆ. ಅಲ್ಲದೇ ಕೋರ್ಟ್​ಗೆ ಸುಳ್ಳು ಮಾಹಿತಿಯನ್ನು ಒದಗಿಸಿದೆ. ಅಂದಿನ ಸೆಬಿ ಅಧ್ಯಕ್ಷರಾದ ಯು.ಕೆ. ಸಿನ್ಹಾ ಅವರು ಡಿಆರ್‌ಐ ನೋಟಿಸ್​ ಮೇಲೆ ಕಾರ್ಯನಿರ್ವಹಿಸುವ ಬದಲು ಅದಾನಿ ಗುಂಪಿನ ಬಗ್ಗೆ ನಡೆಯುತ್ತಿರುವ ತನಿಖೆಗಳನ್ನು ಮುಚ್ಚಿ ಹಾಕಲಾಗಿದೆ ಎಂದು ಹೇಳಳಾಗಿದೆ.

SEBI ಯ 13 ಶಂಕಿತ ವಿದೇಶಿ ಬಂಡವಾಳ ಹೂಡಿಕೆಗಳು/ಸಾಗರೋತ್ತರ ಘಟಕಗಳ ಪಟ್ಟಿಯಲ್ಲಿ ಮಾರಿಷಸ್​ ಮತ್ತು ದುಬೈ ಕಂಪನಿಗಳ ಹೆಸರುಗಳಿವೆ. ಆದರೆ, ಸೆಬಿ ಅದರ ಮಾಲೀಕರು ಅಥವಾ ಷೇರುದಾರರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಆರೋಪಿಸಲಾಗಿದೆ.

ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಸೆಬಿ ನಡೆಸಿದ 24 ತನಿಖೆಗಳಲ್ಲಿ 22 ಅಂತಿಮ ಹಂತಕ್ಕೆ ಬಂದಿವೆ. ಇನ್ನೆರಡು ತನಿಖೆ ಹಂತದಲ್ಲಿವೆ ಎಂದು ಸುಪ್ರೀಂ ಕೋರ್ಟ್‌ಗೆ ವರದಿ ನೀಡಲಾಗಿದೆ. ತನಿಖೆಯಲ್ಲಿರುವ ಕೇಸ್​ ಅದಾನಿ ಕಂಪನಿಗಳ 13 ಸಾಗರೋತ್ತರ ಸಂಸ್ಥೆಗಳನ್ನು ಒಳಗೊಂಡಿವೆ.

ಇದನ್ನೂ ಓದಿ: ಖೋಟಾನೋಟು ಸಾಗಣೆ: ಮಹಿಳೆಗೆ ಅಪರಾಧಿ ಎಂದು ಘೋಷಿಸಿ ನಾಳೆಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿಸಿರುವ ಎನ್ಐಎ ಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.