ETV Bharat / business

ಡಾಲರ್​ ಎದುರು ಸೊರಗಿದ ರೂಪಾಯಿ.. 80ರ ಗಡಿಯಲ್ಲಿ ಭಾರತದ ಕರೆನ್ಸಿ - ರುಪಾಯಿ ಮುಂದೆ ರೂಪಾಯಿ ಪ್ರಾಬಲ್ಯ

ಡಾಲರ್​ ಎದುರು ಸತತವಾಗಿ ಸೊರಗುತ್ತಿರುವ ರೂಪಾಯಿ- ಇಂದು ಮತ್ತೆ 3 ಪೈಸೆ ಇಳಿದು 79.62 ರಲ್ಲಿ ಕೊನೆ- ಇದು ಹೀಗೇ ಮುಂದುವರಿದಲ್ಲಿ ಶೀಘ್ರ 80 ರೂಪಾಯಿಗೆ ಕುಸಿತ ಸಾಧ್ಯತೆ.

ಡಾಲರ್​ ಎದುರು ಸೊರಗಿದ ರೂಪಾಯಿ
ಡಾಲರ್​ ಎದುರು ಸೊರಗಿದ ರೂಪಾಯಿ
author img

By

Published : Jul 13, 2022, 8:57 PM IST

ಮುಂಬೈ (ಮಹಾರಾಷ್ಟ್ರ): ಜಾಗತಿಕ ಮಾರುಕಟ್ಟೆಗಳಲ್ಲಿ ಡಾಲರ್​ ಪ್ರಾಬಲ್ಯ ಮತ್ತು ಭಾರತದ ದೇಶೀಯ ಷೇರು ಮಾರುಕಟ್ಟೆ ನಷ್ಟದ ಕಾರಣ ಡಾಲರ್​ ಎದುರು ರೂಪಾಯಿ ಮತ್ತಷ್ಟು ಕುಸಿತ ಕಂಡಿದೆ. ಇಂದು ಅದು ಮತ್ತೂ 3 ಪೈಸೆ ಕುಸಿದು ಸಾರ್ವಕಾಲಿಕ 79.62 ಕ್ಕೆ ಇಳಿದು ಕನಿಷ್ಠ ದರ ದಾಖಲಿಸಿದೆ.

ದಿನದ ಆರಂಭದಲ್ಲಿ ಡಾಲರ್​ ಎದುರು 79.55 ರಲ್ಲಿ ವಹಿವಾಟು ಆರಂಭಿಸಿದ ರೂಪಾಯಿ ಬಳಿಕ ಅದು ಏರಿಳಿತ ಕಂಡು ಗರಿಷ್ಠ 79.53 ಕ್ಕೆ ತಲುಪಿ ಮತ್ತೆ ಅದು ಕನಿಷ್ಠ ಮಟ್ಟ ಅಂದರೆ 79.68 ಕ್ಕೆ ಇಳಿಕೆ ಕಂಡಿತು. ದಿನದಾಂತ್ಯಕ್ಕೆ ಅದು 79.62 ರಲ್ಲಿ ಸ್ಥಿರಗೊಂಡಿತು.

ಇನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 372.46 ಪಾಯಿಂಟ್‌ ಕಳೆದುಕೊಂಡು 53,514.15 ಕ್ಕೆ ಕೊನೆಗೊಂಡರೆ, ಎನ್‌ಎಸ್‌ಇ ನಿಫ್ಟಿ 91.65 ಪಾಯಿಂಟ್ ನಷ್ಟವಾಗಿ 15,966.65 ಕ್ಕೆ ವಹಿವಾಟು ಮುಗಿಸಿತು.

ಓದಿ: 115 ರಿಂದ 96 ಡಾಲರ್​ಗೆ ಇಳಿದ ಕಚ್ಚಾ ತೈಲ ದರ.. ಮೂರು ತಿಂಗಳ ಕನಿಷ್ಠ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.