ನವದೆಹಲಿ: 2022 ರ ಸ್ಪೆಕ್ಟ್ರಮ್ ಹರಾಜು ಕಂತಿನ ಮೊತ್ತವಾಗಿ ವೊಡಾಫೋನ್ ಐಡಿಯಾ ದೂರಸಂಪರ್ಕ ಇಲಾಖೆಗೆ 1,701 ಕೋಟಿ ರೂ.ಗಳನ್ನು ಪಾವತಿಸಿದೆ. ಜೂನ್ 15, 2022 ರ ಅರ್ಜಿಗಳನ್ನು ಆಹ್ವಾನಿಸುವ ಸೂಚನೆಯ ನಿಯಮಗಳಿಗೆ ಅನುಗುಣವಾಗಿ ಈ ಪಾವತಿ ಮಾಡಲಾಗಿದೆ ಎಂದು ವೊಡಾಫೋನ್ ಐಡಿಯಾ ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ.
ಕಂಪನಿಗೆ ತನ್ನ ಮುಂಬರುವ ಪಾವತಿ ಬಾಧ್ಯತೆಗಳನ್ನು ಪೂರೈಸಲು ಯಾವುದೇ ನಿಧಿಯ ಅಗತ್ಯವಿದ್ದರೆ, 2,000 ಕೋಟಿ ರೂ.ಗಳವರೆಗೆ ನೇರ ಅಥವಾ ಪರೋಕ್ಷ ಆರ್ಥಿಕ ಬೆಂಬಲ ನೀಡಲು ಪ್ರವರ್ತಕ ಸಮೂಹವೊಂದು ಮುಂದೆ ಬಂದಿದೆ ಎಂದು ಆಗಸ್ಟ್ 14 ರಂದು ತನ್ನ ಹಿಂದಿನ ಫೈಲಿಂಗ್ನಲ್ಲಿ ವೊಡಾಫೋನ್ ಐಡಿಯಾ ತಿಳಿಸಿತ್ತು.
ಆಗಸ್ಟ್ 24 ರಂದು, ಕೇರ್ ರೇಟಿಂಗ್ಸ್ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ನ ದೀರ್ಘಕಾಲೀನ ಬ್ಯಾಂಕ್ ಸಾಲಗಳಿಗೆ ನಿಗದಿಪಡಿಸಿದ ದೃಷ್ಟಿಕೋನವನ್ನು 'ಸಕಾರಾತ್ಮಕ' ದಿಂದ 'ಸ್ಥಿರ' ಕ್ಕೆ ಪರಿಷ್ಕರಿಸಿದೆ. ಹೂಡಿಕೆದಾರರು ಮತ್ತು ಹಣಕಾಸು ಸಂಸ್ಥೆಗಳಿಂದ ನಿಧಿ ಸಂಗ್ರಹಣೆಯಲ್ಲಿ ವಿಳಂಬವಾಗಿದೆ ಎಂದು ರೇಟಿಂಗ್ ಕಂಪನಿ ತಿಳಿಸಿತ್ತು.
ಹೊಸ ಪ್ಲಾನ್ ಪರಿಚಯಿಸಿದ ವೊಡಾಫೋನ್: ವೊಡಾಫೋನ್ ಐಡಿಯಾ ಇತ್ತೀಚೆಗೆ ಕೆಲ ಕೈಗೆಟುಕುವ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಇವು ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯಗಳನ್ನು ಒಳಗೊಂಡಿವೆ. ವೊಡಾಫೋನ್ ಐಡಿಯಾ 368, 369 ಮತ್ತು 296 ರೂ.ಗಳ ಪ್ರಿಪೇಯ್ಡ್ ಯೋಜನೆಗಳನ್ನು ತಂದಿದೆ.
ವೊಡಾಫೋನ್ ಐಡಿಯಾ 296 ರುಪಾಯಿ ಪ್ಲಾನ್: ವೊಡಾಫೋನ್ ಐಡಿಯಾದ ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ಕಾಲ್, ದಿನಕ್ಕೆ 100 ಎಸ್ಎಂಎಸ್ ಮತ್ತು 25 ಜಿಬಿ ಡೇಟಾ ಸಿಗುತ್ತದೆ. ಈ ಯೋಜನೆಯಲ್ಲಿ ವಿ ಮೂವೀಸ್ ಮತ್ತು ಟಿವಿ ಕ್ಲಾಸಿಕ್ ಗಳನು ಉಚಿತವಾಗಿ ಬಳಸಬಹುದು. ನೀವು ದಿನವಿಡೀ ಸೀಮಿತ ಇಂಟರ್ನೆಟ್ ಬಳಸುವವರಾಗಿದ್ದರೆ, ಈ ಪ್ಲಾನ್ ಬಗ್ಗೆ ನೀವು ಯೋಚಿಸಬಹುದು. ಈ ಯೋಜನೆಯ ವ್ಯಾಲಿಡಿಟಿ 30 ದಿನಗಳು.
ವೊಡಾಫೋನ್ ಐಡಿಯಾ 368 ರುಪಾಯಿ ಪ್ಲಾನ್: ಈ ಯೋಜನೆಯು 2 ಜಿಬಿ ದೈನಂದಿನ ಡೇಟಾ, ದಿನಕ್ಕೆ 100 ಎಸ್ಎಂಎಸ್, ಅನಿಯಮಿತ ವಾಯ್ಸ್ ಕಾಲ್ ಮತ್ತು ಒಟಿಟಿ ಪ್ರಯೋಜನಗಳನ್ನು ಹೊಂದಿದೆ. ಈ ಯೋಜನೆಯಲ್ಲಿ ಬಳಕೆದಾರರು ಸನ್ ಎನ್ ಎಕ್ಸ್ ಟಿ ಟಿವಿ + ಮೊಬೈಲ್ ಮತ್ತು ವಿ ಮೂವೀಸ್ ಮತ್ತು ಟಿವಿ ವಿಐಪಿ ಪಡೆಯುತ್ತಾರೆ. ಈ ಯೋಜನೆಯ ವ್ಯಾಲಿಡಿಟಿ 30 ದಿನಗಳು.
ವೊಡಾಫೋನ್ ಐಡಿಯಾ 369 ರುಪಾಯಿ ಪ್ಲಾನ್: ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕಾಲ್, ದಿನಕ್ಕೆ 100 ಎಸ್ಎಂಎಸ್ ಮತ್ತು 2 ಜಿಬಿ ದೈನಂದಿನ ಡೇಟಾ ಸಿಗುತ್ತದೆ. ವಿ ಹೀರೋ ಅನ್ಲಿಮಿಟೆಡ್ ಪ್ರಯೋಜನಗಳ ಜೊತೆಗೆ ಸೋನಿಲೈವ್ ಮೊಬೈಲ್, ವಿ ಮೂವೀಸ್ ಮತ್ತು ಟಿವಿ ವಿಐಪಿಗಳನ್ನು ಉಚಿತವಾಗಿ ಬಳಸಬಹುದು.
ಇದನ್ನೂ ಓದಿ : OTTಗಳು ಟೆಲಿಕಾಂ ಕಂಪನಿಗಳಿಗೆ ಡೇಟಾ ಟ್ರಾಫಿಕ್ ಶುಲ್ಕ ಪಾವತಿಸಲಿ: ಟೆಲಿಕಾಂ ಕಂಪನಿಗಳ ಬೇಡಿಕೆ