ETV Bharat / business

ಸೋಮವಾರದ ಶಾಕ್! ಸೆನ್ಸೆಕ್ಸ್​ 1,456 ಅಂಕ ಕುಸಿತ; ಹೂಡಿಕೆದಾರರಿಗೆ ₹6 ಲಕ್ಷ ಕೋಟಿ ನಷ್ಟ - ಷೇರುಪೇಟೆ ಕುಸಿತದಿಂದ ಹೂಡಿಕೆದಾರರಿಗೆ ನಷ್ಟ

ಮುಂಬೈ ಷೇರುಪೇಟೆ ಇಂದಿನ ವಹಿವಾಟಿನಲ್ಲಿ ಭಾರಿ ಪತನ ಕಂಡಿದೆ.

ಸೋಮವಾರದ ಶಾಕ್.. ಸೆನ್ಸೆಕ್ಸ್​ 1456 ಅಂಕ ಕುಸಿತ

author img

By

Published : Jun 13, 2022, 5:59 PM IST

ಮುಂಬೈ (ಮಹಾರಾಷ್ಟ್ರ): ಅತ್ಯಧಿಕ ಷೇರುಗಳ ಮಾರಾಟದಿಂದ ಮುಂಬೈ ಷೇರು ಮಾರುಕಟ್ಟೆ 1,456 ಪಾಯಿಂಟ್‌ಗಳಷ್ಟು ಕುಸಿತ ಕಂಡಿತು. ಇದು ಒಂದೇ ದಿನದಲ್ಲಿ ಹೂಡಿಕೆದಾರರಿಗೆ 6 ಲಕ್ಷ ಕೋಟಿಗೂ ಅಧಿಕ ನಷ್ಟ ಉಂಟು ಮಾಡಿದೆ.

ಬಿಎಸ್‌ಇ ಸೆನ್ಸೆಕ್ಸ್ 1456.74 ಪಾಯಿಂಟ್ಸ್​(ಶೇ.2.68) ಇಳಿಕೆ ಕಂಡು 52,846.70 ಅಂಕಗಳಿಗೆ ತಲುಪಿ ವಹಿವಾಟು ಮುಗಿಸಿದೆ. ಇಂದು 53,184.61 ಪಾಯಿಂಟ್‌ಗಳೊಂದಿಗೆ ವಹಿವಾಟು ಆರಂಭಿಸಿದ್ದ ಸೆನ್ಸೆಕ್ಸ್​ ಮಧ್ಯಾಹ್ನದ ವೇಳೆಗೆ 1,700 ಅಂಕಗಳಷ್ಟು ಕುಸಿತವಾಗಿತ್ತು. ಬಳಿಕ ಅಲ್ಪ ಚೇತರಿಕೆ ಕಂಡು 1,456 ಅಂಕ ಕಳೆದುಕೊಂಡಿದೆ.

ಇದೇ ಹಾದಿಯಲ್ಲಿ ಸಾಗಿದ ನಿಫ್ಟಿಯೂ ಕೂಡ 427.40 ಪಾಯಿಂಟ್ ಅಥವಾ ಶೇ.2.64 ರಷ್ಟು ಅಂಕ ಕಳೆದುಕೊಂಡು 15,774.40 ಪಾಯಿಂಟ್ಸ್​ನೊಂದಿಗೆ ಇಂದಿನ ದಿನದ ವಹಿವಾಟು ಪೂರ್ಣಗೊಳಿಸಿದೆ. ನಿಫ್ಟಿ ಬೆಳಗಿನ ವೇಳೆ 16,201.80 ಅಂಕಗಳೊಂದಿಗೆ ವಹಿವಾಟು ಆರಂಭಿಸಿತ್ತು.

6 ಲಕ್ಷ ಕೋಟಿ ರೂ ನಷ್ಟ: ಷೇರುಪೇಟೆ ದೊಡ್ಡ ಮಟ್ಟದ ಕುಸಿತದ ಕಾರಣ ಹೂಡಿಕೆದಾರರ ಸಂಪತ್ತಿನಲ್ಲಿ 6 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಇದರಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳು ಭಾರಿ ಹೊಡೆತಕ್ಕೆ ತುತ್ತಾಗಿವೆ.

ಯಾರಿಗೆಲ್ಲ ಪೆಟ್ಟು?: ಬಜಾಜ್ ಫಿನ್‌ಸರ್ವ್ ಶೇಕಡಾ 7 ರಷ್ಟು ಕುಸಿದರೆ, ಬಜಾಜ್ ಫೈನಾನ್ಸ್ ಶೇ.5.44 ರಷ್ಟು, ಇಂಡಸ್‌ಇಂಡ್ ಬ್ಯಾಂಕ್ ಶೇ.5.27 ರಷ್ಟು, ಐಸಿಐಸಿಐ ಬ್ಯಾಂಕ್ ಶೇ.4.46ರಷ್ಟು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.3.44 ಕುಸಿತ ಕಂಡಿವೆ.

ಇದಲ್ಲದೇ, ಟಿಸಿಎಸ್ ಶೇ.4.31, ಟೆಕ್ ಮಹೀಂದ್ರಾ ಶೇ.4.84, ಇನ್ಫೋಸಿಸ್ ಶೇ.3.58, ಇಂಡೆಕ್ಸ್ ಹೆವಿವೇಯ್ಟ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶೇ1.89 ರಷ್ಟು ಕುಸಿದು ಭಾರೀ ನಷ್ಟ ಅನುಭವಿಸಿವೆ. ನೆಸ್ಲೆ ಇಂಡಿಯಾ ಶೇ.0.46 ರಷ್ಟು ಅಲ್ಪ ಲಾಭ ಗಳಿಸಿದೆ.

ಇದನ್ನೂ ಓದಿ: $1=₹78.23! ಸಾರ್ವಕಾಲಿಕ ಕುಸಿತ ಕಂಡ ಭಾರತೀಯ ಕರೆನ್ಸಿ; ಕಾರಣವೇನು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.