ಮುಂಬೈ : ದೇಶೀಯ ಇಕ್ವಿಟಿ ಮಾರುಕಟ್ಟೆಯ ಪ್ರಮುಖ ಕಂಪನಿಯ ಷೇರುಗಳು ಸೋಮವಾರ ಬೆಳಗ್ಗೆ ಲಾಭ ಗಳಿಸಿದವು. ಜಾಗತಿಕ ಆರ್ಥಿಕ ಬೆಳವಣಿಗೆಗಳಲ್ಲಿ ಸಕಾರಾತ್ಮಕ ಮುನ್ಸೂಚನೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ನಿರೀಕ್ಷೆಗಿಂತ ಉತ್ತಮವಾದ ಕಾರ್ಪೊರೇಟ್ ಫಲಿತಾಂಶಗಳು ಮತ್ತು ಚಿಲ್ಲರೆ ಹಣದುಬ್ಬರವು 18 ತಿಂಗಳ ಕನಿಷ್ಠ ಮಟ್ಟಕ್ಕೆ ತಗ್ಗಿರುವುದು ವಾರದ ಆರಂಭದಲ್ಲಿ ಷೇರುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ.
ಸೋಮವಾರದ ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 153 ಪಾಯಿಂಟ್ ಏರಿಕೆ ಕಂಡು 62,180.87ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 34 ಪಾಯಿಂಟ್‌ಗಳ ಏರಿಕೆ ಕಂಡು 18,348.80ಕ್ಕೆ ತಲುಪಿದೆ. ಕಾಫಿಡೇ, ಬಿಸಿಜಿ, ಇಂಟೆಲೆಕ್ಟ್ ಮತ್ತು ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಲಾಭ ಗಳಿಸಿದ ಪ್ರಮುಖ ಶೇರುಗಳಾಗಿವೆ. ಡೇಟಾ ಪ್ಯಾಟರ್ನ್, ಡಿಶ್ ಟಿವಿ, ಕಿರ್ಲೋಸ್ಕರ್ ಮತ್ತು ಸೋನಾಟಾ ಸಾಫ್ಟ್‌ವೇರ್ ಕಂಪನಿಯ ಷೇರುಗಳು ಬಿಎಸ್‌ಇಯಲ್ಲಿ ಬೆಳಗಿನ ವಹಿವಾಟಿನ ಸಮಯದಲ್ಲಿ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.
ಏಷ್ಯನ್ ಮಾರುಕಟ್ಟೆಗಳಲ್ಲಿ, ಹಾಂಕಾಂಗ್ ಹಾಂಗ್ ಸೆಂಗ್ 69 ಪಾಯಿಂಟ್‌ಗಳ ಏರಿಕೆ ಕಂಡಿದೆ. ಜಪಾನ್‌ನ ನಿಕ್ಕಿ 112 ಪಾಯಿಂಟ್‌ಗಳನ್ನು ಗಳಿಸಿದೆ, ಚೀನಾದ ಶಾಂಘೈ 10 ಪಾಯಿಂಟ್‌ಗಳನ್ನು ಮತ್ತು ಫಿಲಿಪ್ಪಿನ್ಸ್ ಸ್ಟಾಕ್ ಸೋಮವಾರ 4 ಪಾಯಿಂಟ್‌ಗಳನ್ನು ಕಳೆದುಕೊಂಡಿವೆ. ಅಮೆರಿಕದ ಮಾರುಕಟ್ಟೆಗಳಲ್ಲಿ ಡೌ ಜೋನ್ಸ್ 8.89 ಅಂಕಗಳನ್ನು ಕಳೆದುಕೊಂಡಿತು. ನಾಸ್ಡಾಕ್ 43 ಅಂಕಗಳನ್ನು ಕಳೆದುಕೊಂಡಿತು ಮತ್ತು ಎಸ್ & ಪಿ 500 ಇದು 6 ಅಂಕಗಳನ್ನು ಕಳೆದುಕೊಂಡಿತು.
ಯುರೋಪಿಯನ್ ಮಾರುಕಟ್ಟೆಗಳ ಪೈಕಿ, ಬಿಇಎಲ್, ಸಿಎಸಿ ಮತ್ತು ಆಮ್ಸ್ಟರ್‌ಡ್ಯಾಮ್ ಎಕ್ಸ್‌ಚೇಂಜ್ ಏರಿಕೆಯಲ್ಲಿ ವಹಿವಾಟು ನಡೆಸುತ್ತಿವೆ. ಸೋಮವಾರ ಏಷ್ಯನ್ ಮಾರುಕಟ್ಟೆಗಳು ಪ್ರಾರಂಭವಾದಾಗ ಡಾಯ್ಚ್ ಬೋರ್ಸ್ 79 ಪಾಯಿಂಟ್, ಐಬೆಕ್ಸ್ 35 ಇದು 51 ಪಾಯಿಂಟ್ಗಳು ಮತ್ತು ಮ್ಯಾಡ್ರಿಡ್ 5 ಪಾಯಿಂಟ್‌ಗಳನ್ನು ಗಳಿಸಿತು. ಶುಕ್ರವಾರ S&P BSE ಸೆನ್ಸೆಕ್ಸ್ 123.38 ಪಾಯಿಂಟ್ ಅಥವಾ 0.20 ಶೇಕಡಾ ಏರಿಕೆಯಾಗಿ 62,027.90 ಕ್ಕೆ ತಲುಪಿದೆ. ನಿಫ್ಟಿ 50 ಸೂಚ್ಯಂಕವು 17.80 ಪಾಯಿಂಟ್‌ಗಳನ್ನು ಅಥವಾ 0.1 ಶೇಕಡಾ ಏರಿಕೆಯಾಗಿ 18,314.80 ಕ್ಕೆ ತಲುಪಿದೆ.
ಶುಕ್ರವಾರ ಸಂಜೆ ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಅಂಕಿ - ಅಂಶಗಳು ಪ್ರಕಟಗೊಂಡಿವೆ. ಚಿಲ್ಲರೆ ಹಣದುಬ್ಬರವು ಹಿಂದಿನ ತಿಂಗಳಿನ ಶೇಕಡಾ 5.7 ಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಶೇಕಡಾ 4.7 ಕ್ಕೆ ಇಳಿಕೆಯಾಗಿದೆ. ಸಿರಿಧಾನ್ಯಗಳು, ಉತ್ಪನ್ನಗಳು ಮತ್ತು ಮೊಟ್ಟೆಗಳ ಉಪ ಸೂಚ್ಯಂಕವು ಏಪ್ರಿಲ್‌ನಲ್ಲಿ ಕುಸಿದಿದೆ ಎಂದು ಅಂಕಿ- ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಅಂಕಿ- ಅಂಶಗಳು ಬಹಿರಂಗಪಡಿಸಿವೆ. ಗ್ರಾಮೀಣ ಮತ್ತು ನಗರಗಳಲ್ಲಿ ಹಣದುಬ್ಬರ ಕ್ರಮವಾಗಿ ಶೇ 4.68 ಮತ್ತು ಶೇ 4.85ರಷ್ಟಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ಸಂಜೆ ಭಾರತದ ವಿದೇಶಿ ವಿನಿಮಯ ಸಂಗ್ರಹವು ಮೇ 5 ರಂದು ಕೊನೆಗೊಂಡ ವಾರದಲ್ಲಿ USD 588.780 ಶತಕೋಟಿಯಿಂದ USD 595.976 ಶತಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಆರ್ಬಿಐ ಹಣಕಾಸು ನೀತಿ ಸರಿಯಾದ ಹಾದಿಯಲ್ಲಿದೆ: ಗವರ್ನರ್ ಶಕ್ತಿಕಾಂತ ದಾಸ್