ETV Bharat / business

ಡ್ರಗ್​ ಸೇವನೆ: ಆರೋಪ ಅಲ್ಲಗಳೆದ ಎಲಾನ್ ಮಸ್ಕ್‌ - ಟೆಸ್ಲಾ ಸಂಸ್ಥಾಪಕ ಮಸ್ಕ್

ಎಲಾನ್​ ಮಸ್ಕ್ ವಿರುದ್ಧ ಮತ್ತೆ​ ಡ್ರಗ್ಸ್​ ಸೇವನೆ ಆರೋಪ ಕೇಳಿ ಬಂದಿದೆ. ಆದರೆ, ಇದನ್ನು ಟೆಸ್ಲಾ ಸಂಸ್ಥಾಪಕ ತಳ್ಳಿ ಹಾಕಿದ್ದಾರೆ.

Report says Elon Musks alleged drug use
Report says Elon Musks alleged drug use
author img

By ETV Bharat Karnataka Team

Published : Jan 8, 2024, 2:04 PM IST

ಸ್ಯಾನ್​ ಫ್ರಾನ್ಸಿಸ್ಕೋ: ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಮತ್ತೊಮ್ಮೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್​ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ. ಈ ಆರೋಪ ಟೆಸ್ಲಾ ಮತ್ತು ಸ್ಪೇಸ್​​ ಎಕ್ಸ್​ ಕಾರ್ಯದರ್ಶಿ ಮತ್ತು ಮಂಡಳಿ ಸದಸ್ಯರನ್ನು ಚಿಂತೆಗೀಡು ಮಾಡಿದೆ. ವರದಿಗಳ ಪ್ರಕಾರ, ಮಸ್ಕ್ ಖಾಸಗಿ ಪಾರ್ಟ್​​ಯಲ್ಲಿ ಎಲ್​ಎಸ್​ಡಿ, ಕೊಕೈನ್​, ಸೈಕೆಡೆಲಿಕ್ ಅಣಬೆಗಳ ಸೇವನೆ ಮಾಡಿದ್ದಾರೆ. ಇದು ಅವರ ಆರೋಗ್ಯ ಮತ್ತು ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.

ವಾಲ್​ ಸ್ಟ್ರೀಟ್​ ಜರ್ನಲ್​ನ ಹೊಸ ವರದಿ ಅನುಸಾರ, ಎಲಾನ್​ ಮಸ್ಕ್​ ಕೆಟಮೈನ್​ ಸೇವಿಸುತ್ತಿರುವುದಾಗಿ ಅವರ ಸ್ನೇಹಿತರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಸ್ಕ್​ ಡ್ರಗ್​ ಬಳಕೆ ಮತ್ತು ನಡವಳಿಕೆಯಲ್ಲಿನ ಬದಲಾವಣೆಗಳು ಬೋರ್ಡ್​ ಸದಸ್ಯರ ತಲೆಬಿಸಿ ಹೆಚ್ಚಿಸಿದೆ.

ವಾಲ್​ ಸ್ಟ್ರೀಟ್​ ಜರ್ನಲ್​ಗೆ ಈ ಕುರಿತು ಮಾತನಾಡಿರುವ ಮಸ್ಕ್​ ಅಟರ್ನಿ ಅಲೆಕ್ಸ್​ ಸ್ಪಿರೊ, ನಿಯಮಿತವಾಗಿ ಮತ್ತು ಯಾದೃಚ್ಚಿಕವಾಗಿ ಸ್ಪೇಸ್​ ಎಕ್ಸ್​ನಲ್ಲಿ ಡ್ರಗ್​ ಪರೀಕ್ಷೆ ನಡೆಸಲಾಗುತ್ತಿದೆ. ಇದೊಂದು ಸುಳ್ಳು ಆರೋಪ ಎಂದಿದ್ದಾರೆ.

2018ರಲ್ಲಿ ಮಸ್ಕ್​ ಕಾಮಿಡಿಯನ್​ ಜೊ ರೊಗಾನ್​ ಪೊಡಾಕಾಸ್ಟ್​​ನಲ್ಲಿ ಸಾರ್ವಜನಿಕವಾಗಿ, ಧೂಮಪಾನ, ಗಾಂಜಾ ಹಾಗು ವಿಸ್ಕಿ ಸೇವನೆ ಮಾಡಿದ್ದರು. ಇದಾದ ಬಳಿಕ ಫೆಡರಲ್ ಭದ್ರತಾ ಕ್ಲಿಯರೆನ್ಸ್ ಪರಿಶೀಲನೆಗೆ ಮುಂದಾಗಿದ್ದರು ಎಂದು ಪೆಂಟಗನ್​ ವರದಿ ಮಾಡಿತು. ಈ ಸಂಬಂಧ ಹಲವು ಬಾರಿ ಪರೀಕ್ಷೆ ಕೂಡ ನಡೆಸಲಾಯಿತು.

ಈ ತನಿಖೆಯ ಬಳಿಕ ಪ್ರತಿಕ್ರಿಯಿಸಿದ್ದ ಮಸ್ಕ್​, ರೊಗಾನ್​ ಜೊತೆಗೆ ಫವ್​ ಸೇವನೆಯನ್ನು ನಾನು ಒಪ್ಪಿಕೊಂಡಿದ್ದೇನೆ. ನಾಸಾ ಮನವಿ ಮೇರೆಗೆ 3 ವರ್ಷ ಡ್ರಗ್ಸ್​​ನ ಯಾದೃಚ್ಚಿಚ್ಛಿಕ ಪರೀಕ್ಷೆಗೆ ಒಳಗಾದೆ. ಈ ವೇಳೆ ಸಣ್ಣ ಪ್ರಮಾಣದ ಆಲ್ಕೋಹಾಲ್​ ಮತ್ತು ಯಾವುದೇ ಡ್ರಗ್ಸ್​​ ಅನ್ನು ಅವರಿಗೆ ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದರು. (ಐಎಎನ್​ಎಸ್​)

ಇದನ್ನೂ ಓದಿ: ಚಂದ್ರ, ಮಂಗಳನ ಮೇಲೆ ವಾಸಿಸುವ ಸಮಯವಿದು; ಎಲೋನ್ ಮಸ್ಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.