ನವದೆಹಲಿ: ದೇಶದ ಅತಿದೊಡ್ಡ ಕೈಗಾರಿಕಾ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ಸಾಮಾನ್ಯ ಸಭೆ ಎಜಿಎಂ ಇಂದು ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಭೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ 45 ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಧ್ಯಕ್ಷ ಮುಖೇಶ್ ಅಂಬಾನಿ ಮಾತನಾಡಲಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ಸಭೆಯಲ್ಲಿ, ಪ್ರತಿವರ್ಷದ ನಿರೀಕ್ಷೆಗಳೇನು ಎಂಬುದು ಗೊತ್ತಾಗಲಿದೆ. ಕೆಲವು ಮಹತ್ವದ ಯೋಜನೆಗಳು ಅಥವಾ ವ್ಯವಹಾರದ ಪ್ರಕಟಣೆ ಮಾಡುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ಸಭೆ ಬಗ್ಗೆ ಹೂಡಿಕೆದಾರರು ಕುತೂಹಲದಿಂದ ಕಾಯುತ್ತಿದ್ದಾರೆ.
5G ಆರಂಭದ ಹಿನ್ನೆಲೆಯಲ್ಲಿ ರಿಲಯನ್ಸ್ ಜಿಯೋ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದರ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಇದಲ್ಲದೇ ರಿಲಯನ್ಸ್ ಜಿಯೋ, ರಿಲಯನ್ಸ್ ರೀಟೇಲ್ ನ ಐಪಿಒ ಬಗ್ಗೆಯೂ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಇನ್ನೂ ವಿಶೇಷ ಎಂದರೆ ಮುಕೇಶ್ ಅಂಬಾನಿ ಅವರು ವ್ಯವಹಾರಗಳ ಹೊಣೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕುರಿತು ಯಾವುದೇ ಘೋಷಣೆ ಮಾಡುತ್ತಾರೆಯೇ? ಎಂಬ ಬಗ್ಗೆ ಹೂಡಿಕೆದಾರರು ಕುತೂಹಲ ಭರಿತರಾಗಿದ್ದಾರೆ.
ಎಜಿಎಂನ ವಿಶೇಷ ಪ್ರಸಾರವಾಗಲಿದೆ: ರಿಲಯನ್ಸ್ ಇಂಡಸ್ಟ್ರೀಸ್‌ನ 45 ನೇ ಎಜಿಎಂ ಸಾಮಾಜಿಕ ಮಾಧ್ಯಮಗಳ ಮೂಲಕ ವರ್ಚುವಲ್ ರಿಯಾಲಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗಲಿದೆ.
ಇದನ್ನು ಓದಿ:ಗುಜರಾತ್ನಲ್ಲಿ 7,300 ಕೋಟಿ ವೆಚ್ಚದ ಸುಜುಕಿ ಇವಿ ಬ್ಯಾಟರಿ ಘಟಕಕ್ಕೆ ಮೋದಿ ಶಂಕುಸ್ಥಾಪನೆ