ETV Bharat / business

60 ಸಾವಿರ ಸೂಚ್ಯಂಕ ದಾಟಿದ ಸೆನ್ಸೆಕ್ಸ್​.. ಸತತ ಏರಿಕೆ ಕಾಣುತ್ತಿರುವ ಷೇರುಪೇಟೆ - Nifty gains points

ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಉತ್ತಮ ಲಾಭ ದಾಖಲಿಸಿದೆ. ಈ ಮೂಲಕ ಅದು 60 ಸಾವಿರ ಅಂಕಗಳನ್ನು ಮತ್ತೆ ದಾಟಿದೆ.

60 ಸಾವಿರ ಸೂಚ್ಯಂಕ ದಾಟಿದ ಸೆನ್ಸೆಕ್ಸ್
60 ಸಾವಿರ ಸೂಚ್ಯಂಕ ದಾಟಿದ ಸೆನ್ಸೆಕ್ಸ್
author img

By

Published : Apr 11, 2023, 12:30 PM IST

ಮುಂಬೈ: ಹೂಡಿಕೆದಾರರು ಹೆಚ್ಚು ಉತ್ಸಾಹ ತೋರಿದ ಕಾರಣ ಮುಂಬೈ ಷೇರುಪೇಟೆ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡಿದೆ. ಸೆನ್ಸೆಕ್ಸ್​ ಮತ್ತು ನಿಫ್ಟಿಗಳೆರಡೂ ಲಾಭದಲ್ಲಿ ವಹಿವಾಟು ನಡೆಸುತ್ತಿವೆ. ಇದೇ ವೇಳೆ ಐಟಿ ಷೇರುಗಳು ಇಳಿಕೆ ಕಂಡರೆ, ಬ್ಯಾಂಕ್​ ಷೇರುಗಳು ಏರಿಕೆ ದಾಖಲಿಸುತ್ತಿವೆ.

ನಾಲ್ಕನೇ ಕ್ವಾರ್ಟರ್​ನಲ್ಲಿ ಗಳಿಕೆಯು ಉತ್ತಮವಾಗಿದ್ದು, ಹೂಡಿಕೆದಾರರು ಷೇರುಗಳ ಮೇಲೆ ಹೆಚ್ಚು ಹಣವನ್ನು ಹೂಡಿಕೆ ಆರಂಭಿಸಿದ್ದಾರೆ. ಇದರಿಂದ ಷೇರು ಸೂಚ್ಯಂಕಗಳು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಜಿಗಿತ ಕಂಡಿವೆ.

ಬಿಎಸ್‌ಇ ಸೆನ್ಸೆಕ್ಸ್ ಬೆಳಗಿನ ವಹಿವಾಟಿನಲ್ಲಿ ಶೇಕಡಾ 0.44 ರಷ್ಟು ಏರಿಕೆ ಕಂಡು 60,107.25 ಅಂಕಗಳಿಗೆ ತಲುಪಿತು. ಎನ್‌ಎಸ್‌ಇ ನಿಫ್ಟಿ ಶೇಕಡಾ 0.45 50 ರಷ್ಟು ಜಿಗಿತದಿಂದ 17,705.55 ಅಂಕ ದಾಖಲಿಸಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಡುಬಂದ ಸಕಾರಾತ್ಮಕ ಬೆಳವಣಿಗೆಗಳು ದೇಶಿಯ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದೆ.

ಇದನ್ನೂ ಓದಿ: ಭಾರತವನ್ನು ದೂಷಿಸುವ ಬದಲು ವಾಸ್ತವ ಅರಿಯಿರಿ; ಪಾಶ್ಚಿಮಾತ್ಯ ಟೀಕಾಕಾರರಿಗೆ ಸಚಿವೆ ಸೀತಾರಾಮನ್​​ ಟಾಂಗ್​

ಬೆಳಗಿನ ವಹಿವಾಟಿನಲ್ಲಿ ಎಲ್ಲಾ ಕ್ಷೇತ್ರದ ಸೂಚ್ಯಂಕಗಳು ವೇಗ ಪಡೆದುಕೊಂಡವು. ಧನಾತ್ಮಕ ವಹಿವಾಟು ಮೂಲಕ ಸಾಗಿವೆ. ಪಿಎಸ್‌ಯು ಬ್ಯಾಂಕ್ ಶೇ.2.29 ರಷ್ಟು ಏರಿಕೆ ಕಂಡಿತು. ಆಟೋ, ಹಣಕಾಸು ಸೇವೆಗಳು ಮತ್ತು ರಿಯಾಲ್ಟಿ ಷೇರುಗಳು ದಲಾಲ್ ಸ್ಟ್ರೀಟ್‌ ಉತ್ತಮ ಲಾಭದತ್ತ ಸಾಗಿದವು.

ನಿಫ್ಟಿ ಸೂಚ್ಯಂಕದಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಅತ್ಯಧಿಕ ಲಾಭ ಪಡೆಯಿತು. ಅದು ಆರಂಭಿಕ ವಹಿವಾಟಿನಲ್ಲಿ ಶೇಕಡಾ 4 ರಷ್ಟು ಏರಿಕೆ ದಾಖಲಿಸಿತು. ಬ್ರೋಕರೇಜ್ ಸಂಸ್ಥೆಯಾದ ನವುಮಾ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್ ನಂತರದ ಹೆಚ್ಚಿನ ಲಾಭ ಪಡೆಯಿತು. ಎಂಎಸ್​ಸಿಐ ತನ್ನ ಷೇರುಗಳ ಏರಿಕೆ ದಾಖಲಿಸಿದರೆ, ಬ್ಯಾಂಕ್‌ನ ಷೇರುಗಳು ಆವೇಗ ಪಡೆದುಕೊಂಡವು. ಬಜಾಜ್ ಆಟೋ, ಎಸ್‌ಬಿಐ, ಅದಾನಿ ಎಂಟರ್‌ಪ್ರೈಸಸ್, ಎಚ್‌ಡಿಎಫ್‌ಸಿ ಲೈಫ್ ಮತ್ತು ಎಸ್‌ಬಿಐ ಲೈಫ್ ಕಂಪನಿಗಳು ಆರಂಭಿಕ ವಹಿವಾಟಿನಲ್ಲಿ ಉತ್ತಮ ಲಾಭದತ್ತ ಜಿಗಿದವು.

ಕಾರ್ಪೋರೇಟ್​ ವಲಯದಲ್ಲಿ ಹೆಚ್ಚಿನ ಲಾಭ ಕಾಣುತ್ತಿರುವ ಕಾರಣ ಹೂಡಿಕೆದಾರರು ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ದೇಶೀಯ ಮಾರುಕಟ್ಟೆಗಳು ಈ ತಿಂಗಳು ಏರಿಕೆ ಗತಿಯತ್ತಲೇ ಸಾಗುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

ಸೋಮವಾರವೂ ಕೂಡ ಉತ್ತಮ ವಹಿವಾಟು: ನಿನ್ನೆ ಸೋಮವಾರವೂ ಕೂಡ ಮುಂಬೈ ಷೇರುಪೇಟೆ ಉತ್ತಮ ವಹಿವಾಟು ನಡೆಸಿ ಹೂಡಿಕೆದಾರರಿಗೆ ಲಾಭ ಮಾಡಿಕೊಟ್ಟಿತ್ತು. ಸೆನ್ಸೆಕ್ಸ್​ 59,900 ಅಂಕಗಳಷ್ಟು ಏರಿಕೆ ಕಂಡಿತ್ತು.

ನಿಫ್ಟಿ 50 ಸೂಚ್ಯಂಕವು 17,630 ಅಂಕಗಳಷ್ಟು ಹೆಚ್ಚಳ ಕಂಡಿತ್ತು. ಟಾಟಾ ಮೋಟಾರ್ಸ್​, ಲಾರ್ಸೆನ್​ ಮತ್ತು ಟೂಬ್ರೊ, ಪವರ್​ಗ್ರಿಡ್​ ಕಾರ್ಪೋರೇಷನ್​ ಆಫ್​ ಇಂಡಿಯಾ ಗರಿಷ್ಠ ಗಳಿಕೆ ಕಂಡಿದ್ದವು. ಬಜಾಜ್​ ಫೈನಾನ್ಸ್​, ಏಷ್ಯನ್​ ಫೈನಾನ್ಸ್​, ಏಷ್ಯನ್​ ಪೇಂಟ್ಸ್​ ಮತ್ತು ಇಂಡಸ್​ಇಂಡ್​ ಬ್ಯಾಂಕ್​ ಹೆಚ್ಚಿನ ನಷ್ಟಕ್ಕೀಡಾಗಿದ್ದವು. ಇದರಿಂದ ಅವುಗಳು ಮಾರುಕಟ್ಟೆ ಸೂಚ್ಯಂಕದಲ್ಲಿ ಕೆಳಹಂತಕ್ಕೆ ಇಳಿಕೆ ಕಂಡಿದ್ದವು.

ಓದಿ: ಭಾರತವನ್ನು ದೂಷಿಸುವ ಬದಲು ವಾಸ್ತವ ಅರಿಯಿರಿ; ಪಾಶ್ಚಿಮಾತ್ಯ ಟೀಕಾಕಾರರಿಗೆ ಸಚಿವೆ ಸೀತಾರಾಮನ್​​ ಟಾಂಗ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.