ETV Bharat / business

ಸೈರಸ್​ ಮಿಸ್ತ್ರಿಗೆ ಮತ್ತೆ ಹಿನ್ನಡೆ.. ಆದೇಶ ಮರುಪರಿಶೀಲನಾ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್​ - ವಜಾ ಮಾಡಿದ್ದ ಆದೇಶದ ವಿರುದ್ಧ ಅರ್ಜಿ

ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸ್ಥಾನದಿಂದ ಸೈರಸ್​ ಮಿಸ್ತ್ರಿ ಅವರನ್ನು ವಜಾ ಮಾಡಿದ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದೆ.

sc-dismisses-plea-to-review-d
ಸೈರಸ್​ ಮಿಸ್ತ್ರಿಗೆ ಮತ್ತೆ ಹಿನ್ನಡೆ
author img

By

Published : May 19, 2022, 3:23 PM IST

ನವದೆಹಲಿ: ಟಾಟಾ ಸನ್ಸ್‌ನ ಕಾರ್ಯಕಾರಿ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕಿದ ಟಾಟಾ ಸಮೂಹದ ನಿರ್ಧಾರವನ್ನು ಎತ್ತಿಹಿಡಿದ 2021ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಶಪೂರ್ಜಿ ಪಲ್ಲೊಂಜಿ ಗ್ರೂಪ್​​ (ಎಸ್‌ಪಿ ಗ್ರೂಪ್​) ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ. ಈ ಮೂಲಕ ಮತ್ತೆ ಟಾಟಾ ಸಮೂಹದ ಅಧ್ಯಕ್ಷರಾಗಲು ಬಯಸಿದ ಸೈರಸ್​ ಮಿಸ್ತ್ರಿಗೆ ಭಾರಿ ಹಿನ್ನಡೆ ಉಂಟಾಗಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ಮಾರ್ಚ್ 2021ರ ತೀರ್ಪಿನಲ್ಲಿ ಸೈರಸ್ ಮಿಸ್ತ್ರಿ ವಿರುದ್ಧ ಮಾಡಿದ ಕೆಲವು ಟೀಕೆಗಳನ್ನು ಅಳಿಸಿ ಹಾಕಲು ಆದೇಶಿಸಿದೆ.

100 ಬಿಲಿಯನ್​ ಡಾಲರ್​ಗೂ ಹೆಚ್ಚು ಮೌಲ್ಯದ ಕಂಪನಿಗೆ ಸೈರಸ್​ ಮಿಸ್ತ್ರಿ ಅವರನ್ನು ಮತ್ತೆ ನೇಮಕ ಮಾಡಬೇಕು ಎಂದು ಎನ್​ಸಿಎಲ್​ಎಟಿ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್​ ತಡೆಹಿಡಿದಿತ್ತು. ಈ ಆದೇಶದ ವಿರುದ್ಧ ಶಪೂರ್ಜಿ ಪಲ್ಲೊಂಜಿ ಗ್ರೂಪ್​​ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಇದೀಗ ಆ ಅರ್ಜಿಯನ್ನೂ ಕೋರ್ಟ್​ ವಜಾ ಮಾಡಿದೆ.

ಮಿಸ್ತ್ರಿ ಅವರು 2012 ರಲ್ಲಿ ರತನ್ ಟಾಟಾ ಅವರ ನಂತರ ಟಿಎಸ್​ಪಿಎಲ್​ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆದರೆ, ನಾಲ್ಕು ವರ್ಷಗಳ ನಂತರ ಅವರನ್ನು ಪದಚ್ಯುತಗೊಳಿಸಲಾಯಿತು.

ಓದಿ: ನೈರುತ್ಯ ರೈಲ್ವೆಯಿಂದ ಮತ್ತೊಂದು ಸಾಧನೆ: ಮೊದಲ ಬಾರಿಗೆ ರೈಲಿನಲ್ಲಿ 32 ಬಸ್​ಗಳ ಸಾಗಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.