ETV Bharat / business

ವಿಮೆ ಜೊತೆ ಹೂಡಿಕೆ ಯೋಜನೆಯೊಂದಿಗೆ ಮಕ್ಕಳ ಭವಿಷ್ಯ ಸುರಕ್ಷಿತವಾಗಿಸಿ! - ಹೂಡಿಕೆ ಜೊತೆಯಲ್ಲಿ ಮಕ್ಕಳ ವಿಮೆ

ಶೈಕ್ಷಣಿಕ ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನಲೆ ಮಕ್ಕಳ ಹುಟ್ಟಿನಿಂದಲೇ ಅವರ 21 ವರ್ಷದವರೆಗಿನ ಶಿಕ್ಷಣದ ವೆಚ್ಚ ಭರಿಸಲು ಆರ್ಥಿಕ ಸುಭದ್ರತೆಯ ಯೋಜನೆ ರೂಪಿಸಬೇಕು.

ವಿಮೆ ಜೊತೆ ಹೂಡಿಕೆ ಯೋಜನೆಯೊಂದಿಗೆ ಮಕ್ಕಳ ಭವಿಷ್ಯವನ್ನು ಸುರಕ್ಷವಾಗಿರಿಸಿ
secure-your-childrens-future-with-an-investment-plan-with-insurance
author img

By

Published : Dec 10, 2022, 12:02 PM IST

ಹೈದರಾಬಾದ್​: ಮಕ್ಕಳ ಭವಿಷ್ಯವನ್ನು ಸುರಕ್ಷವಾಗಿರುವುದು ಅನೇಕ ಪೋಷಕರ ಕನಸು. ಇದರಲ್ಲಿ ವಿಮೆ ಮತ್ತು ಹೂಡಿಕೆ ಜೊತೆಯಲ್ಲಿ ಮಕ್ಕಳ ವಿಮೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ಬುದ್ದಿವಂತಿಕೆಯಿಂದ ಆರಿಸಿದಾಗ, ಮಕ್ಕಳ ಶೈಕ್ಷಣಿಕ ಆರ್ಥಿಕ ಅವಶ್ಯಕತೆ ಪೂರ್ವ ಹಾಗೂ ನಂತರ ಕೂಡ ಇದು ಭರಿಸುವಂತೆ ಕಾಪಾಡಿಕೊಳ್ಳಬಹುದು.

ಶೈಕ್ಷಣಿಕ ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಮಕ್ಕಳ ಹುಟ್ಟಿನಿಂದಲೇ ಅವರ 21 ವರ್ಷದವರೆಗಿನ ಶಿಕ್ಷಣದ ವೆಚ್ಚ ಭರಿಸಲು ಆರ್ಥಿಕ ಸುಭದ್ರತೆ ಯೋಜನೆ ರೂಪಿಸಬೇಕು. ಇಂದಿನ ಶಿಕ್ಷಣ ಸಂಸ್ಥೆಗಳ ವೆಚ್ಚ ಎಷ್ಟು ಎಂಬುದನ್ನು ಅಂದಾಜಿಸಿ ಮುಂದಿನ 15 ವರ್ಷದ ಲೆಕ್ಕಾಚಾರ ನಡೆಸಬೇಕು. ಅದರ ಅನುಸಾರವಾಗಿ ಹಣವನ್ನು ಹೂಡಿಕೆ ಮಾಡಬೇಕು.

ನಮ್ಮ ಹೂಡಿಕೆಗಳಯ ಹೆಚ್ಚಿನ ರಿಟರ್ನ್​ ನೀಡುವಂತೆ ಇರಬೇಕು. ಇಕ್ವಿಟಿ ಮ್ಯೂಚುಯಲ್​ ಫಂಡ್​, ಸ್ಥಿರ ಠೇವಣಿ ಮತ್ತು ವಿಮೆ ಪಾಲಿಸಿ ಅಂತಹವುಗಳಲ್ಲಿ ಇದು ಸಾಧ್ಯ. ಮಕ್ಕಳ ಉನ್ನತ ಶಿಕ್ಷಣಕ್ಕೆ ಪೋಷಕರು ಅವರನ್ನು ವಿದೇಶಕ್ಕೆ ಕಳುಹಿಸುತ್ತಾರೆ. ಈ ಭವಿಷ್ಯದ ಖರ್ಚುವೆಚ್ಚದ ಬಗ್ಗೆ ಕೂಡ ಸಿದ್ದರಾಗಿರಬೇಕು. ಅದರ ಅನುಸಾರ ಆದಾಯ ಬರುವಂತೆ ಹೂಡಿಕೆ ಮಾಡಬೇಕು.

ಈ ಯೋಜನೆಗಳಲ್ಲಿ ಹೂಡಿಕೆ ಉತ್ತಮ: ಹೂಡಿಕೆಗಳು ಧೀರ್ಘಕಾಲವಾಗಿದ್ದಾಗ ಅದು ಆದಾಯ ಮೂಲವಾಗುತ್ತದೆ. ಪಿಪಿಎಫ್​, ಮ್ಯೂಚುಯಲ್​ ಫಂಡ್​, ಷೇರ್​, ಬಂಗಾರ, ರಿಯಲ್​ ಎಸ್ಟೇಟ್​ ನಂತಹ ಹೂಡಿಕೆ ಉತ್ತಮವಾಗಿದೆ. ಮಕ್ಕಳ ವಿಮೆ ಕುಟುಂಬ ಸದಸ್ಯರ ಗಳಿಕೆ ಮತ್ತು ಕುಟುಂಬಸ್ಥರ ಅನುಪಸ್ತಿತಿಯಲ್ಲಿಯೂ ಅವರಿಗೆ ಸಿಗುವಂತೆ ಇರಬೇಕು. ಕಂಪನಿಗಳು ಪ್ರೀಮಿಯಂ ಅನ್ನು ಮನ್ನಾ ಮಾಡುವುದರಿಂದ ವಿಮೆದಾರರ ಮರಣದ ನಂತರವೂ ಮಕ್ಕಳ ಪಾಲಿಸಿಗಳು ಮುಂದುವರೆಯುತ್ತವೆ. ಅದು ಮಕ್ಕಳ ಉನ್ನತ ಶಿಕ್ಷಣ ಮತ್ತು ಇತರ ವೆಚ್ಚಗಳಿಗೆ ಮಾತ್ರ ಪರಿಹಾರವನ್ನು ಬಳಸಲು ಅನುಮತಿಸುತ್ತದೆ ಎಂಬ ಷರತ್ತು ಹೊಂದಿರುತ್ತದೆ.

ಮಕ್ಕಳ ವಿಮೆ ವಿಶೇಷತೆ ಏನು?: ಮಕ್ಕಳ ವಿಮೆ ಪಾಲಿಸಿಯ ಮತ್ತೊಂದು ವೈಶಿಷ್ಟತೆ ಎಂದರೆ ಇದು ಎರಡು ಬಾರಿ ನಿಮಗೆ ಹಣ ನೀಡುತ್ತದೆ. ವಿಮೆದಾರರಿಗೆ ಏನಾದರೂ ಆದಲ್ಲಿ ನಾಮಿನಿಗೆ ಹಣ ನೀಡಲಾಗುವುದು. ಮತ್ತೊಂದು ಪ್ರೀಮಿಯಂಗಳು ಸಂಪೂರ್ಣವಾಗಿ ಭರಿಸಿದ ಬಳಿಕ ವಿಮೆ ಕಂಪನಿ ನೀಡುವುದು. ಇದಾದ ಬಳಿಕವೂ ನಾಮಿನಿಗೆ ಪಾಲಿಸಿ ಮೆಚ್ಯೂರಿಟಿ ಮೌಲ್ಯವನ್ನು ಪಾವತಿಸುತ್ತದೆ. ಉನ್ನತ ವ್ಯಾಸಂಗ, ಅವರ ಮದುವೆ ಇತ್ಯಾದಿ ವೆಚ್ಚಗಳಿಗೆ ಅನುಗುಣವಾಗಿ ಈ ಅವಧಿಗಳನ್ನು ನಿರ್ಧರಿಸಲಾಗುತ್ತದೆ.

ಎಂಡ್ವೊಮೆಂಟ್​ ಯೋಜನೆ ಮತ್ತು ಯೂನಿಟ್​ಗನ್ನು ವಿಮೆ ಪಾಲಿಸಿಗೆ ಜೋಡಿಸುವುದು ಕೂಡ ಆದ್ಯತೆ ನೀಡಲಾಗುವುದು. ಕಡಿಮೆ ಅಪಾಯವನ್ನು ಹೊಂದಲು ಇಚ್ಛಿಸುವವರು ಎಂಡ್ವೊಮೆಂಟ್​ ಯೋಜನೆ ಪರಿಗಣಿಸಬಹುದು. ಅವರಿಗೆ ಬೋನಸ್​ ಮತ್ತು ಲಾಯಲಿಟಿಗಳನ್ನು ಸೇರಿಸಲಾಗುವುದು. ಇದರ ರಿಟರ್ನ್​ ಶೇ 6ರಷ್ಟಿರುತ್ತದೆ. ಯುಎಲ್​ಐಪಿ ಹೂಡಿಕೆಗಳು ಹೆಚ್ಚಾಗಿ ಈಕ್ವಿಟಿಗಳಲ್ಲಿವೆ. ಹತ್ತು ವರ್ಷಗಳ ನಂತರ ಮಾತ್ರ ಮಕ್ಕಳಿಗೆ ಹಣದ ಅವಶ್ಯಕತೆ ಇದ್ದಾಗ ಅದನ್ನು ಆಯ್ಕೆ ಮಾಡಬಹುದು.

ವಾರ್ಷಿಕ ಆದಾಯದ 10-12 ಪಟ್ಟು ಜೀವವಿಮೆ ಶಿಫಾರಸು ಮಾಡುತ್ತಾರೆ. ಕೇವಲ ವಿಮಾ ಪಾಲಿಸಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅನಿರೀಕ್ಷಿತ ಸಂದರ್ಭಗಳಲ್ಲಿ ಮಾತ್ರ ಆರ್ಥಿಕ ರಕ್ಷಣೆ ನೀಡುವಂತಹ, ಆದಾಯದ ಶೇಕಡ 15-20ರಷ್ಟನ್ನು ಮಕ್ಕಳ ಭವಿಷ್ಯದ ಅಗತ್ಯಗಳಿಗಾಗಿ ಹೂಡಿಕೆ ಮಾಡಬೇಕು. ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಟರ್ಮ್ ಪಾಲಿಸಿಗಳು ಮತ್ತು ಮ್ಯೂಚುವಲ್ ಫಂಡ್‌ಗಳನ್ನು ಜಂಟಿಯಾಗಿ ತೆಗೆದುಕೊಳ್ಳಬೇಕು.

ಇದನ್ನೂ ಓದಿ: ಮ್ಯೂಚುವಲ್​​ ಫಂಡ್​​ಗ​ಳ ಹೂಡಿಕೆಗಳಲ್ಲಿ ಗಣನೀಯ ಏರಿಕೆ... ಉಜ್ವಲ ಭವಿಷ್ಯದ ಸಂಕೇತ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.