ETV Bharat / business

70 ಸಾವಿರ ದಾಟಿ ದಾಖಲೆ ಬರೆದ ಮುಂಬೈ ಷೇರುಪೇಟೆ ಸೂಚ್ಯಂಕ: 21 ಸಾವಿರ ಅಂಕಗಳಿಸಿದ ನಿಫ್ಟಿ - ಭಾರತೀಯ ರಿಸರ್ವ್​ ಬ್ಯಾಂಕ್

ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 70,000 ಮೈಲಿಗಲ್ಲು ಮುಟ್ಟಿತು. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಕೂಡ ಶರವೇಗದಲ್ಲಿ ಏರಿಕೆಯಾಗಿದ್ದು 21 ಸಾವಿರ ಅಂಕವನ್ನು ದಾಟಿದೆ

ಮುಂಬೈ ಷೇರುಪೇಟೆ ಸೂಚ್ಯಂಕ
ಮುಂಬೈ ಷೇರುಪೇಟೆ ಸೂಚ್ಯಂಕ
author img

By ETV Bharat Karnataka Team

Published : Dec 11, 2023, 4:20 PM IST

ಮುಂಬೈ: ಪಂಚರಾಜ್ಯಗಳ ಚುನಾವಣೆ ಫಲಿತಾಂಶ, ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ನಿರ್ಧಾರಗಳು ಮುಂಬೈ ಷೇರು ಸೂಚ್ಯಂಕದ ಮೇಲೆ ಪರಿಣಾಮ ಬೀರಿವೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ (ಬಿಎಸ್​ಇ) ಭರ್ಜರಿ ಏರಿಕೆ ಕಂಡಿತು. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 70,000 ಮೈಲಿಗಲ್ಲು ಮುಟ್ಟಿತು. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಕೂಡ ಶರವೇಗದಲ್ಲಿ ಏರಿಕೆಯಾಗಿದ್ದು 21 ಸಾವಿರ ಅಂಕವನ್ನು ದಾಟಿತು.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯನ್ನು ಕಂಡ ನಂತರ ಮತ್ತು ರೆಪೋ ದರಗಳನ್ನು ಯಥಾಸ್ಥಿತಿಯಲ್ಲಿಟ್ಟ ನಂತರ ಪ್ರಮುಖ ಸೂಚ್ಯಂಕಗಳು ಗರಿಷ್ಠ ಮಟ್ಟವನ್ನು ತಲುಪಿದ್ದವು. ಷೇರು ಮಾರುಕಟ್ಟೆ ಆರಂಭವಾದ ತಕ್ಷಣವೇ ಭಾರೀ ಏರಿಕೆ ಕಂಡ 30-ಷೇರುಗಳ ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠವಾದ 70,048.90 ಪಾಯಿಂಟ್‌ಗಳನ್ನು ದಾಖಲಿಸಿತು. ನಿಫ್ಟಿ- 50 ದಾಖಲೆಯ 21,019.80 ಪಾಯಿಂಟ್‌ಗಳಿಗೆ ಏರಿತು.

ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬ್‌ಗಳ ಮೇಲೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತದ (FDA) ಪ್ರತಿಕೂಲ ವರದಿಯಿಂದಾಗಿ ಫಾರ್ಮಾ ಷೇರುಗಳು ಕುಸಿದವು. ಇದರಿಂದ ಎರಡೂ ಸೂಚ್ಯಂಕಗಳು ತುಸು ನಷ್ಟಕ್ಕೀಡಾದವು. ಫಾರ್ಮಾ ಮೇಜರ್ ವಿರುದ್ಧ ಎಫ್‌ಡಿಎ ತನ್ನ ಪ್ರತಿಕೂಲ ವರದಿಯನ್ನು ನೀಡಿದ ನಂತರ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್‌ನಲ್ಲಿ ಶೇಕಡಾ 6 ರಷ್ಟು ಕುಸಿತದಿಂದಾಗಿ ಫಾರ್ಮಾ ಷೇರುಗಳು ಶೇಕಡಾ 1 ರಷ್ಟು ಕುಸಿದವು. ನಿಫ್ಟಿ ಷೇರುಗಳು ಕೂಡ ಅಂಕ ನಷ್ಟಕ್ಕೀಡಾದವು. ಸದ್ಯ ಸೆನ್ಸೆಕ್ಸ್​ 69,928 (102.93) ಅಂಕಗಳಿದ್ದರೆ, ನಿಫ್ಟಿ 20997.10 ರಲ್ಲಿ ( 27.7 ಅಂಕ) ವಹಿವಾಟು ನಡೆಸುತ್ತಿದೆ.

ತೈಲ ಮತ್ತು ಅನಿಲ ವಿಭಾಗವೂ ಶೇಕಡಾ 0.75 ರಷ್ಟು ಏರಿಕೆ ದಾಖಲಿಸಿತು. ಬ್ರೆಂಟ್ ಕ್ರೂಡ್ ಫ್ಯೂಚರ್ಸ್‌ನೊಂದಿಗೆ ಕಚ್ಚಾ ತೈಲ ಬೆಲೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಬ್ಯಾರೆಲ್‌ಗೆ ಸುಮಾರು 76.50 ಡಾಲರ್​ಗೆ ಇಳಿದಿದೆ. ಭಾರತವು ತನ್ನ ಕಚ್ಚಾ ತೈಲದ ಅವಶ್ಯಕತೆಯ ಶೇಕಡಾ 80 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುವುದರಿಂದ ಬೆಲೆಗಳ ಕುಸಿತವು ತೈಲ ಕಂಪನಿಗಳು ಮತ್ತು ಆರ್ಥಿಕ ಮೂಲಭೂತ ಅಂಶಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಶೇ.1.6ರಷ್ಟು ಏರಿಕೆ ಕಂಡಿವೆ.

ಲೋಕಸಭೆ ಚುನಾವಣೆಯೊಳಗೆ ಮತ್ತಷ್ಟು ಏರಿಕೆ: ಮುಂದಿನ ವರ್ಷ ನಡೆಯುವ ಲೋಕಸಭೆ ಸಾರ್ವತ್ರಿಕ ಚುನಾವಣೆಗೂ ಮುನ್ನ ಸೆನ್ಸೆಕ್ಸ್ 73,000 ತಲುಪಬಹುದು ಎಂದು ವಿಶ್ಲೇಷಕರು ನಿರೀಕ್ಷಿಸಿದ್ದಾರೆ. ಆದರೆ, ಹೆಚ್ಚಿನ ಮೌಲ್ಯಮಾಪನಗಳು ಹೂಡಿಕೆದಾರರನ್ನು ತಡೆಯಬಹುದು ಎಂದೂ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಆರ್‌ಬಿಐನಿಂದ ಹಣಕಾಸು ನೀತಿ ಪ್ರಕಟ: ರೆಪೊ ದರದಲ್ಲಿ ಯಥಾಸ್ಥಿತಿ, ಜಿಡಿಪಿ ಬೆಳವಣಿಗೆ ಶೇ 7, ಹಣದುಬ್ಬರ ಶೇ 5.4 ಹೆಚ್ಚಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.